ಸ್ಥಳೀಯ ಸುದ್ದಿಗಳು

ಹೈ ಕಮ್ಯಾಂಡ್ ಭಜನೆ ಮಾಡಿದ ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಐದು ವರ್ಷ ನಾನೇ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದ್ದು, ನಮ್ಮ ಪಕ್ಷದಲ್ಲಿ ಯಾರೇ ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡ್ತಾರೆ ಎಂದು ಪ್ರತಿಕ್ರಿಯಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿ,  ನಮ್ಮ ಪಕ್ಷದಲ್ಲಿ ಹೈಕಮಾಂಡ್ ‌ಇದೆ. ಎಲ್ಲವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಬಿಜೆಪಿ ಬರ ಅಧ್ಯಯನ ಪ್ರವಾಸ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವರು, ಬಿಜೆಪಿಯವರು ಕೇಂದ್ರ ಸರಕಾರಕ್ಕೆ ಹೋಗಿ ಹಣ ಬಿಡುಗಡೆ ಮಾಡಿ ಅಂತಾ ಕೇಳಬೇಕು . ಅದನ್ನ ಬಿಟ್ಟು ಬಿಜೆಪಿಯವರು ಏನು ಬರ ಅಧ್ಯಯನ ಮಾಡೋದು ಇದೆ ಎಂದರು.

ಬೇಳೂರಿನ ವಿರೋಧದ ಬಗ್ಗೆ ಮಾತು

ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಮಧು ಬಂಗಾರಪ್ಪ ವಿರುದ್ದ ಅಸಮಾಧಾನ ವಿಚಾರದಲ್ಲಿ ಹೈ ಕಮ್ಯಾಂಡ್ ಕಡೆ ಬೆರಳು ತೋರಿರುವ ಮಧು ಬಂಗಾರಪ್ಲ ಎಲ್ಲಾವನ್ನೂ ದೆಹಲಿ ನಾಯಕರು ಉತ್ತರ ಕೊಡ್ತಾರೆ. ನನ್ನ ವಿರುದ್ಧ ಅಸಮಾಧಾನ ಎನ್ನುವುದು ಅದು ಅವರ ಭಾವನೆ ನನಗೆ ಗೊತ್ತಿಲ್ಲ. ಶಾಸಕ ಭೀಮಣ್ಣನಾಯ್ಕ ಅವರನ್ನು ಕರೆದುಕೊಂಡು ಓಡಾಡುತ್ತಾರೆ ಎಂಬ ಆರೋಪವೂ ಸಹ ಇಲ್ಲದಿರುವ ವ್ಯಕ್ತಿಗಳ ಹೆಸರೇಳೋದು ಅವರ ಯೋಗ್ಯತೆ ತೋರಿಸುತ್ತದೆ ಎಂದರು.

ಬಿಜೆಪಿ ಜೊತೆ ಹೋಗುವವರಿಗೆ ತಲೆಕಟ್ಟಿದೆ

ಕಾಂಗ್ರೆಸ್ ಸರಕಾರ ಬಿದ್ದು ಹೋಗ್ತದೆ ಎಂಬ ಬಿಜೆಪಿ ಆರೋಪವೂ ಸಹ ವ್ಯವಹಾರಿಕವಾಗಿ ಏನಾದರೂ ಆಗ್ತದಾ ಅಂತಾ ಅವರು ಆಸೆ ಇಟ್ಟುಕೊಂಡಿದ್ದಾರೆ. ಅವರ ಯೋಗ್ಯತೆಗೆ ಸರಕಾರ ಬೀಳಿಸೋದು ಇರಲಿ ವಿಪಕ್ಷ ನಾಯಕನನ್ನು ಮಾಡಲಿ.ಬಿಜೆಪಿಯವರಿಗೆ ತಲೆ ಕೆಟ್ಟಿದೆ, ಅವರ ಜೊತೆ ಹೋಗುವವರಿಗು ತಲೆ ಕೆಟ್ಟಿದೆ ಎಂದರು.

ಕೆಇಎ ಪರೀಕ್ಷೆಯಲ್ಲಿ ಅಕ್ರಮ ವಿಚಾರ

ಕೆಇಎ ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಬೇಕು. ಪಂಚ ರಾಜ್ಯಗಳ ಚುನಾವಣೆಯಲ್ಲಿ ನಮಗು ಜವಾಬ್ದಾರಿ ವಹಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದಲ್ಲಿ ಪ್ರಚಾರ ನಡೆಸಲು ಹೇಳಿದ್ದಾರೆಇಲ್ಲಿನ ಕೆಲಸ ಕಾರ್ಯ ನೋಡಿಕೊಂಡು ಪ್ರಚಾರ ನಡೆಸುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/2349

Related Articles

Leave a Reply

Your email address will not be published. Required fields are marked *

Back to top button