ಗಾರ್ಡನ್ ಏರಿಯಾದಲ್ಲಿ ಸಂಚಾರಿ ಪೊಲೀಸರ ಖಡಕ್ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ಗಾರ್ಡನ್ ಏರಿಯಾದಲ್ಲಿ ಸಂಚಾರಿ ಪೊಲೀಸರು ಫುಟ್ ಪಾತ್ ಆಪರೇಷನ್ ಮಾಡಿದ್ದಾರೆ. ಅಂಗಡಿ ಇದ್ದರೂ ಫುಟ್ ಪಾಟ್ ಮೇಲೆ ಮಾರಾಟ ವಸ್ತುಗಳನ್ನ ಡಿಸ್ಪ್ಲೇ ಮಾಡಲು ಫುಟ್ ಪಾತ್ ಕಬ್ಜಾ ಮಾಡಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಈ ಬೆನ್ನಲ್ಲೇ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಬಂದಿದ್ದಾರೆ. ಯಾವುದಕ್ಕೂ ಇರಲಿ ಎಂದು 6 ಸೈಲೆನ್ಸರ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಬಳಕೆ ನಿಷೇಧವಾಗಿದ್ದು ಈ ಕುರಿತು ಎಚ್ಚರಿಕೆ ನೀಡುವ ಸಂಬಂಧ 6 ಸೈಲೆನ್ಸರ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಸುರೇಶ್ ಎಂ, ಸಂಚಾರಿ ಪೊಲೀಸ್ ವೃತ್ತದ ಸಿಪಿಐ ಸಂತೋಷ್ ಕುಮಾರ್ ಡಿ. ಕೆ ಮಾರ್ಗದರ್ಶನದಲ್ಲಿ ಪಶ್ಚಿಮ ಸಂಚಾರಿ ಪೊಲೀಸ್ ನ ಪಿಎಸ್ಐ ತಿರುಮಲೇಶ್ ಸಿಬ್ಬಂಧಿಗಳನ್ನೊಗೊಂಡ ತಂಡವು ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಕರ್ನಾಟಕ ಬ್ಲಾಕ್ ಸ್ಮಿತ್ ಮತ್ತು ವೆಲ್ಡಿಂಗ್ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ, ದೋಷಪೂರಿತ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಮುಂದೆ ಫುಟ್ ಪಾತ್ ಗೆ ಇಳಿದು ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಲ್ಲಿ, ಕರ್ಕಶ ಶಬ್ದದ ಸೈಲೆನ್ಸರ್ ಮಾರಾಟ ಕಂಡು ಬಂದಲ್ಲಿ ಕ್ರಮ ಜರುಗಿಸುವ ಬಗ್ಗೆ ತಿಳುವಳಿಕೆ ನೀಡಲಾಯಿತು.
ಇದನ್ನೂ ಓದಿ-https://suddilive.in/archives/2117
