ಸ್ಥಳೀಯ ಸುದ್ದಿಗಳು

ಕೆಪಿಸಿಸಿ ವಕ್ತಾರ ಆಯನೂರ ಮಂಜುನಾಥ ರವರಿಗೆ ಎನ್.ಎಚ್.ಎಂ ನೌಕರರಿಂದ ಅಭಿನಂದನೆ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರಿಗೆ  ಶ್ರೀನಿವಾಸಚಾರಿ ವರದಿಯಂತೆ ಶೇಕಡಾ 15%ರಷ್ಟು ವೇತನ ಹೆಚ್ಚಿಸಿ ಆದೇಶ ಮಾಡಿ ಅನುದಾನವನ್ನು ಆಯಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿರುವುದು ತುಸು ನೆಮ್ಮದಿ‌ ನೀಡಿದೆ ಎಂದಿರುವ KSHCOEA-BMS ಸಂಘ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ರಿಗೆ ಅಭಿನಂದನೆ ತಿಳಿಸಿದೆ.

ಮಜಿ ಸಂಸದ ಆಯನೂರು ಮಂಜುನಾಥ ರವರು ಎಂಎಲ್ ಸಿ ಆಗಿದ್ದಾಗ ತಮ್ಮ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ-ಹೊರಗುತ್ತಿಗೆ ನೌಕರರರು ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಕಷ್ಟವನ್ನು ಸದನದ ಒಳಗೆ ಹಾಗು ಹಿಂದಿನ ಸರಕಾರದ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.

ಸದನದ ಹೊರಗೆ ತಾವು ಆಡಳಿತ ಪಕ್ಷದಲ್ಲಿದ್ದರೂ ಸಹ ನೌಕರರ ಪರವಾಗಿ ಗಟ್ಟಿ ಧ್ವನಿಯಾಗಿ ನಿಂತರು.  ಶ್ರೀನಿವಾಸಾಚಾರಿ ವರದಿಯ ಸದಸ್ಯರಾಗಿ ಸಭೆಯಲ್ಲಿ 30% ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಸರಕಾರ15% ಶಿಪಾರಸ್ಸು ಮಾಡಿ ಬೇಗ ಕೊಡದಿದ್ದಕ್ಕೆ ಹೋರಾಟ ಕೈಗೊಂಡಿದ್ದರು.‌ ಕೊನೆಗೆ ಮಾರ್ಚ್ ನಲ್ಲಿ ಸರ್ಕಾರ ಆದೇಶ ಮಾಡಿದರು ಅನುದಾನ ಬಿಡುಗಡೆಯಾಗಿರಲಿಲ್ಲ.

ಹೊಸ ಸರಕಾರದ ಜೊತೆಯಲ್ಲಿ ನೌಕರರ ಪ್ರತಿನಿಧಿಗಳನ್ನು ತಾವು ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಿ ನೌಕರರ ಮುಖದಲ್ಲಿ ಹೊಸ ವರ್ಷಕ್ಕೆ ಹರ್ಷಕ್ಕೆ ಕಾರಣವಾಗಿದ್ದಾರೆ.ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಬರೀ 20000 ಸಂಬಳಕ್ಕಿಂತ ಕಡಿಮೆ ಇದ್ದವರಿಗೆ ಕೊಡಲಾಗಿದ್ದು ಇನ್ನೂಳಿದ 20000ಕ್ಕಿಂತ ಮೇಲ್ಪಟ್ಟು ವೇತನ ಪಡೆಯುವವರಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಕೊಡುವಂತೆ ಹಾಗೂ ಬಾಕಿ ಉಳಿದ ಬೇಡಿಕೆಗಳಾದ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ಜೀವ ವಿಮೆ, ಆರೋಗ್ಯ ವಿಮೆ ಮತ್ತು ಸೇವಾ ಭದ್ರತೆ ನೀಡಬೇಕೆಂದು  ಆಯನೂರ ಮಂಜುನಾಥ ರವರು ಹೋರಾಟದ ರೂಪದಲ್ಲೇ ಸರ್ಕಾರದ ಗಮನ ಸೆಳೆದಿದ್ದರು.‌

ಗಮನ ಸೆಳೆದ ಆಯನೂರು ಮಂಜುನಾಥರಿಗೆ ಇಂದು  ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಅಭಿನಂದನೆಗಳು ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಸಂಘ ತಿಳಿಸಿದೆ.‌

ಈ ಸಂದರ್ಭದಲ್ಲಿ KSHCOEA-BMS ನ ಶಿವಮೊಗ್ಗ ರಾಜ್ಯ ಖಜಾಂಚಿ ಶ್ರೀ ರುದ್ರೇಶ H N. ಜಿಲ್ಲಾ ಅಧ್ಯಕ್ಷರಾದ ಶ್ರೀ ಶಂಕರ್.ಜಿ. ಡಾ.ಹೇಮಲತಾ, ಜಿಲ್ಲಾ ಸಂಘದ ಗೌರವ ಅಧ್ಯಕ್ಷರಾದ ಡಾ.ರಾಘವೇಂದ್ರ. ಶಿಲ್ಪಿ, ಜಿಲ್ಲಾ ಪ್ರಮುಖರಾದ ಡಾ.ಶರೀಫಾ,ಕಿರಣ್,ರವಿ,ನವೀನ್, ಸಂಜೀವ್,ಹರ್ಷಾ ಇತರರು ಇದ್ದರು.

ಇದನ್ನೂ ಓದಿ-https://suddilive.in/archives/5987

Related Articles

Leave a Reply

Your email address will not be published. Required fields are marked *

Back to top button