ಸ್ಥಳೀಯ ಸುದ್ದಿಗಳು

ಆರ್ ಪ್ರಸನ್ನ ಕುಮಾರ್ ಅಧಿಕಾರ ಸ್ವೀಕಾರ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಆರ್ ಪ್ರಸನ್ನ ಕುಮಾರ್ ಇಂದು ಪಕ್ಷದ ಬಾವುಟ, ರಿಜಿಸ್ಟ್ರರ್ ಬುಕ್ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಈ ಹಿಂದೆ ಪ್ರಸನ್ನ ಕುಮಾರ್ ಅಧ್ಯಕ್ಷರಾಗಿದ್ದಾಗ ನೇಮಕಗೊಂಡ ಪದಾಧಿಕಾರಿಗಳನ್ನ ಬದಲಾವಣೆ ಮಾಡಿಲ್ಲ. ಕೆಲವರಿಗೆ ಸಹಕಾರ ಸಿಕ್ಕಿದೆ ಕೆಲರಿಗೆ ಸಿಕ್ಕಿಲ. ಎಲ್ಲರೂ ಪಕ್ಷದ ಅಡಿ ಕೆಲಸ ಮಾಡಿದ್ದೇವೆ. ಕುಂದುಕೊರತೆಗಳು ನನ್ನ ಅಧ್ಯಕ್ಷತೆಯಲ್ಲಿ ಕಂಡು ಬಂದರೆ ಸರಿಪಡಿಸಿಕೊಳ್ಳುವಂತೆ ಕೋರಿದರು.

ಗೀತ ಶಿವರಾಜ್ ಕುಮಾರ್ ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ. ನಾನು ಪಚುನಾವಣೆ ಟಿಕೇಟ್ ಕೇಳಿದ್ದೆ ಕೊಡಲಿಲ್ಲ. ನನಗೆ ಮಂಡಳಿ ಅಧ್ಯಕ್ಷನಾದ ಮೇಲೆ ಜಿಲ್ಲಾ ಅದ್ಯಕ್ಷ ಸ್ಥಾನ ಬೇಡ ಎಂದಿದ್ದೆ. ಕೆಪಿಸಿಸಿ ಅಧ್ಯಕ್ಷರು ಚುನಾವಣೆ ಮುಗಿಯುವ ವರೆಗೂ ಮುಂದು ವರೆಯಿರಿ ಎಂದಿದ್ದರು. ಆದರೆ ನಾನೇ ಬೇಡ ಎಂದು ಬಂದಿದ್ದೆ. ನನಗೆ ಪಕ್ಷ ಅಧ್ಯಕ್ಷ ಸ್ಥಾನ ಹೋಗಿರುವುದು ಬೇಸರವಿಲ್ಲ ಸಂತೀಷದಿಂದ ಹಸ್ತಂತರಿಸಿರುವೆ. ನನ್ನ‌ಅಧ್ಯಕ್ಷ ಸ್ಥಾನದಲ್ಲಿ ಸಹಕರಿಸಿದ ಎಲ್ಲಾ‌ನಾಯಕರಿಗೂ ಕಾರ್ಯಕರ್ತರಿಗೂ ಧನ್ಯವಾದಗಳು ಎಂದರು.

ಯಾವ ಹೈಕಮ್ಯಾಂಡ್ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಿರಿ ಎಂದು ಹೇಳಿಲ್ಲ. ಸ್ವಂ‌ಇಚ್ಛೆಯಿಂದ‌ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿರುವುದಾಗಿ ಹೇಳಿದರು.

ಅಧಿಕಾರ ಸ್ವೀಕರಿಸಿ ಮಾತನಸಡಿದ ಆರ್.ಪ್ರಸನ್ನ ಕುಮಾರ್, ನಿಕಟಪೂರ್ವ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯಾವರಿಗೆ ನನ್ನನ್ನ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ಧನ್ಯವಾಗಳು ತಿಳಿಸಿದರು.

ಎಲ್ಲರೂ ಒಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡೋಣ. ಜನರಿಗೆ ಸುಳ್ಳು ಬಿಜೆಪಿಯ ನೂನ್ಯತೆಯ ಬಗ್ಗೆ ಜನರಿಗೆ ಅರ್ಥೈಸಬೇಕಿದೆ. ಪೆಟ್ರೋಲ್ ದರ ನ ನೂರರ‌ಗಡಿ ದಾಟಿದೆ‌ ಆದರೆ ಇದು ಜನರಿಗೆ ಅರ್ಥ ಆಗ್ತಿಲ್ಲ ಎಂಬ ಬೇಸರವನ್ನೂ ಹೊರಹಾಕಿದರು.

ನನ್ನ ಬೂತ್ ನನ್ನ ಜವಬ್ದಾರಿ ಎಂಬ ಅಭಿಯಾನದ ಅಡಿ ಈ ಬಾರಿ ಚುನಾವಣೆ ಎದುರಿಸೋಣ. ನಮ್ಮ ಬೂತ್ ಗಳಲ್ಲಿ ಶೇ.50 ರಷ್ಟು ಮತ ಪಡೆಯೋಣ. ಜನರಿಗೆ ಬಿಜೆಪಿ ಕರ್ಮಕಾಙಡಗಳ ಬಗ್ಗೆ ವಿವರಿಸಬೇಕು. ರಾಜ್ಯ ಸರ್ಕಾರ 56 ಸಾವಿರ ಕೋಟಿ ಗ್ಯಾರೆಂಟಿ ರೂಪದಲ್ಲಿ ಜನರಿಗೆ ತಲುಪುತ್ತಿದೆ. ಇದನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದರು.

ಅಭ್ಯರ್ಥಿ ಅಲಭ್ಯತೆ ಬಗ್ಗೆ ಕಾರ್ಯಕರ್ತರು ತಲೆಕೆಡೆಸಿಕೊಳ್ಳಬಾರದು. ನನ್ನ ಬೂತ್ ನಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಬೇಕು. ಪಕ್ಷದ ಕಾರ್ಯಕರ್ತರು ಬೇರೆಯವರಿಗೆ ಗೌರವ ಮತ್ತು ಶಿಸ್ತು ಪಾಲಿಸುವಂತೆ ಕರೆ ನೀಡಿದರು.

ಇದನ್ನೂ ಓದಿ-https://suddilive.in/archives/11990

Related Articles

Leave a Reply

Your email address will not be published. Required fields are marked *

Back to top button