ರಾಜಕೀಯ ಸುದ್ದಿಗಳು

ಹನುಮಧ್ವಜ ತೆರವುಗೊಳಿಸಿದ್ದೀರಿ, ಝೇಂಡಾಕಟ್ಟೆಗಳಲ್ಲಿನ ಬಾವುಟಗಳ ಕಥೆಯೇನು? ಗುಡುಗಿದ ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

ಮಂಡ್ಯ ಜಿಲ್ಲೆಯ ಕೆರೆಗೋಡ್ ಗ್ರಾಮದಲ್ಲಿ ಹನುಮ ಧ್ವಜವನ್ನ  ಕೆಳೆಗಿಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಮುಷ್ಕರಕ್ಕೆ ಕರೆಕೊಟ್ಟ ಹಿನ್ನಲೆಯಲ್ಲಿ ಶಿವಮೊಗ್ಗದ ಐಬಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಭರ್ಜರಿಯಾಗಿಯೇ ಪ್ರತಿಭಟಿಸಿದೆ.

ಮಂಡ್ಯ ಜಿಲ್ಲೆಯ ಕೆರರಗೋಡ್ ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸಿದ ಕಾಂಗ್ರೆಸ್ ಪಕ್ಷದ ನಡೆಯನ್ನ ಬಿಜೆಪಿ  ಖಂಡಿಸಿ ನಗರದ ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದಿಂದ ಪ್ಲಕಾರ್ಡ್ ಮತ್ತು ಕೇಸರಿ ಬಾವುಟ ಹಿಡಿದು ಬಂದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ.

ರಾಮ ಭಕ್ತರ ಮೇಲೆ ಲಾಠಿ ಬೀಸಿದ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ, ಹನುಮಾನ ಧ್ವಜ ಕೆಳಗಿಳಿಸಿದ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ ಎಂಬ ಘೋಷಣೆ ಮತ್ತು ಪ್ಲಕಾರ್ಡ್ ಹಿಡಿದ ಜಿಲ್ಲಾ ಬಿಜೆಪಿ  ಮೆರವಣಿಗೆಯಲ್ಲಿ ಸಾಗಿ ಬಂದು ಐಬಿ ವೃತ್ತದಲ್ಲಿ ಉರಿ ಬಿಸಲನ್ನೂ ಲೆಕ್ಕಿಸದೆ ರಸ್ತೆಯ ಮೇಲೆ ಕುಳಿತು ಪ್ರತಿಭಟಿಸಿದರು.

ಬಿವೈ ಆರ್

2 ಗಂಟೆಗೆ ಪ್ರತಿಭಟಿಸಲಾಗುವುದು ಎಂದು ಮಾಹಿತಿಕೊಟ್ಟ ಪಕ್ಷ 45 ನಿಮಿಷ ತಡವಾಗಿ ಪ್ರತಿಭಟಿಸಲಾಗಿದೆ. ತಡವಾಗಿದ್ದಕ್ಕೆ ಕಾರಣವನ್ನ ಪಕ್ಷ ಇನ್ನೂ ಸ್ಪಷ್ಟೀಕರಣ ನೀಡಿಲ್ಲ. ಪ್ರತಿಭಟನೆಯ ಮಧ್ಯದಲ್ಲಿ ಬಂದು ಸೇರಿದ ಸಂಸದ ರಾಘವೇಂದ್ರ ಕೆರೆಗೋಡ್ ನಲ್ಲಿ ಷಡ್ಯಂತ್ರ್ಯದಿಂದ ಧ್ವಜವನ್ನ ಕೆಳಗಿಳಿಸಲಾಗಿದೆ. ಅಧಿಕಾರದ ಮದದಿಂದ ಧ್ವಜ ಇಳಿಸಿರುವ ಕಾಂಗ್ರೆಸ್ ತುಷ್ಠಿಕರಣ ರಾಜಕಾರಣವನ್ನ ಮುಂದು ವರೆಸಿಕೊಂಡು ಬಂದಿದೆ ಎಂದು ಆರೋಪಿಸಿದರು.

ಈ ಹೋರಾಟ ಒಂದು ಗಂಟೆಗೆ ಸೀಮಿತವಾಗಬಾರದು‌ ನಿರಂತರ ಹೋರಾಟಮಾಡಬೇಕಿದೆ. ರಾಷ್ಟ್ರ ಧ್ವಜದ ವಿರೋಧಿ ನಾವಲ್ಲ .ಆದರೆ, ಹನುಮಾನಧ್ವಜವನ್ನ ಕೆಳಗಿಳಿಸಿದ ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸಲಿಯಿಲ್ಲ. ಮತ್ತೆ ಧ್ವಜ ಹಾರಿಸುವ ಕೆಲಸ ನಡೆಯಬೇಕಿದೆ ಎಂದು ಕರೆ ನೀಡಿದರು.

ಸರ್ಕಾರದ ಮೊದಲ ಅಧಪಥನ ಹಾದಿ

ಪ್ರತಿಭಟನೆಯ ವಂದನಾರ್ಪಣೆ ಮುಗಿದ ನಂತರ  ಬಂದ ಶಾಸಕ ಚೆನ್ನಬಸಪ್ಪರಿಗೂ ಜಿಲ್ಲಾ ಬಿಜೆಪಿ ಅವಕಾಶ ಭಾಷಣಕ್ಕೆ ಅವಕಾಶ ಕಲ್ಪಿಸಿತ್ತು. ಈ ವೇಳೆ ಮಾತನಾಡಿದ ಅವರು, ಈ ಸರ್ಕಾರ ಆಂಜನೇಯನನ್ನ ಮುಟ್ಟಿಕೊಂಡಿದ್ದಾರೆ. ಆಂಜನೇಯನ್ನ ಮುಟ್ಟಿದ ರಾವಣನ ಲಂಕೆ ಏನಾಗಿತ್ತು ಎಂಬುದು ಗೊತ್ತಿದೆ. ಹಾಗೆ ಆಂಜನೇಯನ ಮುಟ್ಟಿದ ಸರ್ಕಾರ  ಅಧಫತನ ವಾಗಲಿದೆ ಎಂದು ಗುಡುಗಿದರು.

ಝೇಂಡಾಕಟ್ಟೆಗಳ ಕಥೆಗಳೇನು?

ಅಯೋಧ್ಯದಲ್ಲಿ ರಾಮ  ಮಂದಿರ ಉದ್ಘಾಟಿಸಲಾಗಿದೆ. ಕರ್ನಾಟಕದಲ್ಲಿಯೇ ಆಂಜನೇಯ ಹುಟ್ಟಿದ್ದು, ಕರ್ನಾಟಕದ ರಾಮ ಭಕ್ತನಿಗೆ ನ್ಯಾಯ ಸಿಗಬೇಕಿದೆ. ಸರ್ಕಾರಿ ಜಾಗದಲ್ಲಿ ಝೆಃಡಾ ಕಟ್ಟೆಗಳಲ್ಲಿರುವ ಬಾವುಟಗಳ ಕಥೆ ಏನು?  ಕೇಸರಿ ಕಂಡರೆ ನಿಮಗೆ ನೋಡಲು ಆಗೊಲ್ವಾ ಎಂದು ಪ್ರಶ್ನಿಸಿದರು.‌ ಹನುಮ ಧ್ವಜ ಹಾರಿಸಲು ಹೋದ ವಿಪಕ್ಷ ನಾಯಕ ಆರ್ ಅಶೋಕ್ ನನ್ನ‌ ಬಂಧಿಸುತ್ತೀರಾ ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಝೇಂಡಾಕಟ್ಟೆಗಳಲ್ಲಿ ಹಾರಾಡುವ ಬಾವುಟಗಳ ಬಗ್ಗೆನೂ ಯೋಚಿಸಬೇಕಿದೆ. ಈ ಝೇಂಡಾಕಟ್ಟೆಗಳಲ್ಲಿ ಎಷ್ಟು ರಾಷ್ಟ್ರಧ್ವಜನ ಹಾರಿಸಲಾಗಿದೆ. ಹನುಮ ಧ್ವಜ ಹಾರಿಸಲೂ  ಅವಕಾಶಕೊಡಬೇಕು. ಇಲ್ಲವಾದಲ್ಲಿ ಬಿಜೆಪಿ ಉಗ್ರವಾಗಿ ಹೋರಾಡಲಿದೆ ಎಂದರು.

ಜಿಲ್ಲಾ ಬಿಜೆಪಿಯ ಜಿಲ್ಲಾಧ್ಯಕ್ಷ  ಮೇಘರಾಜ್, ದತ್ತಾತ್ರಿ, ಮೋಹನ್ ರೆಡ್ಡಿ, ರಾಜು ತಲ್ಲೂರು, ಮೊದಲಾದವರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/7977

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373