ಆತಂಕ ಮೂಡಿಸಿದ ಎರಡು ಕಬ್ಬಿಣದ ಪೆಟ್ಟಿಗೆಗಳು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಎರಡು ಕಬ್ಬಿಣದ ಪೆಟ್ಟಿಗೆಗಳು ಆತಂಕವನ್ನ ಸೃಷ್ಠಿ ಮಾಡಿದೆ. ಬೆಂಗಳೂರಿನಿಂದ ಬಾಂಬ್ ಸ್ಕ್ವಾಡ್ ಗಾಗಿ ಸಧ್ಯಕ್ಕೆ ಕಾಯಲಾಗುತ್ತಿದೆ.
ಬೆಳಿಗ್ಗೆ 10 ಗಂಟೆಗೆ ಈ ಬಾಕ್ಸ್ ನಗರದ ರೈಲ್ವೆ ನಿಲ್ದಾಣದ ಆಸ್ಪತ್ರೆಯ ಕಾಂಪೌಂಡ್ ನಳಿ ಪತ್ತೆಯಾಗಿದೆ. ಬಾಕ್ಸ್ ನಲ್ಲಿ ಪತ್ತೆಯಾಗಿರುವುದು ಏನು ಎಂಬುದು ತಿಳಿದು ಬರಬೇಕಿದೆ. ರೈಲ್ವೆ ರಕ್ಷಣ ದಳ ಮತ್ತು ಜಯನಗರ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.
ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸಹ ಭೇಟಿ ನೀಡಿದ್ದು ಪರಿಶೀಲನೆ ನಡೆಸುದ್ದಾರೆ. ಪೆಟ್ಟಿಗೆ ಸುತ್ತಮುತ್ತ ಸ್ಯಾಂಡ್ ಬ್ಯಾಗ್ ನಿರ್ಮಿಸಲಾಗಿದೆ. ಸಧ್ಯಕ್ಕೆ ಭದ್ರತೆ ಮಾಡಲಾಗಿದೆ. ರೈಲ್ವೆ ನಿಲ್ದಾಣದ ಬಳಿ ಈ ಎರಡೂ ಪೆಟ್ಟಿಗೆಯನ್ನ ಗೋಣಿ ಚೀಲದಿಂದ ಹೊಲಿದು ಬಿಟ್ಟು ಹೋಗಿರುವುದು ಆತಂಕ ಮೂಡಿಸಿದೆ.
ಇಲ್ಲಿಯವರೆಗೂ ಈ ಪೆಟ್ಟಿಗೆ ಸ್ಪೋಟಗೊಂಡಿಲ್ಲ. ಇದರಿಂದಾಗಿ ಸಧ್ಯಕ್ಕೆ ಯಾವ ಅಪಾಯವಾಗಿಲ್ಲವೆಂದು ತಿಳಿದು ಬಂದಿದೆ. ಸೆನ್ ಪೊಲೀಸರು ಸಹ ಭೇಟಿಯಾಗಿ ತಪಾಸಣೆ ನಡೆಸಿದ್ದಾರೆ. ಶಾಸಕ ಚೆನ್ನಬಸಪ್ಪ ಭೇಟಿಯಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಬ್ಬಿಣದ ಪೆಟ್ಟಿಗೆ ಮೇಲೆ ಹೊದಿಸಿದ ಗೋಣಿ ಚೀಲದ ಮೇಲೆ ಬಾಂಗ್ಲದೇಶ ಎಂದು ನಮೂದಿಸಿರುವುದು ಹಾಗೂ ಫುಡ್ ಗ್ರೇನ್ ಎಂದು ಬರೆದಿರುವುದು ಆತಂಕ ಮೂಡಿಸಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಾಂಬ್ ಸ್ಕ್ವಾಡ್ ಇರುವುದರಿಂದ ಅವರೇ ಬಂದು ವಿಷಯ ತಿಳಿಸಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ-https://suddilive.in/archives/2496
