ಮತ್ತೆ ಆರಂಭಗೊಂಡ ಚಪ್ಪಲಿ ಕಳವು ಪ್ರಕರಣ!

ಸುದ್ದಿಲೈವ್/ಶಿವಮೊಗ್ಗ

ಚಪ್ಪಲಿ ಕಳ್ಳತನ ಪ್ರಕರಣ ಈಗ ಮತ್ತೆ ಪ್ರಚಲಿತಕ್ಕೆ ಬಂದಿದೆ. ವಿಶೇಷವೆಂದರೆ ಗೋಪಾಲ ಗೌಡದಲ್ಲಿಯೇ ಚಪ್ಪಲಿ ಕಳವು ಆಗುತ್ಯಿರುವುದು ವಿಶೇಷವಾಗಿದೆ.
ಈಹಿಂದೆ ನಡೆದ ಬಹುತೇಕ ಚಪ್ಪಲಿ ಕಳವು ಪ್ರಕರಣ ಈ ಗೋಪಾಲಗೌಡ ಬಡಾವಣೆಯಲ್ಲಿಯೇ ನಡೆದಿವೆ.ಈಗಲೂ ಅಲ್ಲೆ ನಡೆದಿರುವುದು ವಿಶೇಷವಾಗಿದೆ. ಈ ಚಪ್ಪಲು ಕಳವು ಪ್ರಕರಣ ಅತ್ಲಾಗೆ ಎಫ್ಐಆರ್ ಗಳೂ ಆಗೊಲ್ಲ, ಇತ್ಲಾಗೆ ಸಾವಿರಾರು ರೂಗಳ ಬೆಲೆ ಬಾಳುವ ಚಪ್ಪಲಿಗಳು ಕಳುವಾಗುತ್ತಿರುವುದು ಧರ್ಮ ಸಂಕಟದ ವಿಷಯವಾಗಿದೆ.
ಕೊರೋನ ಇದ್ದ ಕಾರಣ 2020 ರಿಂದ 2022 ರ ವರಗೆ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಬಹುತೇಕ ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರಕರಣಗಳು ನಡೆದಿರಲಿಲ್ಲ ಎನ್ನಬಹುದು. ಈಗ ಮನೆಯಮುಂದೆ ಅಳವಡಿಸಿರುವ ಸಿಸಿ ಟಿವಿಗಳಲ್ಲಿ ಕಳ್ಳತನವಾಗಿರುವ ವಿಡಿಯೋ ವೈರಲ್ ಆಗುತ್ತಿವೆ. ಗೋಪಾಲಗೌಡ ಬಡಾವಣೆಯಲ್ಲಿ ಬಹುತೇಕ ಶ್ರೀಮಂತರ ಮನೆಗಳು ಹೆಚ್ಚ ಇದ್ದು ಇಲ್ಲಿಯೇ ಚಪ್ಪಲಿ ಕಳವು ಆಗುತ್ತಿರುವುದು ವಿಶೇಷವಾಗಿದೆ. ಚಪ್ಪಲಿ ಅಂತ ನಿರ್ಲಕ್ಷಿಸಿದರೆ ನಷ್ಟ ನಮಗೇನೆ.
ನಗರದ ಪ್ರತಿಷ್ಠಿತ ಬಡಾವಣೆಯಾದ ಗೋಪಾಲಗೌಡ ಬಡಾವಣೆಯಲ್ಲಿ ಪ್ರತಿಷ್ಠಿತರ ಮನೆಯಲ್ಲಿ ಚಪ್ಪಲಿ ಕಳ್ಳತನ ಮತ್ತೆ ಪ್ರಾರಂಭವಾಗಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.. ಬಡಾವಣೆ ನಿವಾಸಿ ಜಿತೇಂದ್ರ ಗೌಡ ಅವರ ಮನೆಯ ಹಾಗೂ ಬಾಡಿಗೆದಾರರ ಮನೆಯ ಎಲ್ಲಾ ಚಪ್ಪಲಿಗಳನ್ನು ಮುಸುಕು ಧರಿಸಿದ ವ್ಯಕ್ತಿ ಒಬ್ಬ ಕಳ್ಳತನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಪೊಲೀಸ್ ಇಲಾಖೆಯವರು ಕಳ್ಳನನ್ನು ಪತ್ತೆ ಹಚ್ಚಿ ನಿವಾಸಿಗಳ ಆತಂಕ ದೂರ ಮಾಡಬೇಕಾಗಿ ನಿವಾಸಿಗಳು ವಿನಂತಿಸಿದ್ದಾರೆ. ಚಪ್ಲಿ ಕಳವು ವಿಡಿಯೋ ವೈರಲ್ ಆಗಿದೆ
ಇದನ್ನೂ ಓದಿ-https://suddilive.in/archives/3319
