ಒಕ್ಕಲಿಗ ಸಂಪ್ರದಾಯದಂತೆ ಹತ್ಯೆಯಾದ ಅಧಿಕಾರಿ ಪ್ರತಿಮಾ ಅಂತ್ಯಕ್ರಿಯೆ

ಸುದ್ದಿಲೈವ್/ತೀರ್ಥಹಳ್ಳಿ

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಅಂತ್ಯ ಸಂಸ್ಕಾರ ತೀರ್ಥಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದೆ. ಪುತ್ರ ಪಾರ್ಥ ತಾಯಿಯ ಚಿತೆಗೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿದೆ.
ಅಂತ್ಯಕ್ರಿಯೆಗು ಮೊದಲು ಅಂತಿಮ ಕ್ಷಣದ ವಿಧಿ ವಿಧಾನ ನೆರವೇರಿಸಿದ ಕುಟುಂಬ ಹತ್ಯೆಯಾದ. ಪ್ರತಿಮಾ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಲಾಯಿತು. ಪ್ರತಿಮಾ ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನಿ ಹತ್ಯೆ ಪ್ರಕರಣದಲ್ಲಿ ತೀರ್ಥಹಳ್ಳಿ ಮೂಲದ ಪ್ರತಿಮಾ, ಕೊಲೆಯಾಗಿದ್ದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾರನ್ನ ಶನಿವಾರ ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಹತ್ಯೆಯಾಗಿತ್ತು.
ಪ್ರತಿಮಾ ಮೃತದೇಹವನ್ನು ತೀರ್ಥಹಳ್ಳಿ ತೆಗೆದುಕೊಂಡು ಬಂದಿರುವ ಕುಟುಂಬಸ್ಥರು.ತೀರ್ಥಹಳ್ಳಿಯ ಹಿಂದು ರುದ್ರಭೂಮಿಯಲ್ಲಿ ಪ್ರತಿಮಾ ಅಂತ್ಯಕ್ರಿಯೆ ನಡೆದಿದೆ. ಮುಂಜಾನೆ 9.30 ಕ್ಕೆ ಪ್ರತಿಮಾ ಅಂತ್ಯಕ್ರಿಯೆ ನೆರವೇರಿದೆ.
ಗಣಿ ಅಧಿಕಾರಿ ಪ್ರತಿಮಾರ ಅಂತ್ಯಕ್ರಿಯೆಗೂ ಮುನ್ನಾ ತೀರ್ಥಹಳ್ಳಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಪ್ರತಿಮಾ ಪತಿ ಸತ್ಯನಾರಾಯಣ ಅವರ ಹಳೆಯ ನಿವಾಸದಲ್ಲಿ ಅಂತಿಮ ದರ್ಶನ ನಡೆದಿದೆ. ಹಳೆ ನಿವಾಸದಿಂದ ಹೊಸ ಮನೆಗೆ ಪ್ರತಿಮಾ ಪಾರ್ಥಿವ ಶರೀರ ತೆಗೆದುಕೊಂಡು ಬರಲಾಯಿತು.
ಹೊಸ ಮನೆಯಲ್ಲಿ 10 ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ನಡೆದಿದೆ.ನಂತರ ಹಿಂದು ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ.
ಅಂತಿಮ ದರ್ಶನ ಪಡೆದ ಕಿಮ್ಮನೆ
ಹತ್ಯೆಗೊಂಡ ಪ್ರತಿಮಾರ ಅಂತಿಮ ದರ್ಶನವನ್ನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ಕುಟುಂಬಸ್ಥರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಾಂತ್ವಾನ ಹೇಳಿದ್ದಾರೆ. ನಂತರ ಮಾಧ್ಯಮಗಳಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್, ಪ್ರತಿಮಾ ಪ್ರಾಮಾಣಿಕ ಅಧಿಕಾರಿಯಾಗಿದ್ದರು.
ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದರು. ಮುಂದೆ ಇನ್ನು ದೊಡ್ಡ ದೊಡ್ಡ ಹುದ್ದೆಗೇರುವ ಅವಕಾಶ ಇತ್ತು. ಅಷ್ಟ ರೊಳಗೆ ಇಂತಹ ಕೃತ್ಯ ನಡೆದಿದೆ.ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರತಿಮಾ ಕುಟುಂಬ ತೀರ್ಥಹಳ್ಳಿಯಲ್ಲಿ ಒಳ್ಳೆಯ ಹೆಸರು ಹೊಂದಿರುವ ಕುಟುಂಬ ಎಂದರು.
ಅಂತಹ ಕುಟುಂಬಕ್ಕೆ ಅನ್ಯಾಯ ಆಗಿದೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಡಬೇಕು ಎಂದರು.
ಇದನ್ನೂ ಓದಿ-https://suddilive.in/archives/2579
