ಸ್ಥಳೀಯ ಸುದ್ದಿಗಳು

ಪ್ರತಿಜ್ಞ ವಿಧಿ ಸ್ವೀಕಾರ

ಸುದ್ದಿಲೈವ್/ಶಿವಮೊಗ್ಗ

ಇಂದು ಬೆಳಿಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ ಸಿಬ್ಬಂದಿಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ  ಪ್ರತಿಜ್ಞೆಯ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಜರಾಯಿ ತಹಶೀಲ್ದಾರ್ ರವರು ಸಂವಿಧಾನದ ರಚನೆ, ಮಹತ್ವ ಮತ್ತು ಅದರ ಆಶಯಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ರಾಜಪ್ಪ, ದೀಪಕ್ ಟಿ.ಕೆ., ಶಿವಕುಮಾರ್, ಅನಿಲ್, ದರ್ಶನ್, ಆಶಾ ರವಿಕುಮಾರ್, ಸ್ಥಳೀಯ ಸಂಘಟನೆಯ ಮುಖಂಡ ಎನ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ನಂತರ ದುರ್ಗಿಗುಡಿ ಕಚೇರಿಯ ಬಳಿ 150 ಜನ‌ವಿದ್ಯಾರ್ಥಿಗಳಿಗೆ ದಲಿತ ಹೋರಾಟಗಾರ ಭಾರತ ಸಂವಿಧಾನದ ನಿರ್ಮಾತೃ ಪುಸ್ತಕ ವಿತರಿಸಲಾಯಿತು. ಸಮಿತಿಯ  ಗೌರವಾಧ್ಯಕ್ಷ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಕರಿಬಸಪ್ಪ, ತಾಲೂಕ ಅಧ್ಯಕ್ಷ ಹಾಗೂ ಕಾರ್ಯಾಧರ್ಶಿ ಹಾರನಹಳ್ಳಿ ಹಳದಪ್ಪ, ಮಹಿಳಾ ಅಧ್ಯಕ್ಷರಾದ ಪ್ರೇಮಾಜಿ, ಮಾಜಿ ನಗರ ಸಭ ಸದಸ್ಯರು ಎಲ್ ಆದಿಶೇಷ ಹಾಗೂ ಸಮಿತಿಯ ರಾಜ್ಯದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/3699

Related Articles

Leave a Reply

Your email address will not be published. Required fields are marked *

Back to top button