ಸ್ಥಳೀಯ ಸುದ್ದಿಗಳು

ಕರ್ನಾಟಕ ಸಂಘ ಮತ್ತು ಚಿದಂಬರ ರಾವ್ ಜಂಬೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸುದ್ದಿಲೈವ್/ಶಿವಮೊಗ್ಗ

ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಜಾನಪದ, ಕಲಾ ಕ್ಷೇತ್ರ, ರಂಗ ಭೂಮಿ, ಚಲನ ಚಿತ್ರ, ಶಿಲ್ಪಕಲೆ ಚಿತ್ರಕಲೆ, ಕರಕುಶಲ ಯಕ್ಷಗಾನ ಬಯಲಾಟ, ಸಮಾಜ ಸೇವೆ,  ಆಡಳಿತ ವೈದ್ಯಕೀಯ, ಸಾಹಿತ್ಯ ಕ್ಷೇತ್ರ ಸೇರಿದಂತೆ 19 ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ.

ಈ ಬಾರಿ ಹೆಗ್ಗಳಿಕೆಯ ವಿಷಯವೇನೆಂದರೆ ಶಿವಮೊಗ್ಗದ ಕರ್ನಾಟಕ ಸಂಘಕ್ಕೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಸಂಘ ಸಂಸ್ಥೆಗಳಿಗೆ ಕೊಡುಮಾಡುವ ಪ್ರಶಸ್ತಿಯಲ್ಲಿ ರಾಜ್ಯ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಕಟಿಸಿದೆ. ಇದರಲ್ಲಿ ಶಿವಮೊಗ್ಗ ಕರ್ನಾಟಕ ಸಂಘವೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ಅದರಂತೆ ರಂಗಭೂಮಿ ಕ್ಷೇತ್ರದಲ್ಲಿ 4 ದಶಕಗಳವರೆಗೆ ಸೇವೆ ಸಲ್ಲಿಸಿದ್ದ ಚಿದಂಬರ ರಾವ್ ಜಂಬೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜರಾಗಿದ್ದಾರೆ.

ಯಾರೀ ಚಿದಂಬರರಾವ್‌ ಜಂಬೆ ?

ಜಂಬೆ ಅವರು ಜನಿಸಿದ್ದು 1949 ರಲ್ಲಿ . 1982 ರಿಂದ ನೀನಾಸಂ ರಂಗಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಜಂಬೆ ಅವರ ಗರಡಿಯಲ್ಲಿ ನೂರಾರು ರಂಗಕರ್ಮಿಗಳು ರೂಪುಗೊಂಡಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದಿರುವ ಜಂಬೆ ಅವರು ಭಾರತೀಯ ರಂಗಲೋಕದ ಅಂಗ್ರಪಂಕ್ತಿಯಲ್ಲಿನ ಪ್ರಮುಖರಲ್ಲೊಬ್ಬರು. ಕನ್ನಡ, ಸಂಸ್ಕೃತ, ಜಾನಪದ ಹಾಗೂ ಐರೋಪ್ಯ ಮೂಲಗಳಿಂದ ಪಡೆದ ವಿಶಿಷ್ಟ ನಾಟಕಗಳನ್ನು ಜಂಬೆಯವರು ನಿರ್ದೇಶಿಸಿದ್ದು – ಹಲವಾರು ರಂಗ ಶಿಬಿರಗಳನ್ನೂ ನಡೆಸಿದ್ದಾರೆ.

ಸಂಘದ ಕುರಿತು

ನಾಡು, ನುಡಿಗಳ ಅಭಿವೃದ್ಧಿಗೆ ಹಾಗೂ ಕರ್ನಾಟಕದ ಏಕೀಕರಣಕ್ಕೆ ಮಲೆನಾಡು ಪ್ರದೇಶದಲ್ಲಿ ಕೆಲಸ ಮಾಡುತ್ತಾ ಬಂದಿರುವ ಹೆಮ್ಮೆಯ ಸಂಸ್ಥೆ ಈ ಶಿವಮೊಗ್ಗ ‘ಕರ್ನಾಟಕ ಸಂಘ’.ವ್ಯವಸಾಯ ಮತ್ತು ವ್ಯಾಪಾರದ ಕೇಂದ್ರವಾಗಿದ್ದ ಶಿವಮೊಗ್ಗ ನಗರದಲ್ಲಿ ಹಾಗೂ ಮಲೆನಾಡು ಪ್ರದೇಶದಲ್ಲಿ ಸಾಹಿತ್ಯಕ ಮತ್ತು ಸಾಂಸ್ಕತಿಕ ಪರಿಸರವನ್ನು ವ್ಯವಸ್ಥಿತವಾಗಿ ರೂಪಿಸಿ, ಬೆಳೆಸಿರುವ ಮೊಟ್ಟ ಮೊದಲ ಸಂಸ್ಥೆ ಎಂಬುದು ಕೂಡಾ ಸಂಘದ ಹೆಗ್ಗಳಿಕೆ.

ಈ ಸಂಘವು ೦೮-೧೧-೧೯೩೦ರಂದು ಸ್ಥಾಪನೆಯಾಗಿದ್ದು, ಕನ್ನಡ ಆಸ್ತಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ವರಕವಿ ಡಾ. ದ.ರಾ. ಬೇಂದ್ರೆ ಅವರು ಈ ಸಂಘದ ಸ್ಥಾಪನೆಗೆ ಪ್ರೇರಕರು ಎಂಬುದು ಅಷ್ಟೇ ಗೌರವದ ಸಂಗತಿ. ಹಾಗೆಯೇ ರಾಷ್ಟ್ರಕವಿ ಕುವೆಂಪು ಈ ಸಂಘದ ಉದ್ಘಾಟಕರು ಎಂಬುದು ಕೂಡಾ.

ಶ್ರೀ ಗುರುರಾವ್ ದೇಶಪಾಂಡೆ, ಶ್ರೀ ಕೂಡಲಿ ಚಿದಂಬರ೦, ಕಥೆಗಾರರಾದ ಶ್ರೀ ಆನಂದ, ವಕೀಲರಾಗಿದ್ದ ಶ್ರೀ ಎಸ್.ವಿ. ಕೃಷ್ಣಮೂರ್ತಿ ರಾವ್, ಶ್ರೀ ಭೂಪಾಳಂ ಚಂದ್ರಶೇಖರಯ್ಯ, ಶ್ರೀ ಭೂಪಾಳಂ ಪುಟ್ಟ ನಂಜಪ್ಪ, ಶ್ರೀ ದೇವಂಗಿ ಮಾನಪ್ಪ ಕರ್ನಾಟಕ ಸಂಘ ಆರಂಭವಾಗಲು ಕಾರಣರಾದವರು. ಸಂಘವು ಕಾನೂನು ರೀತ್ಯಾ ೧೯೩೬ರಲ್ಲಿ ನೋಂದಾಯಿಸಲ್ಪಟ್ಟಿದೆ.

ಆರಂಭದ ವರ್ಷಗಳಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಕರ್ನಾಟಕ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರದ ವರ್ಷಗಳಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀ ಹಸೂಡಿ ವೆಂಕಟಶಾಸ್ತ್ರಿ , ಶ್ರೀ ಎಚ್.ವಿ. ದತ್ತಾತ್ರೇಯ ಶಾಸ್ತ್ರಿ , ಶ್ರೀ ಮಹಿಷಿ ನರಸಿಂಹಮೂರ್ತಿ, ಶ್ರೀ ಕೆ.ಜಿ. ಸುಬ್ರಹ್ಮಣ್ಯ, ಶ್ರೀ ಟಿ.ಆರ್. ಪಾಂಡುರ೦ಗ, ಪ್ರೊ. ಪಾಂಡುರ೦ಗ ಉಡುಪ, ಶ್ರೀಮತಿ ವಿಜಯಾ ಶ್ರೀಧರ್, ಪ್ರೊ. ತೀ.ನಂ. ಶಂಕರನಾರಾಯಣ, ಶ್ರೀ ಎಸ್.ವಿ. ತಿಮ್ಮಯ್ಯ. ಪ್ರೊ. ಡಿ.ಎಸ್. ಮಂಜುನಾಥ, ಪ್ರೊ.ಕೆ ಓಂಕಾರಪ್ಪ, ಶ್ರೀ ಹೆಚ್ ಡಿ ಉದಯಶಂಕರ ಶಾಸ್ತ್ರಿ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶ್ರೀ ಎಂ ಎನ್ ಸುಂದರರಾಜ್ ಅಧ್ಯಕ್ಷರಾಗಿದ್ದಾರೆ. ಹಿರಿಯರಾದ ದಿ .ಶ್ರೀ ಕೆ.ಜಿ. ಸುಬ್ರಹ್ಮಣ್ಯ ಅವರು ಕಳೆದ ಮೂರು ದಶಕಗಳಿಂದ ಕರ್ನಾಟಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಶ್ರೀ ಗುರುರಾವ್ ದೇಶಪಾಂಡೆ, ಶ್ರೀ ಕೂಡಲಿ ಚಿದಂಬರ೦, ಶ್ರೀ ಎಸ್.ವಿ. ಕೃಷ್ಣಮೂರ್ತಿರಾವ್, ಶ್ರೀ ಮಹಿಷಿ ನರಸಿಂಹಮೂರ್ತಿ, ಶ್ರೀ ಎಸ್.ಎನ್. ಶಿವರಾಮ ಶಾಸ್ತ್ರಿ, ಶ್ರೀ ಬಿ.ಎನ್. ಕೃಷ್ಣಮೂರ್ತಿ, ಶ್ರೀ ಬಳ್ಳೇಕೆರೆ ಹನುಮಂತಪ್ಪ, ಶ್ರೀ ಟಿ.ಆರ್. ಪಾಂಡುರ೦ಗ, ಡಾ. ಎಚ್.ಟಿ. ಕೃಷ್ಣಮೂರ್ತಿ, ಶ್ರೀ ಜಯದೇವಪ್ಪ ಜೈನಕೇರಿ, ಶ್ರೀ ಎಚ್.ಡಿ. ಉದಯಶಂಕರ ಶಾಸ್ತ್ರಿ, ಡಾ| ಹೆಚ್ ಎಸ್ ನಾಗಭೂಷಣ   ಅವರು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಪ್ರೊ. ಆಶಾಲತಾ ಎಂ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/2172

Related Articles

Leave a Reply

Your email address will not be published. Required fields are marked *

Back to top button