ಮೀಸಲಾಯಿತಿ ಭಿಕ್ಷೆಯಲ್ಲ, ಸಂವಿಧಾನಬದ್ಧ ಹಕ್ಕು-ಹಿಂದುಳಿದ ಜನಜಾಗೃತಿ ವೇದಿಕೆಯ ಹಕ್ಕೋತ್ತಾಯ

ಸುದ್ದಿಲೈವ್/ಶಿವಮೊಗ್ಗ

ಕಾಂತರಾಜು ವರದಿ ಶೀಘ್ರದಲ್ಲಿಯೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ-ಹಿಂದುಳಿದ ಜನ ಜಾಗೃತಿ ವೇದಿಕೆ ಮತ್ತು ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ಜನ ಜಾಗೃತಿ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಧರಣಿ ಸತ್ಯಾಗ್ರಹ ಮತ್ತು ಹಕ್ಕೋತ್ತಾಯ ಮಂಡನೆ ಮಾಡಿದೆ.
ಕಾಂತರಾಜ ವರದಿ ಕುರಿತು ಈಗಾಗಲೇ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಒಕ್ಕೂಟ ಹಾಗೂ ವೇದಿಕೆಗಳು ಪ್ರತಿಭಟನೆಗೆ ಮುಂದಾಗಿವೆ. 180 ಕೋಟಿ ವೆಚ್ಚದಲ್ಲಿ 2015 ರಲ್ಲಿ ಕಾಂತರಾಜು ವರದಿಯನ್ನ ಇದೇ ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿತ್ತು.
ಆಯೋಗ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವರದಿಯನ್ನ ಸಲ್ಲಿಸಲು ಮೀನ ಮೇಷ ಎಣಿಸುತ್ಯಿದೆ. ರಾಜ್ಯ ಸರ್ಕಾರ ಎಲ್ಲಾ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸಾಕ್ಷಾತ್ ಸಮೀಕ್ಷಾ ವರದಿಯನ್ನ ಸಿದ್ದರಾಮಯ್ಯ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಲಾಗಿದೆ. ಮೀಸಲಾತಿ ಭಿಕ್ಷೆಯಲ್ಲ ಅ ದು ಸಂವಿಧಾನ ಬದ್ಧ ಹಕ್ಕು ಎಂದು ಹಕ್ಕೊತ್ತಾಯ ಮಾಡಲಾಯಿತು.
ಧರಣಿಯಲ್ಲಿ ಒಕ್ಜೂಟ ಹಾಗೂ ವೇದಿಕೆಗಳ ಮುಖಂಡರಾದ ತೀ.ನಾ.ಶ್ರೀನಿವಾಸ, ಆರ್.ಕೆ.ಸಿದ್ದರಾಮಣ್ಣ, ಆರ್.ಮೋಹನ್, ಕೆ.ಜಿ.ವೆಂಕಟೇಶ್, ಜನಮೇಜಿರಾವ್, ಆರ್.ಟಿ.ನಟರಾಜ್ ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/3315
