ರಾಜಕೀಯ ಸುದ್ದಿಗಳು
ಶಿವಮೊಗ್ಗ ಪಾಸ್ ಪೋರ್ಟ್ ಕಚೇರಿಗೂ ತಗುಲಿದ ಸರ್ವರ್ ಡೌನ್ ಸಮಸ್ಯೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಅಂಚೆ ಕಚೇರಿಯಲ್ಲಿರುವ ಪಾಸ್ ಪೋರ್ಟ್ ಅರ್ಜಿದಾರರಿಗೆ ಇಂದು ಸರ್ವರ್ ಡೌನ್ ಬಿಸಿ ತಗುಲಿದೆ. ಯಾವತ್ತೂ ಸರ್ವರ್ ಡೌನ್ ಆಗದ ಕಚೇರಿಯಲ್ಲಿ ಸರ್ವರ್ ಡೌನ್ ಕಂಡು ಸಾರ್ವಜನಿಕರು ಬೇಸರಗೊಂಡಿದ್ದಾರೆ.
ದಿನಕ್ಕೆ 50 ಪಾಸ್ ಪೋರ್ಟ್ ಗೆ ಅರ್ಜಿ ಮಾತ್ರ ಕರೆಯಲಾಗುತ್ತದೆ. ಈ ದಿನಕ್ಕೆ ಇಂತಿಂತಹವರು ಬರಬೇಕು ಎಂದು ಪತ್ರಕಳುಹಿಸುವ ಕಾರಣ ಇಂದು ಕಚೇರಿಗೆ ಬಂದ ಗ್ರಾಹಕರಿಗೆ ಸರ್ವರ್ ಡೌನ್ ಆಗಿರುವುದು ಮತ್ತೊಂದಿಷ್ಟು ದಿನ ಕಾಯುವಂತೆ ಮಾಡಿದೆ.
ಬೇಸರದಿಂದ ಗ್ರಾಹಕರು ವಾಪಾಸ್ ಆಗುತ್ತಿದ್ದು ಪಾಸ್ ಪೋರ್ಟ್ ಕಚೇರಿಯ ಮುಂದೆ ಸರ್ವರ್ ಡೌನ್ ಆಗಿದೆ ಸಹಕರಿಸಲು ಮನವಿ ಎಂದು ಬೋರ್ಡ್ ಹಾಕಲಾಗಿದೆ. ಇಷ್ಟುದಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾಡುತ್ತಿದ್ದ ಸರ್ವರ್ ಡೌನ್ ಸಮಸ್ಯೆ ಶಿವಮೊಗ್ಗದ ಪಾಸ್ ಪೋರ್ಟ್ ಕಚೇರಿಗೂ ಶಿಫ್ಟ್ ಆಗಿದೆ.
ಇದನ್ನೂ ಓದಿ-https://suddilive.in/archives/2812
