ರಾಜಕೀಯ ಸುದ್ದಿಗಳುಸ್ಥಳೀಯ ಸುದ್ದಿಗಳು

ರಾಹುಲ್ ಗಾಂಧಿಯನ್ನ ಬಂಧಿಸುವಂತೆ ಬಿಜೆಪಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಇಂದು ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.

ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನ, ಶಿವಮೊಗ್ಗ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದಿಂದ ಪ್ರತಿಭಟನೆ ನಡೆಸಿದೆ.ಮಹಾವೀರ ವೃತ್ತದಲ್ಲಿ ಕುಳಿತುಕೊಂಡು ಬಿಜೆಪಿ ಕಾರ್ಯಕರ್ತರು  ಧರಣಿ ಕುಳಿತಿದ್ದಾರೆ.

ನರೇಂದ್ರ ಮೋದಿ ಅವಮಾನಿಸಿದ ರಾಹುಲ್ ಗಾಂಧಿ ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ.ಮೇಘರಾಜ್, ಮಾಜಿ ಸಚಿವ ಈಶ್ವರಪ್ಪ ಭಾಗಿಯಾಗಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ನವರಿಗೆ ಎಷ್ಟು ಬೈದ್ರು ಮಾನ ಮರ್ಯಾದೆ ಇಲ್ಲ. ಯಾವ ಯಾವ ಪದದಲ್ಲಿ ಬೈಯಬೇಕೋ ಗೊತ್ತಿಲ್ಲ. ಗೊತ್ತಿಲ್ಲದಿದ್ದರೆ ಗೊತ್ತಿದ್ದವರ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ರಾಹುಲ್ ಗಾಂಧಿ ಎಲ್ ಕೆಜಿ ವಿದ್ಯಾರ್ಥಿಗು ಕಡೆಯಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಕ್ಲಾಸ್ ತಗೋಬೇಕಿದೆ. ನರೇಂದ್ರ ಮೋದಿ ಅವರನ್ನು ನಾವು ಯಾರು ಒಬಿಸಿ ನಾಯಕ ಅಂತಾ ಅಂದುಕೊಂಡಿಲ್ಲ. ನರೇಂದ್ರ ಮೋದಿ ಒಬ್ಬ ಹಿಂದು ನಾಯಕ. ರಾಹುಲ್ ಗಾಂಧಿ ಹೇಳಿಕೆ ತುಂಬಾ ಬಾಲಿಶವಾದ ಹೇಳಿಕೆಯಾಗಿದೆ. ನಾನು ರಾಹುಲ್ ಗಾಂಧಿ ಅವರನ್ನು ನೇರವಾಗಿ ಕೇಳ್ತೇನೆ ನೀನು ಯಾವ ಜಾತಿಯಪ್ಪ?ಸಾರ್ವಜನಿಕರು ಹೇಳ್ತಿದ್ದಾರೆ ಮಿಶ್ರತಳಿ, ಬೆರಕೆ ಅಂತಾ. ನರೇಂದ್ರ ಮೋದಿ ಅವರ ತಾಯಿ ಯಾರು ಅಂದ್ರೆ 140 ಕೋಟಿ ಜನ ಭಾರತ ಮಾತೆ ಅಂತಾರೆ.

ರಾಹುಲ್ ಗಾಂಧಿ ನಿಮ್ಮ ತಾಯಿ ಸೋನಿಯಾಗಾಂಧಿ, ನಿಮ್ಮಪ್ಪ ರಾಜೀವ್ ಗಾಂಧಿ. ನಿಮ್ಮ ಅಜ್ಜ ಯಾರು, ನಿಮ್ಮ ಅಜ್ಜಿ ಯಾರು? ನಿಮ್ಮ ಅಜ್ಜ ಫಿರೋಜ್ ಖಾನ್ ಅವರ ಜಾತಿ ಯಾವ್ದು? ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿ ತಿಳಿದುಕೊಳ್ಳಪ್ಪ ಎಂದು ದೂರಿದರು.

ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿದ್ದೀರಾ. ನರೇಂದ್ರ ಮೋದಿ ಅವರಿಗೆ ಅಪಮಾನ‌‌ ಮಾಡಿದ್ರೆ ನಿಮಗೆ ಈಡಿ ದೇಶ ಕ್ಷಮಿಸಲ್ಲ. ನಿಮಗೆ ಗೌರವ ಸಿಗಬೇಕು ಅಂದ್ರೆ ಕ್ಷಮೆ ಕೇಳಿ. ಸಿದ್ದರಾಮಯ್ಯ ರಾಹುಲ್ ಗಾಂಧಿ ಪರವಾಗಿ ನೀವಾದ್ರು‌ ಕ್ಷಮೆ ಕೇಳಿ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/8880

Related Articles

Leave a Reply

Your email address will not be published. Required fields are marked *

Back to top button