ಬರ ಪ್ರವಾಸಕ್ಕೆ ಹೋಗದೆ ವಿಐಎಸ್ ಎಲ್ ಶತಮಾನೋತ್ಸವದಲ್ಲಿ ಭಾಗಿಯಾಗುತ್ತಿರುವೆ -ಬಿಎಸ್ ವೈ

ಸುದ್ದಿಲೈವ್/ಶಿವಮೊಗ್ಗ

ನಾಳೆ ಭದ್ರಾವತಿ ವಿಐಎಸ್ ಎಲ್ ಶತಮಾನೋತ್ಸವ ನಡೆಯಲಿದೆ. ಈ ಹಿನ್ಬಲೆಯಲ್ಲಿ ನಾನು ನಾಳೆ ಪಾಲ್ಗೊಳ್ಳುತ್ತಿದ್ದೇನೆ. ಹಾಗಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು, ಮೈಸೂರು ಮಹಾರಾಜರು ಆಗಮಿಸುತ್ತಾರೆ. ನಮ್ಮ ಮನೆಗೆ ಮಹಾರಾಜರು ಊಟಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಬರ ಅಧ್ಯಯನ ಪ್ರವಾಸ ಆರಂಭ ವಿಚಾರದಲ್ಲಿ ಇಂದಿನಿಂದ ಬರ ಅಧ್ಯಯನ ಪ್ತವಾಸ ಆರಂಭವಾಗಿದೆ. ನಾನು ವಿಐಎಸ್ ಎಲ್ ಕಾರ್ಯಕ್ರಮ ಇದ್ದ ಕಾರಣ ಹೋಗಿಲ್ಲ. ಎರಡು ದಿನದ ನಂತರ ಪ್ತವಾಸ ತಂಡ ಸೇರಿಕೊಳ್ಳುತ್ತೇನೆ ಎಂದರು
ವಿಪಕ್ಷ ನಾಯಕ ಆಯ್ಕೆ ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆ ಆಗ್ತದೆ. ಎಲ್ಲರೂ ಅದೇ ಪ್ರಶ್ನೆ ಕೇಳ್ತಿದ್ದಾರೆ. ಈಗಾಗಲೇ ವಿಳಂಬ ಆಗಿದೆ. ಆದಷ್ಟು ಬೇಗ ನೇಮಕ ಆಗ್ತದೆ. ಮುಭರು ಲೋಕಸಭೆ ಚುನಾವಣೆ ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತೇವೆ ಎಂದರು.
ಈಶ್ವರಪ್ಪ ದೆಹಲಿ ಭೇಟಿ ನೀಡಿದ್ದಾರೆ. ದೆಹಲಿ ಭೇಟಿಯಲ್ಲಿ ಅಂತಹ ವಿಶೇಷ ಏನಿಲ್ಲಅವರು ಸಭೆಗೆ ಕರೆದಿದ್ದರು ಹೋಗಿದ್ದಾರೆ ಅಷ್ಟೇ. ಎಂದರು.
ಇದನ್ನೂ ಓದಿ-https://suddilive.in/archives/2358
