ಹನಿಟ್ರ್ಯಾಪ್ ನಡೆಸಿದ ಮೈಸೂರಿನ ಗ್ಯಾಂಗ್ ಅಂದರ್ ಮಾಡಿದ ಭದ್ರಾವತಿ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಖೆಡ್ಡಾಗೆ ಕೆಡವಲಾಗಿದೆ. .ಹನಿ ಟ್ರ್ಯಾಪ್ ಗ್ಯಾಂಗ್ ನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.
ಶಿವಮೊಗ್ಗದ ಭದ್ರಾವತಿಯ ಹೊಸಮನೆ ಪೊಲೀಸರಿಂದ ಗ್ಯಾಂಗ್ ಅಂದರ್ ಮಾಡಲಾಗಿದೆ. ಮೈಸೂರು ಮೂಲದ ಐವರನ್ನು ಹೊಸಮನೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಶ್ವೇತಾ, ವಿನಾಯಕ, ಮಹೇಶ್,ಅರುಣ್ ಕುಮಾರ್ ಹಾಗೂ ಹೇಮಂತ್ ಅರೆಸ್ಟ್.ವಮಾಡಲಾಗಿದೆ. ಡಸ್ಟರ್ ಕಾರು ಸೇರಿದಂತೆ 7 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ಮೂಲದ ಶರತ್ ಎಂಬುವರ ದೂರು ಆಧರಿಸಿ, ಗ್ಯಾಂಗ್ ನ್ನ ಅಂದರ್ ಮಾಡಲಾಗಿದೆ.ಭದ್ರಾವತಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಶರತ್ ಕುಮಾರ್ ಗೆ ವಾಟ್ಸಪ್ ನಲ್ಲಿ ಬೆತ್ತಲೆಯಾಗಿ ಮಹಿಳೆಯೋರ್ವಳು ವಿಡಿಯೋ ಕಾಲ್ ಮಾಡಿದ್ದಳು.
20 ಲಕ್ಷ ರೂ. ಹಣದ ಬೇಡಿಕೆಯನ್ನ ಮೈಸೂರಿನ ಹನಿಟ್ರ್ಯಾಪ್ ಗ್ಯಾಂಗ್ ಶರತ್ ಬಳಿ 1 ಲಕ್ಷ ಹಣವನ್ನು ಹೆದರಿಸಿ ಕಿತ್ತುಕೊಂಡಿದ್ದರು. ಮೈಸೂರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಶರತ್ ನನ್ನ ಶ್ವೇತಾ ಪರಿಚಯ ಮಾಡಿಕೊಂಡಿದ್ದಳು.ಬಳಿಕ ವಿಡಿಯೋ ಕಾಲ್ ರೆಕಾರ್ಡ್ ಮಾಡಿ, ಬೆದರಿಸುತ್ತಿದ್ದ ಗ್ಯಾಂಗ್.
ಶರತ್ ಗೆ ಹಲ್ಲೆ ನಡೆಸಿ ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದ ಶ್ವೇತಾ ಆಂಡ್ ಗ್ಯಾಂಗ್. ಶರತ್ ಬಳಿ ಒತ್ತಾಯ ಪೂರ್ವಕವಾಗಿ 25 ಲಕ್ಷ ಸಾಲ ಪಡೆದುಕೊಂಡಿರುವುದಾಗಿ ಸಹಿ ಹಾಕಿಸಿಕೊಂಡಿದ್ದರು ಮೈಸೂರಿನಲ್ಲಿ ಶರತ್ ನನ್ನು ಎರಡು ದಿನಗಳ ಕಾಲ ಕೂಡಿ ಹಾಕಿ ಹಲ್ಲೆ ಮಾಡಿತ್ತು ಶ್ವೇತಾ ಆಂಡ್ ಗ್ಯಾಂಗ್.
ಮೈಸೂರಿನಿಂದ ತಪ್ಪಿಸಿಕೊಂಡು ಭದ್ರಾವತಿ ಹೊಸಮನೆ ಠಾಣೆಯಲ್ಲಿ ಶರತ್.ದೂರು ದಾಖಲಿಸಿದ್ದರು. ಶರತ್ ದೂರಿನ ಆಧರಿಸಿ, ಹಣ ವರ್ಗಾವಣೆಯ ಡೀಟೈಲ್ಸ್ ತೆಗದುಕೊಂಡು ಪೊಲೀಸರ ಕಾರ್ಯಚರಣೆ ನಡೆಸಿದ್ದರು.
ಹನಿಟ್ರ್ಯಾಪ್ ಗ್ಯಾಂಗ್ ಲೀಡರ್ ಶ್ವೇತಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು.
ಇದನ್ನೂ ಓದಿ-https://suddilive.in/archives/3350
