ದಸರಾ ಹಬ್ಬಕ್ಕೆ ಕೆಎಸ್ ಆರ್ ಟಿ ಸಿ ಬಸ್ ಗಳ ಸಂಖ್ಯೆ ಹೆಚ್ಚಳ-ಶೇ.20 ರಷ್ಟು ಪ್ರಯಾಣ ದರವೂ ಹೆಚ್ಚಳ-ಶಿವಮೊಗ್ಗ ನಿಲ್ದಾಣದಲ್ಲಿ ಪ್ರಯಾಣಿಕರೆ ಎಚ್ಚರ… ಎಚ್ಚರ..!

ಸುದ್ದಿಲೈವ್/ಶಿವಮೊಗ್ಗ

ದಸರಾ ಹಬ್ಬದ ಹಿನ್ನಲೆಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿರುತ್ತದೆ. ಈ ಹಿನ್ನಲೆಯಲ್ಲಿ ಮಾಮೂಲಿ ಬಸ್ ಮಾರ್ಗದಲ್ಲಿ ಓಡಾಡುವ ಬಸ್ ಗಿಂತ ಹೆಚ್ಚಿನ ಬಸ್ ನ್ನ ಕೆಎಸ್ ಆರ್ ಟಿಸಿ ಬಿಡುತ್ತಿರುವುದು ಸಂತೋಷವೇ. ಆದರೆ ಹೆಚ್ಚಿನ ದರವನ್ನ ಹೆಚ್ಚಿಸಿ ಓಡಾಡಿಸಲಾಗುತ್ತಿದೆ.
ಕೆಂಪು ಬಸ್ ಹೊರತುಪಡಿಸಿ ಶಿವಮೊಗ್ಗ KSRTC ವಿಭಾಗೀಯ ನಿಯಂತ್ರಣವು ಇಂದಿನಿಂದ 40 ಬಸ್ ಗಳನ್ನ ಬಿಡುತ್ತಿದೆ. ಇವು ಬೆಂಗಳೂರಿನಿಂದ ಓಡಾಡಲಿದೆ. ಬೆಂಗಳೂರಿನ ಕೆಎಸ್ ಆರ್ ಟಿ ಸಿ ನಿಂದಲೂ ಹೆಚ್ಚಿನ ಬಸ್ ಓಡಾಡಲಿದೆ. ಆದರೆ ಮಾಮೂಲಿ ದರಕ್ಕಿಂತ ಶೇ. 20 ರಷ್ಟು ದರ ಹೆಚ್ಚಿಸಲಾಗಿದೆ.
ಕೆಂಪು ಬಣ್ಣದ ಬಸ್ ಹೊರತುಪಡಿಸಿ ರಾಜಹಂಸ, ವೋಲ್ವೋ ಮಲ್ಟಿ ಎಕ್ಸೆಲ್ ಸ್ಲೀಪರ್ ಮೊದಲಾದ ಬಸ್ ಗಳ ಪ್ರಯಾಣದಲ್ಲಿ ಶೇ.20 ರಷ್ಟು ಹೆಚ್ಚಿಸಿ ಪ್ರಯಾಣ ಬೆಳೆಸಬೇಕಿದೆ. ಶಿವಮೊಗ್ಗ ಮತ್ತು ಬೆಂಗಳೂರು KSRTC ನಿಂದ ಇಂದಿನಿಂದ ಸುಮಾರು 100 ಬಸ್ ಗಳು ಓಡಾಡುವ ನಿರೀಕ್ಷೆ ಇದೆ.
ಈ ಹೆಚ್ಚುವರಿ ಬಸ್ ಗಳು ಅ. 25 ರ ವರೆಗೆ ಓಡಾಡಲಿದೆ. ಅಧಿಕವಾಗಿ ಬೆಂಗಳೂರು ಮತ್ತು ಶಿವಮೊಗ್ಗದ ನಡುವೆಯೇ ಬಸ್ ಓಡಾಡಲಿದೆ. ಇದೇ ಹಬ್ವದ ವೇಳೆ ಖಾಸಗಿ ಬಸ್ ಗಳ ದರ ಕೆಎಸ್ಆರ್ ಟಿಸಿ ಬಸ್ ಗಿಂತ ಹೆಚ್ಚಾಗಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಶಿವಮೊಗ್ಗ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಎಚ್ಚರಿಕೆಯಿಂದ ಪ್ರಯಾಣಿಸಿ
ವೀಕೆಂಡ್ ಬಂತು ಎಂದರೆ ಮೊದಲೇ ಜಿಗಿಜಿಗಿ ಎನ್ನುವ ಶಿವಮೊಗ್ಗ ಕೆ.ಎಸ್.ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಹಬ್ಬದ ವೇಳೆ ಪ್ರಯಾಣಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಎಚ್ಚರಿಸುವ ಅಗತ್ಯವಿದೆ. ಒಮ್ನೆ ಪ್ರಯಾಣಿಕರು ಅಗತ್ಯ ಹಾಗೂ ಬೆಲೆಬಾಳುವ ವಸ್ತು ಅಥವಾ ನಗದು ಕಳೆದುಕೊಂಡರೆ ಅವರ ವಸ್ತುಗಳು ವಾಪಾಸ್ ಸಿಗಲಿದೆ ಎಂಬ ಖಾತರಿ ಇಲ್ಲ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಅದೊಂದು ದೂರಾಗಿಯೇ ಉಳಿಯಲಿದೆ.
ಇದುವರೆಗೆ ಸುಮಾರು 14 ಕಳ್ಳತನದ ದೂರುಗಳು ಈ ವರ್ಷ ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ನಡೆದಿದ್ದು ಸಿಸಿ ಟಿವಿಯ ಕೊರತೆಯಿಂದ ಎರಡು ಮೂರು ಪ್ರಕರಣ ಹೊರತುಪಡಿಸಿ ಬಹುತೇಕ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ಪ್ರಯಾಣಿಕರೇ ಎಚ್ಚರದಿಂದ ಪದರಯಾಣಿಸುವ ಅಗತ್ಯವಿದೆ.
ಇದನ್ನೂ ಓದಿ-https://suddilive.in/archives/1583
