ನ.23 ರಂದು ಬಾಗಲಕೋಟೆಯಲ್ಲಿ ರಾಜ್ಯ ಭೋವಿ ಸಮಾವೇಶ

ಸುದ್ದಿಲೈವ್/ಶಿವಮೊಗ್ಗ

ಬಾಗಲಕೋಟೆಯಲ್ಲಿ ಮಠ ಹಾಗೂ ಸಮಾಜದ ಸ್ವಾಮಿಜಿಗಳಾದ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ ನ.23 ರಂದು ನಡೆಯಲಿದ್ದು ಲಕ್ಷಾಂತರ ಜನ ಭಾಗಿಯಾಗಲಿದ್ದು ನಮ್ಮ ಜಿಲ್ಲೆಯಿಂದ 5000 ಜನ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ಭೋವಿ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಾಹನದ ವ್ಯವ್ಸ್ಥೆ ಮಾಡಲಾಗಿದೆ. ಶಿವರಾಜ್ ತಂಗಡಿಯವರು, ಏಳು ಜನ ಶಾಸಕರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಇಮ್ನಡಿ ಸಿದ್ದರಾಮೇಶ್ವರ ಸ್ವಾಮಿಗಳು ಪೀಠಾಧಿಪತಿಗಳಾಗಿರುತ್ತಾರೆ. ಸಿಎಂ ಸಿದ್ದರಾಮಯ್ಯ ಮೊದಲಾದ ಗಣ್ಯ ವ್ಯಕ್ತಿಗಳು ಭಾಗಿಯಾಗಲಿದ್ದಾರೆ ಎಂದರು
ಲೋಕಸಭೆಗೆ ಟಿಕೇಟ್ ಬೇಡಿಕೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವಂತೆ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಗುವುದು. ಯಾವುದೇ ಪಕ್ಷದಿಂದ ನಮ್ಮ ಸಮುದಾಯವನ್ನಅಪ್ಪಿಕೊಳ್ಳುತ್ತಾರೋ ಆ ಪಕ್ಷಕ್ಕೆ ನಮ್ಮಬೆಂಬಲವಿದೆ ಎಂದು ಪಾಲಿಕೆ ಸದಸ್ಯ ಧೀರಾಜ್ ತಿಳಿಸಿದರು.ವಿಜಯಪುರ, ಚಿತ್ರದುರ್ಗ ಮತ್ತು ಕೋಲಾರದ ಲೋಕ ಸಭೆಯಲ್ಲಿ
ವಿಧಾನ ಸಭೆ ಚುನಾವಣೆಯಲ್ಲಿ ಸಮಾಜಕ್ಕೆ ಕಾಂಗ್ರೆಸ್ 7 ಸೀಟು, ಬಿಜೆಪಿ 8 ಸೀಟು ನೀಡಿತ್ತು. ಇದರಲ್ಲಿ 6 ಜನ ಶಾಸಕರಾಗಿದ್ದಾರೆ. ಹಾಗಾಗಿ ಈ ಬಾರಿ ಮೂರು ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರಕ್ಕಾದರೂ ನಮ್ಮ ಸಮುದಾಯಕ್ಕೆ ಟಿಕೇಟ್ ನೀಡುವಂತೆ ಒತ್ತಾಯಿಸಲಾಗುವುದು ಎಂದರು.
ಇದನ್ನೂ ಓದಿ-https://suddilive.in/archives/3305
