ರಾಜಕೀಯ ಸುದ್ದಿಗಳು

ಈಶ್ವರಪ್ಪನವರ ಆರೋಪಕ್ಕೆ ಸಂಸದರು ಮೌನಕ್ಕೆ ಜಾರುದ್ರಾ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಮತ್ತು ಮಾಜಿ ಡಿಸಿಎಂ ಈಶ್ವರಪ್ಪನವರ ನಡುವೆ ತ್ರಿಕೋನ ಸ್ಪರ್ಧೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವೇದಿಕೆ ಸಜ್ಜಾಗುತ್ತಿದೆ.

ಬೈಕ್ ರ್ಯಾಲಿ, ಸಭೆಗಳು, ಬೈಠಕ್ ಗಳು ಮೂವರು ಅಭ್ಯರ್ಥಿಗಳಿಂದ ನಡೆಯುತ್ತಿದೆ. ಇಂದು ಬೆಳಿಗ್ಗೆ ಮಾಜಿ ಡಿಸಿಎಂ ಈಶ್ವರಪ್ಪ ನಗರ ಮತ್ತು ಗ್ರಾಮಾಂತರ ಮಟ್ಟದ ಬೂತ್ ಕಾರ್ಯಕರ್ತರ ಸಭೆ ನಡೆದಿದೆ. ಸಂಜೆ ಭಂಟರ ಭವನದಲ್ಲಿ ಬಿಜೆಪಿಯಿಂದ ಸ್ನೇಹ ಮಿಲನ ಕಾರ್ಯಕ್ರಮ ನಡೆದಿದೆ.

ಸ್ನೇಹ ಮಿಲನ ಸಭೆಯಲ್ಲಿ ಸಂಸದ ರಾಘವೇಂದ್ರ ಈಶ್ವರಪ್ಪನವರ ವಿರುದ್ಧ ಮಾತನಾಡದಿದ್ದರೂ ಬಿಜೆಪಿಯ ಜಿಲ್ಲಾ ಮಟ್ಟದ ನಾಯಕರು ನೇರವಾಗಿ ಈಶ್ವರಪ್ಪನವರ ವಿರುದ್ಧ ಆರೋಪ ಮಾಡದಿದ್ದರು. ಈಶ್ವರಪ್ಪನವರು ತಾನು ಗೆದ್ದು ಮೋದಿ ಕೈ ಎತ್ತುವ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಕೈಎತ್ತಬೇಕೆವಿನಃ ಬೇರೆಯವರು ಅಲ್ಲ ಎಂದು ಪರೋಕ್ಷವಾಗಿ ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಚುನಾವಣೆ ಯಾರ ವಿರುದ್ಧವೂ ಅಲ್ಲ. ಆದರೆ ಮೋದಿ ಕೈ ಬಲಪಡಿಸುವ ಚುನಾವಣೆ ಎಂದು ಬಿಜೆಪಿಯ ಇತರೆ ನಾಯಕರು ಹೇಳಿದ್ದಾರೆ. ಮತ್ತೋರ್ವರು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಸದರು ಮಾತ್ರ ಯಾವುದೇ ಕಾರಣಕ್ಕೂ ಈಶ್ವರಪ್ಪನವರ ವಿರುದ್ಧ ಮಾತನಾಡಿಲ್ಲ. ಮಾಧ್ಯಮಗಳಿಗೆ ಅಲ್ಲಲ್ಲಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ವಿನಃ ವೇದಿಕೆಯ ಮೇಲೆ ಮಾತನಾಡುತ್ತಿಲ್ಲ.

ಈಶ್ವರಪ್ಪನವರ ಬಂಡಾಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಬಿಎಸ್ ವೈ ಕುಟುಂಬದ ವಿರುದ್ಧ ನನ್ನ ಸಮರ ಎಂದು‌ ಮಾಜಿ ಡಿಸಿಎಂ ಹೋದಲೆಲ್ಲಾ ಹೇಳ್ತಾ ಇದ್ದಾರೆ. ಆದರೆ ಸಂಸದರ ಮೌನ ಅರ್ಥವಾಗುತ್ತಿಲ್ಲ. ಈಶ್ವರಪ್ಪನವರ ವಿರುದ್ಧ ಪ್ರತಿಕ್ರಿಯೆ ನೀಡದ ಹಿಂದೆಯೂ ಸ್ಟ್ರ್ಯಾಟಜಿ ಇದೆಯಾ? ಅಥವಾ ಈಶ್ವರಪ್ಪನವರ ಆರೋಪಕ್ಕೆ ಪ್ರತಿಕ್ರಿಯಿಸಲು ಯೋಗ್ಯವಿಲ್ಲ ಎಂದು ಪರಿಗಣಿಸಲಾಗಿದೆ ಎಂಬುದು ನಿಗೂಢವಾಗಿ ಉಳಿದಿದೆ.

ಅನೇಕ ದಿನಗಳ ನಂತರ ಸ್ನೇಹ ಮಿಲನದ ಹೆಸರಿನಲ್ಲಿ ಸಂಸದರು ವೇದಿಕೆ ಸೃಷ್ಠಿಸಿಕೊಂಡು ಪಕ್ಷದ ಕಾರ್ಯಕರ್ತರು ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದಾರೆ. ಆದರೆ ಈಶ್ವರಪ್ಪನವರ ಆರೋಪವನ್ನಾಗಲಿ, ಅವರ ವಿರುದ್ಧ ವಾಗ್ದಾಳಿಯಾಗಲಿ, ಆರೋಪವಾಗಲಿ ಮಾತನಾಡುತ್ತಿಲ್ಲ. ಆದರೆ ಬಿಜೆಪಿಯ ಇತರೆ ನಾಯಕರು ಪರೋಕ್ಷವಾಗಿಯಾದರೂ ಮಾತನಾಡುತ್ತಿದ್ದಾರೆ. ಸಂಸದರ ಮೌನ ಮಾತ್ರ ಕುತೂಹಲವನ್ನ ಹೆಚ್ಚಿಸಿದೆ.

ಇದನ್ನೂ ಓದಿ-https://suddilive.in/archives/11537

Related Articles

Leave a Reply

Your email address will not be published. Required fields are marked *

Back to top button