ಮೂರು ಕೆರೆಯ ನೀರಿನ ಬ್ಯಾರೇಜ್ ಗೇಟ್ ಗಳ ಕಳವು

ಸುದ್ದಿಲೈವ್/ಶಿವಮೊಗ್ಗ

ನೀರಿನ ಬ್ಯಾರೇಜ್ ಗೇಟ್ ಗಳನ್ನೇ ಕಳವು ಮಾಡಿರುವ ಘಟನೆ ವರದಿಯಾಗಿದೆ. ಮೂರು ಬ್ಯಾರೇಜ್ ಗಳ ಲಕ್ಷಾಂತರ ರೂ ಮೌಲ್ಯದ ಗೇಟ್ ಗಳನ್ನ ಕಳವು ಮಾಡಿರುವ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ನೀರನ್ನು ಸಂಗ್ರಹ ಮಾಡಲು ಸೊರಬ ತಾಲೂಕು ಅಂಕರವಳ್ಳಿ, ಗ್ರಾಮದ ಹತ್ತಿರ ಸರ್ಕಾರದಿಂದ ಬ್ಯಾರೇಜ್ ನಿರ್ಮಾಣ ಮಾಡಿದ್ದು ಅದಕ್ಕೆ ಕಬ್ಬಿಣದ ಗೇಟ್ ಗಳನ್ನು ಅಳವಡಿಸಿದ್ದು, ಪ್ರತಿ ವರ್ಷದಂತೆ ದಿನಾಂಕ-31-05-2023 ರಂದು ಕಬ್ಬಿಣದ ಗೇಟ್ ಗಳನ್ನು ತೆಗೆದು ಸಂಜೆ 04-30 ಗಂಟೆಗೆ ಪಕ್ಕದಲ್ಲಿ ಇರಿಸಿಲಾಗಿದ್ದು, ನಂತರ ದಿನಾಂಕ:19/10/2023 ರಂದು ಮದ್ಯಾಹ್ನ 02-00 ಗಂಟೆಗೆ ಬಾರೇಜ್ ಗೇಟ್ ಗಳನ್ನು ಅಳವಡಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋದಾಗ , ಬ್ಯಾರೇಜ್ ನ ಒಟ್ಟು 30 ಗೇಟ್ ಗಳ ಪೈಕಿ 10 ಗೇಟ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕಕ್ಕರಸಿ ಗ್ರಾಮದ ಹತ್ತಿರ ಸರ್ಕಾರದಿಂದ ಬ್ಯಾರೇಜ್ ನಿರ್ಮಾಣ ಮಾಡಿದ್ದು ಅದಕ್ಕೆ ಕಬ್ಬಿಣದ ಗೇಟ್ ಗಳನ್ನು ಅಳವಡಿಸಿದ್ದು, ಪ್ರತಿ ವರ್ಷದಂತೆ ದಿನಾಂಕ-30-05-2023 ರಂದು ಕಬ್ಬಿಣದ ಗೇಟ್ ಗಳನ್ನು ತೆಗೆದು ಸಂಜೆ 05-40 ಗಂಟೆಗೆ ಪಕದಲ್ಲಿ ಇರಿಸಿಲಾಗಿದ್ದು, ನಂತರ ದಿನಾಂಕ:19/10/2023 ರಂದು ಮದ್ಯಾಹ್ನ 12.30 ಗಂಟೆಗೆ ಬಾರೇಜ್ ಗೇಟ್ ಗಳನ್ನು ಅಳವಡಿಸಲು ಸ್ಥಳಕ್ಕೆ ಇಂಜಿನಿಯರ್ ಗೆ ಶಾಕ್ ಆಗಿದೆ 16 ಗೇಟ್ ಗಳ ಪೈಕಿ 16 ಗೇಟು ಗಳು ಕಾಣೆಯಾಗಿವೆ.
ಬಾಡದ ಬೈಲು ಗ್ರಾಮದ 21 ಬ್ಯಾರೇಜ್ ಗೇಟುಗಳ ಪೈಕಿ 10 ಗೇಟುಗಳು ಕಳ್ಳತವಾಗಿದ್ದು ಒಟ್ಟು ಮೂರು ಲಕ್ಷದ ಕಬ್ಬಿಣದ ಗೇಟು ಕಾಣೆಯಾಗಿದೆ ಎಂದು ಇಲಾಖೆಯ ಇಂಜಿನಿಯರ್ ಸಂತೋಷ್ ದೂರು ದಾಖಲಿಸಿದ್ದಾರೆ.
