ಸ್ಥಳೀಯ ಸುದ್ದಿಗಳು

ರಿಜಿಸ್ಟ್ರರ್ಡ್ ಪತ್ರಕರ್ತರು ಬೇಕಂತೆ ಸಚಿವರಿಗೆ

ಸುದ್ದಿಲೈವ್/ಸಾಗರ

ಕರ್ನಾಟಕ ರಾಜ್ಯ  ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲೂಕಿನ ಕಾರ್ಯದರ್ಶಿ ಮಹೇಶ್ ಹೆಗ್ಡೆ ಮತ್ತಿತ್ತರರಿಗೆ ಅವರಿಗೆ ಸಚಿವ ಮಧು ಬಂಗಾರಪ್ಪ ರಿಜಿಸ್ಟರ್ಡ್ ಪತ್ರಕರ್ತರಲ್ಲ ಎಂದು ಅವಹೇಳನ ಮಾಡಿರುವ ಘಟನೆ ಸಾಗರದ ಐಬಿಯಲ್ಲಿ ನಡೆದಿದೆ.

ರಿಜಿಸ್ಟರ್ಡ್ ಪತ್ರಕರ್ತರೆಂದರೆ ಯಾರು? ಅವರು ಹೇಗೆ ಇರ್ತಾರೆ ಎಂದು ಸಚಿವರು ತಿಳಿಸಿದರೆ ನಾವು ಹಾಗೆ ಇರಲು ಟ್ರೈ ಮಾಡಬಹುದೇನಪ್ಪ. ಹೋಗಲಿ, ಇದೇ ಮಹೇಶ್ ಹೆಗ್ಡೆ ಅವರನ್ನ ಕೆಣಕಿದ ಮಾಜಿ ಸಚಿವ ಹರತಾಳು ಹಾಲಪ್ಪ‌ ಚುನಾವಣೆಯಲ್ಲಿ ಸೋತಿದ್ದಾರೆ.‌ ಈ ಪ್ರಕರಣಗಳನ್ನ ಕೆಣಕಿ ಮುಂಬರುವ ಚುನಾವಣೆಗಳನ್ನ ಸಚಿವರು ಸೋಲದಿರಲಿ  ಎಂಬುದು ನಮ್ಮ ಆಶಯ. ಆಕ್ಷೇಪಣೆ ಇದ್ದರೆ ಸ್ವೀಕರಿಸಲಾಗುವುದು.

ಸಾಗರದಲ್ಲಿ ಐಬಿಯಲ್ಲಿ ಬರ‌ಪರಿಹಾರ ಮತ್ತು ಕುಡಿಯುವ ನೀರಿನ ಕುರಿತು ಅಧಿಕಾರಿಗಳೊಂದಿಗೆ ನಿನ್ನೆ ಸಭೆ ನಡೆದಿದೆ.‌ ಸಭೆಯಲ್ಲೇ ಪತ್ರಕರ್ತರಿಗೆ ಆಸನಗಳು ಇಲ್ಲದಂತಾಗಿತ್ತು. ನಂತರ ಆಸನದ ವ್ಯವಸ್ಥೆ ಮಾಡಲಾಗಿದೆ. ಸಭೆಯ ಬಗ್ಗೆ ಮಾಹಿತಿ ಇಲ್ಲದ ಕಾರಣ ಪ್ರತಿಷ್ಠಿತ ಪತ್ರಿಕೆ (ರಿಜಿಸ್ಟರ್ಡ್ ಆಗಿದ್ದ ಪತ್ರಿಕೆ) ವರದಿಗಾರರಿಗೆ ಮಾಹಿತಿ ಇಲ್ಲದಂತಾಗಿದೆ.

ಈ ಮಾಹಿತಿಯನ್ನ‌ ಸಚಿವರ ಮುಂದೆ ತೋಡಿಕೊಂಡಿದ್ದಾರೆ. ಸಾಮಾನ್ಯವಾಗಿ ತಾಲೂಕು ಆಡಳಿತ ಸ್ಥಳೀಯ ಪತ್ರಕರ್ತರಿಗೆ ಪ್ರಗತಿ ಪರಿಶೀಲನ ಸಭೆಯ ಕುರಿತು ಮಾಹಿತಿ ನೀಡುತ್ತದೆ. ತಪ್ಪಿದ್ದಲ್ಲಿ ಜಿಲ್ಲಾ ವರದಿಗಾರರು ತಾಲೂಕು ವರದಿಗಾರರಿಗೆ ಮಾಹಿತಿ ನೀಡುತ್ತಾರೆ. ಇದು ನಡೆಯುವ ವ್ಯವಸ್ಥೆಯಾಗಿದೆ.

ಆದರೆ ತಾಲೂಕು ಆಡಳಿತ ಮಾಹಿತಿ ಕೊಡಿಸುವ ಬದಲು ವಾರ್ತಾ ಇಲಾಖೆಯ ಅಧಿಕಾರಿಯನ್ನ ತೋರಿಸಿದ ಸಚಿವರು ಇವರಿಗೆ ವಿಷಯ ಮುಟ್ಟಿಸಿದೆ. ಶಿವಮೊಗ್ಗದ ಪತ್ರಕರ್ತರು ಬಂದಿದ್ದಾರೆ ಎಂದು ಹೇಳಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳನ್ನ ತೋರಿಸುವ ಬದಲು ತಹಶೀಲ್ದಾರ್ ಅಥವಾ ಎಸಿಗೆ ಕರೆದು ಮಾಹಿತಿ ಕೊಡಿಸಬಹುದಿತ್ತು.‌ ಆದರೆ ಸಚಿವರು ನಿಮ್ಮನ್ನ ಕರೆಯಲೇ ಬೇಕೆಂಬ ನಿಯಮವಿಲ್ಲ ಎಂದು ಪತ್ರಕರ್ತರಿಗೆ ದರ್ಪ ಮೆರೆದಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದ ಮಹೇಶ್ ಹೆಗ್ಡೆ, ಪ್ರಜಾವಾಣಿ ಪತ್ರಿಕೆಯ ಎಂ.ರಾಘವೇಂದ್ರ ಅವರಿಗೆ ಸಚಿವರು ನೀವು ರಿಜಿಸ್ಟರ್ಡ್ ಅಲ್ಲ ಎಂದು ಹೇಳುವ ಮೂಲಕ ಅವಮಾನ ಮಾಡಿದ್ದಾರೆ. ಇದು ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಆನ್ ಲೈನ್ ನ ವೆಬ್ ಪೋರ್ಟಲ್ ಗಳ ಸಂಪಾದಕರು/ವರದಿಗಾರರನ್ನೂ ಮಾಧ್ಯಮ ಪಟ್ಟಿಯಲ್ಲಿ ಇರುವ ಪತ್ರಕರ್ತರಲ್ಲ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಮಾಧ್ಯಮ ಪಟ್ಟಿಗೆ ಸೇರಿಸುವ ಕೆಲಸ ಯಾರದ್ದು? ಮಾಧ್ಯಮ ಪಟ್ಟಿಯಲ್ಲಿ ಈ ವೆಬ್ ಪೋರ್ಟಲ್ ಗಳನ್ನ ಸೇರಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಯಾಕೆ ಸೇರಿಸುತ್ತಿಲ್ಲ? ಇದು ಯಾರ ತಪ್ಪು? ಸರ್ಕಾರದ ದಾಖಲಾತಿಗಳಲ್ಲಿ ಇರುವ ಆದೇಶವೇ ಬೇರೆ ಇದ್ದರೂ ಜಾರಿಯಲ್ಲಿರುವುದು ಮಾತ್ರ ಬೇರೆಯದ್ದೇ.

ಇದನ್ನೂ ಓದಿ-https://suddilive.in/archives/4146

Related Articles

Leave a Reply

Your email address will not be published. Required fields are marked *

Back to top button