ಸ್ಥಳೀಯ ಸುದ್ದಿಗಳು

ಸಚಿವನಾದರೆ ಲೋಕಸಭೆ ಚುನಾವಣೆ ಸ್ಪರ್ಧಿಸಬಾರದಾ? ಸಚಿವ ರಾಜಣ್ಣ

ಸುದ್ದಿಲೈವ್/ಶಿವಮೊಗ್ಗ.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು.ಸಹಕಾರ ಕ್ಷೇತ್ರ ರಾಜಕೀಯ ಹೊರತಾಗಿರಬೇಕು. ಸಹಕಾರ ಕ್ಷೇತ್ರದಲ್ಲಿ ಇತ್ತೀಚೆಗೆ ರಾಜಕೀಯ ಪ್ರವೇಶ ಆಗುತ್ತಿರುವ ಬಗ್ಗೆ ಶಾಸಕ ಜಿಟಿ ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಮಾಧ್ಯಮಗಳ ಜೊತೆ ಮಾತನಾಡಿ ಸಹಕಾರಿ ಕ್ಷೇತ್ರವನ್ನ ಮಾಜಿ ಪ್ರಧಾನಿ ಜವಾಹಾರ್ ಲಾಲ್ ನೆಹರೂ ಅವರ ಹುಟ್ಟುಹಬ್ಬದ ದಿನ ಆಚರಿಸಲಾಗುತ್ತದೆ. ನೆಹರೂ ಅವರು ಸಹಕಾರು ಕ್ಷೇತ್ರವನ್ನ ರಾಜಕೀಯ ಹೊರತು ಪಡಿಸಿ ಬೆಳೆಸಿದ್ದರು. ಇವತ್ತು ಸಹಕಾರಿ ಕ್ಷೇತ್ರದಲ್ಲೂ  ರಾಜಕೀಯ ಪ್ರವೇಶಿಸಿದೆ.  ದೂರವಿಡಬೇಕು ಎಂದು ಕರೆ ನೀಡಿದರು.

ಮಧು ಬಂಗಾರಪ್ಪ

ಗದಗ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಶೂ ಬದಲಿಗೆ ಚಪ್ಪಲಿ ಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ತಪ್ಪು ನಡೆದಿದ್ದರೆ ಕಾನೊನು ಕ್ರಮ ಕೈಗೊಳ್ಳುತ್ತೇನೆ ಎಂದರು.

ಮೊಟ್ಟೆ ಮತ್ತು ಶೂ ವಿತರಣೆ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ರು ಕ್ರಮ ಗ್ಯಾರಂಟಿ. ಬರಗಾಲದಲ್ಲಿ ರೈತರ ಸಾಲ‌ ಮನ್ನಾ ವಿಚಾರದ ಬಗ್ಗೆನೂ ಮಾತನಾಡಿದ ಸವಿವರು. ಈ ಬಗ್ಗೆ ಈಗಲೇ ಚಿಂತನೆ ಮಾಡುವ ಅಗತ್ಯ ಇಲ್ಲ, ಮುಂದೆ ನೋಡೋಣ ಎಂದರು.

ಮಲೆನಾಡಿನಲ್ಲಿ ಕಾಡಾನೆ ಹಾವಳಿ ವಿಚಾರದ ಬಗ್ಗೆ ಅರಣ್ಯ ಇಲಾಖೆಗೆ  ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಶಿವಮೊಗ್ಗದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ.

ಸಹಕಾರ ಸಪ್ತಾಹದಲ್ಲಿ ಎಲ್ಲಾ ಸಹಕಾರಿಗಳು ಸೇರಿ ಆಚರಣೆ ‌ಮಾಡಬೇಕು.ಸಹಕಾರ ರಂಗದಲ್ಲಿ ರಾಜಕಾರಣ ಇರಬಾರದು ಎಂದರು.

ಲೋಕಸಭಾ ಚುನಾವಣೆಯಲ್ಲಿ ರಾಜಣ್ಣ  ನಾನು ಸ್ಪರ್ಧೆ ಮಾಡಬೇಕು ಎಂಬ ಆಕಾಂಕ್ಷೆ ಹೊಂದಿದ್ದೇನೆ.ಹೈಕಮಾಂಡ್ ಹೇಳಿದರೆ ಸ್ಪರ್ಧೆ ಮಾಡ್ತೇನೆ. ಮಂತ್ರಿ ಆದವರು ಯಾಕೆ ಸ್ಪರ್ಧೆ ಎಂಬ ಮಾಧ್ಯಮದ ಪ್ರಶ್ನೆಗೆ ಮರುಪ್ರಶ್ನಿಸಿದ ಅವರು  ಸ್ಪರ್ಧೆ ಮಾಡಬಾರದಾ? ಎಂದು ಕೇಳಿದರು.

ನಾನೇ ಸ್ಪರ್ಧೆ ಮಾಡುವ ಆಕಾಂಕ್ಷೆ ಹೊಂದಿದ್ದೇನೆ. ಈ ಬಗ್ಗೆ ಹೈಕಮಾಂಡ್ ಬಳಿ ಹೇಳಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ನನ್ನ ಸ್ವ ಇಚ್ಛೆ ಎಂದರು.

ಇದನ್ನೂ ಓದಿ-https://suddilive.in/archives/3038

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373