ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿ-ಠಾಣಾಧಿಕಾರಿಗಳಿಗೆ ಸಿಮ್ಸ್ ನ ಪತ್ರ ಏನು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ಫೆರಿಫರಲ್ ಕ್ಯಾನ್ಸರ್ ಕಟ್ಟಡ ನಿರ್ಮಾಣದ ವಿಚಾರದಲ್ಲಿ ಮಿಷನ್ ಕಾಂಪೌಂಡ್ ನಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ವೈದ್ಯಕೀಯ ಶಿಕ್ಷಣದ ಆಡಳಿತ ಮಂಡಳಿಯ ನಡುವೆ ವ್ಯಾಜ್ಯ ಮುಂದುವರೆದಿದೆ.
ಕಾನೂನಿನ ವ್ಯಾಜ್ಯ ಒಂದು ಕಡೆ ನಡೆದರೆ ಇಂದು ಸ್ಥಳಕ್ಕೆ ಬಂದು ಅಳತೆ ನಡೆಸಲು ಮುಂದಾದ ಅಧಿಕಾರಿಗಳನ್ನ ಅಡ್ಡಿಪಡಿಸಿದ್ದ ಮೂವರ ವಿರುದ್ಧ ದೂರು ದಾಖಲಿಸುವಂತೆ ಸಿಮ್ಸ್ ದೊಡ್ಡಪೇಟೆ ಠಾಣೆಯ ಠಾಣಾಧಿಕಾರಿಗಳಿಗೆ ಪತ್ರ ಬರೆದಿದೆ. ಸೂಕ್ತ ರಕ್ಷಣೆ ನೀಡಿ ಕಟ್ಟಡ ಆರಂಭಿಸಲು ಅನುವು ಮಾಡಿಕೊಡಬೇಕು ಕಾಮಗಾರಿಗೆ ಅಡ್ಡ ಪಡಿಸಿದ ಮೂವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?
ಮಿಷನ್ ಕಾಂಪೌಂಡ್ ನ ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ ಅಸೋಸಿಯೇಷನ್ ಪಕ್ಕದ ಜಾಗ ಮತ್ತು ಹಿಂಬದಿಯ ಮೈದಾನದ ಜಾಗ 2.35 ಎಕರೆ ಜಾಗ ಖಾಲಿ ಇದೆ. ಈ ಖಾಲಿ ಜಾಗದಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಆರಂಭಿಸಲು 2019 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 100 ಕೋಟಿ ಹಣ ಎತ್ತಿಟ್ಟು 50 ಕೋಟಿ ಹಣ ಬಿಡುಗಡೆ ಮಾಡಿದ್ದರು.
ಈ ಜಾಗ ಗ್ರಾಮಠಾಣ ಜಾಗವಾಗಿದೆ ಎಂಬುದು ಸಿಮ್ಸ್ ನ ವಾದ ಈಹಿನ್ನಲೆಯಲ್ಲಿ ಈ ಜಾಗವನ್ನ ಬೇಲಿ ಹಾಕಿಕೊಂಡಿತ್ತು. ಈ ಬೇಲಿ ಹಾಕುತ್ತಿದ್ದಂತೆ ಚರ್ಚ್ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಹಾಕಿತ್ತು. ಆದರೆ ರಿಟ್ ಪಿಟಿಷನ್ ನ್ನ ಹೈಕೋರ್ಟ್ ವಜಾಗೊಳಿಸಿ ಸಿಮ್ಸ್ ಪರವಾಗಿ ಮಾಡಿಕೊಟ್ಟಿದೆ. ಈಗ ಏನಿದ್ದರೂ ಟ್ರಯಲ್ ಕೋರ್ಟ್ ನಲ್ಲಿ ಚರ್ಚ್ ತನ್ನ ದಾವೆ ಹೂಡಿ ಫೈಟ್ ಮಾಡಬೇಕಿತ್ತು. ಆದರೆ ಮೂವರು ಅಧಿಕಾರಿಗಳ ಜೊತೆ ಗಲಾಟೆ ನಡೆಸಿ ಸಿಮ್ಸ್ ಗೆ ಅನುಕೂಲ ಮಾಡಿಕೊಟ್ಟಂತೆ ಕಾಣುತ್ತಿದೆ.
ಅ.31 ರಂದು ಹೈಕೋರ್ಟ್ ಚರ್ಚ್ ನವರ ಅರ್ಜಿಯನ್ನ ವಜಾಗೊಳಿಸಿದೆ ಎಂಬುದು ಸಿಮ್ಸ್ ತನ್ನ ದೂರಿನಲ್ಲಿ ದಾಖಲಿಸಿದೆ. ಹಾಗಾಗಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಮತ್ತು ಸಿಎಒ ಶಿವಕುಮಾರ್ ಜಾಗಕ್ಕೆ ತೆರಳಿ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಚರ್ಚ್ ನ ಮೂವರು ಸ್ಥಳ ಅಳತೆ ಮಾಡಲು ಅಡ್ಡಿಪಡಿಸಿದ್ದರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸಿಮ್ಸ್ ಆಡಳಿತ ಮಂಡಳಿ ರಕ್ಷಣೆ ನೀಡಿ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಮತ್ತು ಕಾಮಗಾರಿಗೆ ಅಡ್ಡ ಬಂದ ಮೂವರ ವಿರುದ್ಧ ದೂರು ದಾಖಲಿಸುವಂತೆ ಕೋರಲಾಗಿದೆ.
ಇದನ್ನೂ ಓದಿ-https://suddilive.in/archives/2320
