ಸ್ಥಳೀಯ ಸುದ್ದಿಗಳು

ರಾಜ್ಯ ಸರ್ಕಾರದ ವೈಫಲ್ಯತೆ ಖಂಡಿಸಿ ಜಿಲ್ಲಾ ಜಾತ್ಯಾತೀತ ಜನತಾದಳದಿಂದ ಬೃಹತ್ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಕಾಙಗ್ರೆಸ್ ಸರ್ಕಾರದ ವೈಫಲ್ಯತೆಯನ್ನ‌ ಖಂಡಿಸಿ ಮತ್ತು ರೈತರಿಗೆ ಬರ ಪರಿಹಾರವನ್ನ ಸಮಗ್ರವಾಗಿ ಹಂಚುವಂತೆ ಆಗ್ರಹಿಸಿ  ನ. 22 ರಂದು ಜಾತ್ಯಾತೀತ ಜನತಾದಳದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ  ಜೆಡಿಎಸ್ ಕೋರ್ ಕಮಿಟಿಯ ಸದಸ್ಯ ಕೆ.ಬಿ.ಪ್ರಸನ್ನ ಕುಮಾರ್ ಕಾಂಗ್ರೆಸ್ ದುರಾಡಳಿತವನ್ನ  ಖಂಡಿಸಿ ಅದೇ ದಿನ ಜಿಲ್ಲಾಡಳಿತ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನ. 22 ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆಯು  ಪಕ್ಷದ ಕಚೇರಿಯಿಂದ ಹೊರಡಲಿದೆ ಎಂದರು.

ಬರವಿದೆ. ರೈತರಿಗೆ ಅನ್ಯಾಯವಾಗುತ್ತಿದೆ. ಕೇವಲ ಪೇಪರ್ ಸ್ಟೇಟ್ ಮೆಂಟ್ ಗೆ ಸರ್ಕಾರದ ಬರ ಘೋಷಣೆ ಸೀಮಿತವಾಗಿದೆ. ಸೆ.22 ರಂದು ಸರ್ಕಾರ ಆದೇಶ ಹೊರಡಿಸಿ, ಐಪಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಹೊಂದಲು 3 ಲಕ್ಷ ಕರ್ಚಾಗುವಂತೆ ಮಾಡಿದೆ. ಹಿಂದೆ 20 ಸಾವಿರ ರೂ.ದಲ್ಲಿ ರೈತರು ವಿದ್ಯುತ್ ಸಂಪರ್ಕ ಪಡೆಯಬಹುದಿತ್ತು. ಆದರೆ ಈಗ ದುಪ್ಪಟ್ಟು ಮಾಡಲಾಗಿದೆ ಎಂದು ಆರೋಪಿಸಿದರು.

ಸೋಲಾರ್ ಎನರ್ಜಿ ಬೆಂಬಲಿಸಲು ಮಾಡ್ತಾ ಇದ್ದೀವಿ ಎಂಬುದು ಸರ್ಕಾರ ಹೇಳಿಕೊಂಡಿದೆ. ಈ ಹಿಂದೆ ನಗರದ ಪಾರ್ಕ್ ಗಳಲ್ಲಿ ಸೋಲಾರ್ ಅಳವಡಿಸಲು ಸರ್ಕಾರ ಮುಂದಾಗಿತ್ತು. ಇದು ನಗರದಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ರೈತರ ಮೇಲೆ ಪ್ರಯೋಗಕ್ಕೆ ಮುಂದಾಗಿದೆ ಎಂದು ದೂರಿದರು. .

ಕೃಷಿಗೆ ಏಳು ಗಂಟೆ ವಿದ್ಯುತ್  ಸಂಪರ್ಕ ನೀಡಲಾದ ಇತರರ ಇಲ್ಲ. ಬರದ ಪರಿಸ್ಥಿತಿಯಲ್ಲಿ ಬರೆಯನ್ನ ಎಳೆಯುತ್ತಿದೆ. ಕೈಗಾರಿಕೆಗೂ ವಿದ್ಯುತ್ ಕೊರತೆ ಯಾಗುತ್ತಿದೆ. ಬರ ಒಂದು ಕಡೆ, ಭಾಗ್ಯ ಒಂದು ಕಡೆಯಾದರೆ, ಗ್ಯಾರೆಂಟಿ‌ ಭರಿಸಲು ಸರ್ಕಾರ ಜನರಿಗೆ ದಂಡದ ರೂಪದಲ್ಲಿ ಹಣ ಸಂಗ್ರಹಕ್ಕೆ ಮುಂದಾಗಿದೆ.  ಟ್ರಾಫಿಕ್ ವ್ಯವಸ್ಥೆಯ ಮೂಲಕ ಹಗಲು ದೊರೋಡೆಯಾಗುತ್ತಿದೆ. ಐನೂರು ರೂ ದಂಡ ಈಗ 3000-5000 ರೂ. ದಂಡಕ್ಜೆ ಏರಿಸಲಾಗುತ್ತಿದೆ.

ಅಬಕಾರಿ ಇಲಾಖೆಯ ದಂಡವೂ ಹೆಚ್ಚಿಸಲಾಗಿದೆ. ಇವೆಲ್ಲಾವೂ ಭಾಗ್ಯಕ್ಕೆ ವ್ಯಯವಾಗುತ್ತಿದೆ. ಬಲಗೈಯಲ್ಲಿ ಕೊಟ್ಟ ಸರ್ಕಾರ ಎಡಗೈನಲ್ಲಿ ಕಿತ್ತುಕೊಳ್ಳುತ್ತಿದೆ. ಗ್ಯಾರೆಂಟಿ ಇನ್ಬೂ ಸಮರ್ಪಕವಾಗಿ ಜಾರಿಯಾಗಿಲ್ಲ. ಆಗಲೇ ದಙಡದ ರೂಪದಲ್ಲಿ ಸರ್ಕಾರ ವಸೂಲಿಗೆ ನಿಂತಿದೆ ಎಂದರು.

ಆರೋಗ್ಯ ವಿಚಾರದಲ್ಲಿ ನಿರ್ಲಕ್ಷವಾಗುತ್ತಿದೆ  ಸಿಟಿ ಸ್ಕ್ಯಾನಿಂಗ್ ಆಗಲು ವ್ಯವಸ್ಥೆ ಹಾಳಾಗಿದೆ. ಇದನ್ನ ಸರಿಯಾಗಬೇಕು. ಇವರಮೆಲ್ಲವೂ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ. ಇದನ್ನ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ನ.27 ರಂದು ಹೊಸ ಜಿಲ್ಲಾ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಅವರ ಅಧಿಕಾರ ಸ್ವೀಕಾರ ಶುಭಮಂಗಳದಲ್ಲಿ ನಡೆಯಲಿದೆ. ಮಾಜಿ ಸಿಎಂ ಕುಮಾರ ಸ್ವಾಮಿ, ಎಂಎಲ್ ಸಿ ಭೋಜೇಗೌಡ, ಶಾಸಕ ಶಾರದಾ ಪೂರ್ಯನಾಯ್ಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನ.22 ರಂದು  ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಹುಟ್ಟುಹಬ್ಬವನ್ನ  ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಆಚರಿಸಲಾಗುತ್ತಿದೆ. ಇದು ಪ್ರತಿಭಟನೆ ಮುಗಿಸಿಕೊಂಡು ನಂತರ  ಹುಟ್ಟುಹಬ್ಬ ನಡೆಯಲಿದೆ ಎಂದರು.

ಆಪರೇಷನ್ ಹಸ್ತಕ್ಕೆ ಭಯ

ಆಪರೇಷನ್ ಹಸ್ತಕ್ಜೆ ಹಿನ್ನಡೆಯಾಗುತ್ತಿದೆ.  ಭಯ ಬಂದಿರುವ ಹಿನ್ಬಲೆಯಲ್ಲಿ ಆಪರೇಷನ್ ಹಸ್ತಕ್ಕೆ ಕಾಙಗ್ರೆಸ್  ಮುಂದಾಗಿದೆ.  ಪಾರ್ಲಿಮೆಂಟ್ ಚುನಾವಣೆ ಎದುರಿಸಲು ಧೈರ್ಯ ಸಾಕಾಗುತ್ತಿಲ್ಲ. ಹಾಗಾಗಿ ಆಪರೇಷನ್ ಹಸ್ತ ನಡೆಯುತ್ತಿದೆ. ಪೊಲೀಸ್ ಅಬಕಾರಿ ಮೂಲಕ ದಂಡ ವಸೂಲಿಗೆ ನಿಂತಿರುವ ಸರ್ಕಾರಕ್ಕೆ ಮುಂಬರುವ ಚುನಾವಣೆ ಎದುರಿಸಲು ಧೈರ್ಯವಿಲ್ಲ. ಹಾಗಾಗಿ ಆಪರೇಷನ್ ಹಸ್ತ ನಡೆಯುತ್ತಿದೆ ಎಂದರು.

ಜಿಲ್ಕಾಧ್ಯಕ್ಷ ಕಡಿದಾಳ್ ಗೋಪಾಲ, ರಾಮಕೃಷ್ಣ, ಗೀತಾ ಸತೀಶ್, ದೀಪಕ್ ಸಿಂಗ್, ಮೊದಲಾದವರು ಭಾಗಿಯಾದರು.

ಇದನ್ನು ಓದಿ-https://suddilive.in/archives/3300

Related Articles

Leave a Reply

Your email address will not be published. Required fields are marked *

Back to top button