ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಿಗೆ ದೀಪಾವಳಿಯ ಗಿಫ್ಟ್ ಏನು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಸುದ್ದಿ ಆದ ನಂತರ ಅಧಿಕಾರಿಗಳು ಅಲರ್ಟ್ ಆಗಬಹುದು, ಆದರೆ ಅಧಿಕಾರಿಗಳ ನಿರ್ಲಕ್ಷ್ಯತನವೋ ಅಥವಾ ಜಿಲ್ಲಾಡಳಿತ ದಿವಾಳಿಯಾಗಿದೆಯೋ ಗೊತ್ತಿಲ್ಲ. ಅರ್ಚಕರಿಗೆ ಮುಜರಾಯಿ ಇಲಾಖೆ ನೀಡಿದ ಚೆಕ್ ಬೌನ್ಸ್ ಆಗಿದೆ.
ಶಿವಮೊಗ್ಗದ ಬಿ.ಬಿ.ಸ್ಟ್ರೀಟ್ ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಿಗೆ ಮುಜರಾಯಿ ಇಲಾಖೆ 55,555 ರೂ. ಚೆಕ್ ಬೌನ್ಸ್ ಆಗಿದೆ ಎಂದರೆ ಇದು ಏನು ಅಧಿಕಾರಿಗಳ ನಿರ್ಲಕ್ಷವೋ ಅವೋ ಜಿಲ್ಲಾಡಳಿತ ದಿವಾಳಿತನಕ್ಕೆ ಬಂದು ನಿಂತಿದೆಯೋ ಗೊತ್ತಿಲ್ಲ. ಅರ್ಚಕರಿಗೆ ನೀಡಿರುವ ಸರ್ಕಾರಿ ಚೆಕ್ ಬೌನ್ಸ್ ಆಗಿದೆ.
8 ತಿಂಗಳ ಹಿಂದೆ ಇದೇ ರೀತಿ ನಡೆದಿತ್ತು. ಶಿವಮೊಗ್ಗದ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕರೆಂಟ್ ಬಿಲ್ ಕಟ್ಟದೆ ಮೆಸ್ಕಾಂ ಅವರು ಫ್ಯೂಸ್ ಕಿತ್ತುಕೊಂಡು ಹೋಗಿದ್ದ ಉದಾಹರಣೆ ಇನ್ನೂ ಕಣ್ಣಮುಂದೆ ಇರುವಾಗಲೇ ಮತ್ತೊಂದು ಮುಜರಾಯಿ ಇಲಾಖೆಯ ದೇವಸ್ಥಾನದ ಅರ್ಚಕರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಅನುಮಾನ ಮತ್ತು ಆತಂಕಕ್ಕೆ ಕರಾಣವಾಗಿದೆ.
ನ. 02 ರಂದು ಬಿಬಿ ಸ್ಟ್ರೀಟ್ ನ ಲಕ್ಷ್ಮೀ ನಾರಾಯ ದೇವಸ್ಥಾನದ ಅರ್ಚಕ ವಿನಯ್ ಗೆ ಮುಜರಾಯಿ ಇಲಾಖೆ ಚೆಕ್ ನೀಡಿತ್ತು. 6 ತಿಂಗಳ ಅರ್ಚಕರ ಸಂಬಳ, ಇಲಾಖೆ ಸರಿಯಾದ ಸಮಯದಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲದ ಕಾರಣ ಅರ್ಚಕರೇ ತಮದಮ ಕಿಸೆಯಿಂದ ವಿದ್ಯುತ್ ಬಿಲ್ ಕಟ್ಟದಿದ್ದರೆ ಮರ್ಯಾದೆ ಹೋಗೋದು ದೇವಸ್ಥಾನದ್ದೇ ಎಂದು ಅರ್ಚಕರೇ ಬಿಲ್ ಕಟ್ಟಿದ್ದರು.
ಈ ಎಲ್ಲಾ ಬಿಲ್ ಗಳು, ಪೂಜಾ ಸಾಮಾಗ್ರಿ ಸೇರಿ ಒಟ್ಟು, 55 ಸಾವಿರ ರೂ.ಗಳ ಎಸ್ ಬಿಐ ಬ್ಯಾಂಕ್ ನ ಚೆಕ್ ನೀಡಲಾಗಿತ್ತು. ಆದರೆ ಇಲಾಖೆಯ 0524101041322 ಬ್ಯಾಂಕ್ ಖಾತೆಯಲ್ಲಿ ಫಂಡ್ಸ್ ಇನ್ ಸಫೀಷೆಂಟ್ ಎಂದು ಮೆಮೊದಲ್ಲಿ ಪ್ರಕಟವಾಗಿದೆ. ಅಂದರೆ ಇಲಾಖೆ ನೀಡಿದ 647154 ಕ್ರಮ ಸಂಖ್ಯೆಯ ಚೆಕ್ ಬೌನ್ಸ್ ಆಗಿದೆ. ಹಿಂದೂ ದೇವಸ್ಥಾನದಲ್ಲಿನ ಹುಂಡಿಯಲ್ಲಿ ಬೀಳುವ ಹಣವನ್ನ ಬಾಚಿಕೊಂಡು ಹೋಗುವ ಇಲಾಖೆ ನಿರ್ವಾಹಣ ಹಣ ಕೊಡದೆಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಅನುಮಾನ ಒಂದೋ ಈ ಹಿಂದೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವೇಳೆ ನಿರ್ಲಕ್ಷ ತನ ತೋರಿದ ಅಧಿಕಾರಿಯ ವಿರುಸ್ಧ ಕ್ರಮ ತಡಗೆದುಕೊಳ್ಳದಡ ಇರುವುದು ಒಉನೆಅವರ್ತನೆಗೆ ಕಾರಣವಾಗಿದೆ. ಇಲ್ಲಾ ಮುಜರಾಯಿ ಇಲಾಖೆ ದಿವಾಳಿ ಆಗಿ ಅರ್ಚಕರಿಗೆ ದೀಪಾವಾಳಿ ಗಿಫ್ಟ್ ನೀಡಿದೆ ಎನ್ನಲಾಗಿದೆ. ಮಲೆನಾಡು ಕೇಸರಿ ಪಡೆ ತೀವ್ರ ಆಕ್ರೋಶ ವ್ಯಕ್ತಪಡಿದೆ.
ಇದನ್ನೂ ಓದಿ-https://suddilive.in/archives/2977
