ಸ್ಥಳೀಯ ಸುದ್ದಿಗಳು

ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ಶಿವಮೊಗ್ಗಕ್ಕೆ

ಸುದ್ದಿಲೈವ್/ಶಿವಮೊಗ್ಗ,ಜ.23:

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋ ತ್ತಮ ಮಠಾಧೀಶರಾದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ.  ಜನವರಿ 24ರಿಂದ 29 ರವರೆಗೆ ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮೀ ವೆಂಕಟರಮಣ ದೇವ ಮಂದಿರದಲ್ಲಿ ತಂಗಲಿದ್ದಾರೆ.

ಈ ಸಂಬಂಧ ಜ. 24 ರಂದು ಬುಧವಾರ ಸಂಜೆ 6 ಗಂಟೆಗೆ ಹಂಸ ವಾಹನದಲ್ಲಿ ಶ್ರೀಗಳನ್ನು ಅದ್ಧೂರಿ ಮೆರವಣಿಗೆ ಯೊಂದಿಗೆ ತೀರ್ಥಹಳ್ಳಿ ರಸ್ತೆಯ ಬಿ.ಎಸ್. ಕಾಮತ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ಎದುರು ಗೊಂಡು ಪುರ ಪ್ರವೇಶಕ್ಕೆ ಸ್ವಾಗತಿಸಲಾಗುವುದು. ನಂತರ ಬಸ್ ನಿಲ್ದಾಣ, ಬಿ.ಹೆಚ್. ರಸ್ತೆ. ಅಮೀರ್ ಅಹ್ಮದ್ ಸರ್ಕಲ್, ಹಳೆ ತೀರ್ಥಹಳ್ಳಿ ರಸ್ತೆ ಮಾರ್ಗವಾಗಿ ದೇವ ಮಂದಿರಕ್ಕೆ ಕರೆತರಲಾಗು ವುದು.

ಮೆರವಣಿಗೆಯಲ್ಲಿ ಚಂಡೆ, ಹುಲಿವೇಷ, ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ. ಶ್ರೀ ದೇವ ಮಂದಿರದಲ್ಲಿ ಪೂರ್ಣ ಕುಂಭ ಸ್ವಾಗತ ಹಾಗೂ ಪಾದ ಪೂಜೆ ಬಳಿಕ ಶ್ರೀಗಳ ಆಶರ್ವಚನ ನಡೆಯಲಿದ್ದು, ಪ್ರಸಾದ ಭೋಜನವಿರುತ್ತದೆ.

ಜ. 25 ರಂದು ಬೆಳಗ್ಗೆ 7.30ಕ್ಕೆ ನಿರ್ಮಾಲ್ಯ ವಿಸರ್ಜನೆ, 11.30ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಧ್ಯಾಹ್ನ ಪೂಜೆ, ಮಹಾ ಮಂಗ ಳಾರತಿ, ಸಂತ ರ್ಪಣೆ ಸಂಜೆ 6 ಗಂಟೆಗೆ ಸಾಮೂ ಹಿಕ ಸತ್ಯನಾರಾ ಯಣ ವ್ರತ, ಶ್ರೀಗಳವರಿಂದ ಮಹಾಮಂಗಳಾರತಿ ನಂತರ ಪ್ರಸಾದ ಭೋಜನ ಇರುತ್ತದೆ.

ಜ. 26 ರಂದು ಬೆಳಗ್ಗೆ 7.30 ಬೃಹತಿ ಸಹಸ್ರನಾಮ ಹವನ, ಶ್ರೀಗಳವರ ಉಪಸ್ಥಿತಿ, ಬೆಳಗ್ಗೆ 11 ಗಂಟೆಗೆ ಪೂರ್ಣಾ ಹುತಿ, ನಂತರ ಮಧ್ಯಾಹ್ನ ಪೂಜೆ ಮಹಾ ಮಂಗ ಳಾರತಿ ಸಂತ ರ್ಪಣೆ ರಾತ್ರಿ 8 ಗಂಟೆಗೆ ಶ್ರೀಗಳ ವರಿಂದ ಸಂಸ್ಥಾನ ಮಹಾಪೂಜೆ ಮಂಗಳಾರತಿ, ಪ್ರಸಾದ ವಿನಿಯೋಗ ಇರಲಿದೆ.

ಜ. 27 ರಂದು ಬೆಳಗ್ಗೆ 10.30 ಶ್ರೀಗಳಿಂದ ಶ್ರೀ ದೇವರಿಗೆ ಶತಕಲಶ ಸ್ನಪನ ವಿಧಾನ ಮಧ್ಯಾಹ್ನ ಪೂಜೆ, ಮಹಾ ಮಂಗಳಾರತಿ ಸಂತರ್ಪಣೆ, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ, ಶ್ರೀಗಳಿಂದ ಆಶೀ ರ್ವಚನ, ಸಮಾಜ ಬಾಂಧವರಿಗೆ ಫಲ ಮಂತ್ರಾಕ್ಷತೆ, ನಂತರ ಮಹಾ ಮಂಗಾಳರತಿ ಪ್ರಸಾದ ವಿನಿಯೋಗ ಇರಲಿದೆ. ಜ. 28 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಶ್ರೀಗಳವರಿಂದ ಸಮಾಜ ಬಾಂಧವರಿಗೆ ತಪ್ತ ಮುದ್ರಾಧಾರಣೆ, ಶ್ರೀಗಾಯತ್ರಿ ಪುರಶ್ಚರಣ ವಿಧಾನ, ಶ್ರೀಗಳ ಉಪಸ್ಥಿತಿ, ನಂತರ ಮಧ್ಯಾಹ್ನ ಪೂಜೆ ಮಹಾ ಮಂಗಳಾರತಿ ಸಂತರ್ಪಣೆ, ಸಂಜೆ 6 ಗಂಟೆಗೆ ಸಮಾಜದ ಮಹಿಳಾ ಸದಸ್ಯ ರಿಂದ ಕೊಂಕಣಿ ನೃತ್ಯರೂಪಕ ಸೀತಾ ಕಲ್ಯಾಣ ರಾತ್ರಿ 8 ಗಂಟೆಗೆ ಶ್ರೀಗಳವರಿಂದ ಸಂಸ್ಥಾನ ಪೂಜೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ.

ಜ. 29 ರಂದು ಸೋಮ ವಾರ ಬೆಳಗ್ಗೆ 11 ಗಂಟೆಗೆ ಭಜನೆ, ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನ ಪೂಜೆ, ಮಹಾ ಮಂಗಳಾರತಿ, ಸಂತರ್ಪಣೆ, ಭಿಕ್ಷಾ ಸೇವೆ. ಮಧ್ಯಾಹ್ನ 2 ಗಂಟೆಗೆ ಶ್ರೀಗಳನ್ನು ಮೈಸೂರು ಮೊಕ್ಕಾಂಗೆ ಬೀಳ್ಕೊಡ ಲಾಗುವುದು. ಶ್ರೀಗಳ ಮೊಕ್ಕಾಂನ ಎಲ್ಲಾ ಕಾರ್ಯ ಕ್ರಮಗಳಲ್ಲಿ ಸಮಾಜಬಾಂಧವರು ಪಾಲ್ಗೊಂಡು ತನು, ಮನ, ಧನಗಳಿಂದ ಸಹಕರಿಸಿ ಶ್ರೀ ಹರಿ ಗುರುಗಳ ಕೃಪೆಗೆ ಪಾತ್ರರಾಗ ಬೇಕಾಗಿ ಶಿವಮೊಗ್ಗ ಶ್ರೀ ಲಕ್ಷ್ಮೀ ವೆಂಕಟರಮಣ ದೇವಮಂದಿ ರದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕೋರಿದ್ದಾರೆ.

ಸೇವೆ ಮಾಡಲು ಇಚ್ಛಿಸು ವವರು 90197 22077, 944876 6819 ಅಥವಾ ದೇವ ಮಂದಿರ ಕಾರ್ಯಾಲಯ ಸಂಪರ್ಕಿಸಬಹುದು.

ಇದನ್ನೂ ಓದಿ-https://suddilive.in/archives/7543

Related Articles

Leave a Reply

Your email address will not be published. Required fields are marked *

Back to top button