ನಿಗೂಢ ರೀತಿಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರೊಜೆಕ್ಟರ್ ಗಳು ಕಳುವು

ಸುದ್ದಿಲೈವ್/ಶಿರಾಳಕೊಪ್ಪ

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಕ್ಲಾಸ್ ಗಳಿಗೆ ಅಳವಡಿಸಿದ್ದ 12 ಪ್ರೊಜೆಕ್ಟರ್ ಪೈಕಿ 2 ಪ್ರೊಜೆಕ್ಟರ್ ಗಳು ಕಳುವು ಆಗಿರುವ ಘಟನೆ ವರದಿಯಾಗಿದೆ. ಕಿಟಕಿ ಹಾಗೂ ಬಾಗಿಲು ಮುರಿಯದೆ ಕಳ್ಳತನವಾಗಿರುವುದು ಅಚ್ಚರಿ ಮೂಡಿಸಿದೆ.
ಜೂ:23 ರಂದು ಸರ್ಕಾರದಿಂದ 12 ESPON ಕಂಪನಿಯ ಪ್ರೋಜೆಕ್ಟರಗಳನ್ನು LMS ಕಾರ್ಯಕ್ರಮದ ಅನುಷ್ಠಾನದಲ್ಲಿ ಹಂಚಿಕೆ ಮಾಡಿದ್ದು, ಅವುಗಳನ್ನು ಕಾಲೇಜಿನ 12 ಕೊಠಡಿಗಳಲ್ಲಿ ಅಳವಡಿಸಲಾಗಿತ್ತು, ಅವುಗಳೆಲ್ಲವೂ ಕಾರ್ಯ ನಿರ್ವಹಿಸಿರುತ್ತಿದೆ. ಅ.21 ರಂದು ಸಂಜೆ 05-00 ಗಂಟೆಗೆ ಕಾಲೇಜಿನ ಎಲ್ಲಾ ತರಗತಿಗಳು ಮುಗಿದ ನಂತರ ಎಲ್ಲಾ ಕೊಠಡಿಗಳ ಬಾಗಿಲಿಗೆ ಬೀಗವನ್ನು ಹಾಕಿ ಬೀಗದ ಕೀಗಳನ್ನು ಕಛೇರಿಯ ಕೊಠಡಿಯಲಿ, ಇಡಲಾಗಿತ್ತು,
ದಸರಾ ಹಬ್ಬದ ಪ್ರಯುಕ್ತ ಅ:22 ರಿಂದ ಅ.24 ರವರೆಗೆ 03 ದಿನಗಳ ಕಾಲ ರಜೆ ಇದ್ದ. ಕಾರಣ ಕಾಲೇಜಿನಲಿ..ತರಗತಿಗಳು ನಡೆಯದೆ ಇದ್ದು, ಅ.25 ರಂದು ಪ್ರಾಂಶುಪಾಲರಾದ ಪ್ರಭಾಕರ್ ಮಾಂತೂರ್ ವೈಯಕ್ತಿಕ ಕಾರ್ಯದ ನಿಮಿತ್ತ ರಜೆ ಇದ್ದುದರು. ಬೆಳಿಗ್ಗೆ ಕ್ಲಾಸ್ ಗಳೆಲ್ಲ ನಡೆದಿತ್ತು.ಆದರೆ ಸಂಜೆ 4 ಗಂಟೆಗೆ ಬಿಎಸ್ ಸಿ ದ್ವಿತೀಯ ಹಾಗೂ ತೃತೀಯ ಪದವಿ ಕೊಠಡಿಗಳಲ್ಲಿ ಅಳವಡಿಸಿದ್ದ ಎಪ್ಸಾನ್ ಕಂಪನಿಯ ಎರಡು ಪ್ರೊಜೆಕ್ಟರ್ ಗಳು ಕಳುವಾಗಿದೆ.
ಡಿ ಗ್ರೂಪ್ ನೌಕರ ಎಫ್ ಡಿಎ ಬಸವಗೌಡರಿಗೆ ತಿಳಿಸಿದ್ದು ಬಸವಗೌಡರು ಪ್ರಾಂಶುಪಾಲರಿಗೆ ಕರೆ ಮಾಡಿ ಹೇಳಿದ್ದಾರೆ. ಮರುದಿನ ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಬಂದ ನಂತರ ದೂರು ದಾಖಲಿಸಿದ್ದಾರೆ. ಎರಡು ಪ್ರೋಜೆಕ್ಟರಗಳ ಅಂದಾಜು ಬೆಲೆ 1,10,000/-ರೂ ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ-https://suddilive.in/archives/2409
