ಸ್ಥಳೀಯ ಸುದ್ದಿಗಳು

ಸಾಗರ-ಸೊರಬ-ಬೆಂಗಳೂರು ಮಾರ್ಗದಲ್ಲಿ ನೂತನ KSRTC ಬಸ್ ಆರಂಭ

ಸುದ್ದಿಲೈವ್/ಶಿವಮೊಗ್ಗ

KSRTC ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ-ಸೊರಬ-ಬೆಂಗಳೂರು ಮಾರ್ಗದಲ್ಲಿ(ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ನ.5 ರಿಂದ ನೂತನವಾಗಿ 2 ನಾನ್ ಎಸಿ ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಈ ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ವೆಬ್‍ಸೈಟ್ ವಿಳಾಸ www.ksrtc.in ಸದರಿ ಸಾರಿಗೆಯ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಲ್ಳಬಹುದು.

ವೇಳಾಪಟ್ಟಿ : ಸಾಗರ-ಸೊರಬ-ಬೆಂಗಳೂರು ಮಾರ್ಗ- ಸಾಗರ ಹೊರಡುವ ಸಮಯ ರಾತ್ರಿ 9 ಕ್ಕೆ, ಸೊರಬ ರಾತ್ರಿ 10, ಶಿಕಾರಿಪುರ ರಾತ್ರಿ 11, ಶಿವಮೊಗ್ಗ ರಾತ್ರಿ 12, ಭದ್ರಾವತಿ ರಾತ್ರಿ 12.30 ಬೆಂಗಳೂರು ಬೆಳಿಗ್ಗೆ 6.30 ಕ್ಕೆ ತಲುಪುವುದು.

ಬೆಂಗಳೂರು-ಸೊರಬ-ಸಾಗರ ಮಾರ್ಗ- ಬೆಂಗಳೂರು ಹೊರಡುವ ಸಮಯ ರಾತ್ರಿ 9.25, ಭದ್ರಾವತಿ ರಾತ್ರಿ 1.50, ಶಿವಮೊಗ್ಗ ರಾತ್ರಿ 2.20, ಶಿಕಾರಿಪುರ ಬೆಳಗಿನ ಜಾವ 3.20, ಸೊರಬ 5.40, ಸಾಗರವನ್ನು ಬೆಳಿಗ್ಗೆ 6.40 ತಲುಪುವುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/2735

Related Articles

Leave a Reply

Your email address will not be published. Required fields are marked *

Back to top button