ಸ್ಥಳೀಯ ಸುದ್ದಿಗಳು

ನಮ್ಮ ಕುಟುಂಬದ ವಿರುದ್ಧ ಮಾತನಾಡಿದವರು ಇಂದು ಏನಾಗಿದ್ದಾರೆ, ದೇವರು ನೋಡಿಕೊಳ್ಳುತ್ತಾರೆ ಎಂದು ಸಂಸದರುಹೇಳಿದ್ದು ಯಾರಿಗೆ?

ಸುದ್ದಿಲೈವ್/ಶಿವಮೊಗ್ಗ

ಅಮಿತ್ ಶಾ ವಿರುದ್ದ ಸಿಎಂ ಪುತ್ರ ಯತೀಂದ್ರ ಆರೋಪಕ್ಕೆ ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.‌ ಅಮಿತ್ ಶಾ ಆಧುನಿಕ ಸರ್ದಾರ್ ಪಟೇಲ್ ಎಂದು ಬಣ್ಣಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ರಾಷ್ಟ್ರದ ಹೆಮ್ಮೆಯ ಗೃಹ ಸಚಿವರ ಬಗ್ಗೆ ಯತೀಂದ್ರ ಅವಹೇಳನ ಮಾತನಾಡಿದ್ದಾರೆ.‌ ಜಮ್ಮು ಕಾಶ್ಮೀರ ‌ಮಾರಾಟ ಮಾಡಲು ಹೋಗಿದ್ದವರಿಗೆ ಆರ್ಟಿಕಲ್ 370 ರದ್ದು ಮೂಲಕ ಉತ್ತರ ಕೊಟ್ಟರು. ರಾಜಕಾರಣದಲ್ಲಿ ಬೆಳೆಯುತ್ತಿದ್ದೀರಾ, ತಂದೆಗೆ ತಕ್ಕಂತ ಮಗನಾಗಿ ಗೌರವ ಉಳಿಸುವ ಕೆಲಸ ಮಾಡಿ ಎಂದು ಹಿತವಚನ‌ ನುಡಿದಿದ್ದಾರೆ.‌

ಹಿರಿಯ ಮಾರ್ಗದರ್ಶನದಲ್ಲಿ ಬೆಳೆಯಬೇಕು. ನಾವು ನೀವು ಎಲ್ಲರೂ ಒಂದೇ ವಯಸ್ಸಿನವರು, ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದರೆ ಒಳ್ಳೆಯದು.

ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಸಂಸದರು, ರಾಷ್ಟ್ರದ ವಿಚಾರ, ಹಿಂದುತ್ವದ ವಿಚಾರದ ಬಗ್ಗೆ ಚುನಾವಣೆ ನಡೆಯುತ್ತದೆ.ಚುನಾವಣೆ ಸಂದರ್ಭದಲ್ಲಿ ಈ ರೀತಿಯ ವೈಯಕ್ತಿಕ ಹೇಳಿಕೆ ಸರಿಯಲ್ಲ. ಆಧುನಿಕ ಯುಗದಲ್ಲಿ ಮೆಡಿಕಲ್ ಸೈನ್ಸ್ ಮುಂದುವರಿದಿದೆ. ವೈಯಕ್ತಿಕವಾಗಿ ಮಾತನಾಡೋದು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಸಲಹೆ ನೀಡಿದರು.

ಬರಗಾಲದಲ್ಲಿ ರಾಜ್ಯ ಸರಕಾರ ರೈತರ ಕೈ ಹಿಡಿಯುವ ಕೆಲಸ ಮಾಡಲಿಲ್ಲ.ವೈಯಕ್ತಿಕವಾಗಿ ಅಪಪ್ರಚಾರ ಮಾಡೋದು ಬಿಟ್ಟು ರೈತರ ಬವಣೆ ನೀಗಿಸುವ ಕೆಲಸ ಮಾಡಿ. ಬಿಜೆಪಿ ಸರಕಾರ ಕೊಡುತ್ತಿದ್ದ ಪ್ರೋತ್ಸಾಹ ಧನ ನಿಲ್ಲಿಸಿದರು. ಈಗಲಾದರೂ ರೈತರ ಬವಣೆ ನೀಗಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸುಮ್ಮನೆ ಸುಳ್ಳು ಹೇಳಿಕೆ ನೀಡಿದ ನಿಮಗೆ ಮತದಾರರು ಅಧಿಕಾರಕ್ಕೆ ತಂದಿದ್ದಾರೆ.ಇಲ್ಲದಿದ್ದರೆ ಜನ ಉತ್ತರ ಕೊಡ್ತಾರೆ. ಯಡಿಯೂರಪ್ಪ ಕುಟುಂಬದ ಬಗ್ಗೆ ಈಶ್ವರಪ್ಪ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು ಈಶ್ವರಪ್ಪ ಕಳೆದ 15 ದಿನದ ಹಿಂದೆ ರಾಘಣ್ಣ ಒಳ್ಳೆಯ ಸಂಸದ ಅಂತಿದ್ದರು. ಭಾರಿ ಅಂತರದಿಂದ ಗೆಲ್ಲಿಸಬೇಕು ಅಂತಿದ್ದರು. ಯಡಿಯೂರಪ್ಪ ಈಶ್ವರಪ್ಪ ಸ್ನೇಹಿತರು ಜೊತೆ ಜೊತೆಗೆ ರಾಜಕಾರಣ ಮಾಡಿದವರು. ಯಾರೇ ಟೀಕೆ ಮಾಡಿದರೂ ನೋವಾಗಲ್ಲ.ಈಶ್ವರಪ್ಪ ಅಂತಹವರು ಮಾತನಾಡಿದ್ರೆ ನನಗೆ ನೋವಾಗ್ತದೆ ಎಂದರು.

ನಮ್ಮ ಕುಟುಂಬದ ಬಗ್ಗೆ ಹಲವರು ಟೀಕೆ ಮಾಡಿದ್ದರು. ಟೀಕೆ ಮಾಡಿದವರೆಲ್ಲಾ ಏನಾಗಿ ಹೋದರು ಅಂತಾ ಗೊತ್ತಿದೆ. ದೇವರು ಇದ್ದಾನೆ ದೇವರು ನೋಡಿಕೊಳ್ಳುತ್ತಾನೆ ಎಂದರು.

ಇದನ್ನೂ ಓದಿ-https://suddilive.in/archives/11769

Related Articles

Leave a Reply

Your email address will not be published. Required fields are marked *

Back to top button