ಸ್ಥಳೀಯ ಸುದ್ದಿಗಳು
ವಿಜೇಂದ್ರರಿಗೆ ಒಳ್ಳಯದಾಗಲಿ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ವಿಜಯೇಂದ್ರ ಅಧ್ಯಕ್ಷರು ಆಗಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ. ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಮಾಡಲು ಇಷ್ಟು ದಿನ ಯಾಕೆ ಕ್ಯಾಪ್ಟನ್ ಲೆಸ್ ಅಂತ ಹೇಳಿದ್ದೆ ಅಂದ್ರೆ, ವಿಧಾನ ಸಭೆಯಲ್ಲಿ ಮಾತಾಡೋಕೆ ಕ್ಯಾಪ್ಟನ್ ಇಲ್ಲ ಅಂತ ಹೇಳಿದ್ದೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಈಗ ಬಿಜೆಪಿಯವರು ಕ್ಯಾಪ್ಟನ್ ಮಾಡಿಕೊಂಡಿದ್ದಾರೆ. ಅಧ್ಯಕ್ಷರು ಬಂದ ತಕ್ಷಣ ಎಲ್ಲಾ ಆಗಲ್ಲ ಜನರ ವಿಶ್ವಾಸ ಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ನೀರಾವರಿ ಕ್ರೆಡಿಟ್ ಬಂಗಾರಪ್ಪನವರಿಗೆ ಸಲ್ಲಬೇಕು. ಬಂಗಾರಪ್ಪ ಬಗ್ಗೆ ಮಾತನಾಡಬೇಕು ಆದರೆ ಹುಷಾರ್ ಆಗಿರಬೇಕು. ಎಂದರು.
ಈವತ್ತು ಶಿವಮೊಗ್ಗದಲ್ಲಿ ನೀರು ಕುಡಿತಾ ಇದಾರೆ ಅಂದ್ರೆ ಅದಕ್ಕೆ ನಮ್ಮ ತಂದೆ ಕಾರಣ. ಬಿಜೆಪಿಯವರು ವಿಧಾನ ಚುನಾವಣೆಯಲ್ಲೂ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ಗ್ಯಾರೆಂಟಿಗಳನ್ನ ಕೊಟ್ಟಿದ್ದೇವೆ. ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ ಎಂದರು.
