ಸ್ಥಳೀಯ ಸುದ್ದಿಗಳು

ದೇವಿಗೆ ಕಾಂತಾರ ಸಿರಿ ಸಿಂಗಾರ ಅಲಂಕಾರ

ಸುದ್ದಿಲೈವ್/ಶಿವಮೊಗ್ಗ

ಸೂರ್ಯ ತನ್ನ ಪಥವನ್ನ ಬದಲಿಸುವ ಕಾಲವನ್ನ ಸಂಕ್ರಮ ಎನ್ನಲಾಗುವುದು. ದಕ್ಷಿಣಾಯಣದಿಂದ ಉತ್ತರಾಯಣದೆಡೆಗೆ ಚಲಿಸುವ ಸಮಯ ಈ ಸಂಕ್ರಮಣದಿಂದ ಆರಂಭವಾಗುತ್ತೆ. ಇನ್ನು ಮುಂದೆ ರಾತ್ರಿ 7 ಗಂಟೆಯ ವರೆಗೂ ಬೆಳಕು ಗೋಚರಿಸಲಿದೆ.

ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ.

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ.

ಶಿವಮೊಗ್ಗದಲ್ಲಿ ಹಬ್ಬದ ವಿಶೇಷವಾಗಿ ಸೀಗೆಹಟ್ಟಿಯ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತ ದೇವಿಗೆ ಕಾಂತರಾ ಸಿರಿ ಸಿಂಗಾರ ಮತ್ತು ಕಬ್ಬಿನಿಂದ ಜಲ್ಲೆಯ ಅಲಂಕಾರ ವಿಶೇಷವಾಗಿದೆ. ವಿಶೇಷ ಪೂಜೆ ನಡೆಸಿ ಸಂಕ್ರಾಂತಿ ಪ್ರಯುಕ್ತ ಭಕ್ತರಿಗೆ ಎಳ್ಳುಬೆಲ್ಲ ಹಂಚಲಾಗಿದೆ.

ಅದರಂತೆ ನಗರದ ಕೋಟೆ ಮಾರಿಕಾಂಬ ದೇವಸ್ಥಾನದಲ್ಲೂ ಕೂಡ ಸಂಕ್ರಾಂತಿ ಪ್ರಯುಕ್ತ ವಿಶೇಷ ಅಲಂಕಾರವನ್ನ ಮಾಡಿ, ಭಕ್ತಾದಿಗಳಿಗೆ ಎಳ್ಳು ಬೆಲ್ಲ ನೀಡಲಾಯಿತು. ಹೀಗೆ ಶಿವಮೊಗ್ಗದಲ್ಲಿ ಸಂಕ್ರಮಣವನ್ನ ಆಚರಿಸಲಾಗಿದೆ.

ಇದನ್ನೂ ಓದಿ-https://suddilive.in/archives/6915

Related Articles

Leave a Reply

Your email address will not be published. Required fields are marked *

Back to top button