ಸ್ಥಳೀಯ ಸುದ್ದಿಗಳು

ನಿಶ್ಚಿತಾರ್ಥವಾಗಿದ್ದ ಯುವಕ ಮದುವೆ ದಿನ ಎಸ್ಕೇಪ್ ಆಗಿದ್ದೇಕೆ?

ಸುದ್ದಿಲೈವ್/ಭದ್ರಾವತಿ

ಇನ್ನೇನು ತಾಳಿಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಗಂಡು ವಂಚಿಸಿ ತಲೆಮರೆಸಿಕೊಂಡಿರುವ ಘಟನೆ ನಡೆದಿದೆ.

ಭದ್ರಾವತಿಯ ಅರೆಬಿಳಚಿ ವಡ್ಡಹಟ್ಟಿಯ ಯುವತಿಯನ್ನ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕ್ ಬೆಟ್ಟ ಕಡೂರು ಗ್ರಾಮದ ಸುನೀಲ್ ಕುಮಾರನಿಗೆ ಕೊಟ್ಟು ಮದುವೆ ಮಾಡಲು ತೀರ್ಮಾನಿಸಲಾಗಿರುತ್ತದೆ.

ತೀರ್ಮಾನದಂತೆ ದಿನಾಂಕ :08.01.2024 ರಂದು ಬೆಟ್ಟ ಕಡೂರು ಗ್ರಾಮದ ಮಾರಪ್ಪ, ಶೇಖರಪ್ಪ, ಸಂಪತ್ತು ಹಾಗೂ ಅರೆಬಿಳಚಿ ಗ್ರಾಮದ ಗ್ರಾಮಸ್ಥರ ಸಮ್ಮುಖದಲ್ಲಿ  ನಿಶ್ಚಿತಾರ್ಥ ನಡೆದಿರುತ್ತದೆ. .

ನಿಶ್ಚಿತಾರ್ಥ ದಿನ ದಿನ 30 ಗ್ರಾಂ ಬಂಗಾರದ ಬ್ರಾಸ್‌ ಲೆಟ್, 5 ಗ್ರಾಂ ನ ಉಂಗುರವನ್ನ ಯುವತಿಯ ಕುಟುಂಬ ಉಡುಗೊರೆಯಾಗಿ ನೀಡಿದ್ದರು. ನಂತರ ಮದುವೆ ಜವಳಿ ಬಟ್ಟೆಯನ್ನು ದಾವಣಗೆರೆಯಲ್ಲಿ ತೆಗೆಯಲಾಗಿತ್ತು.

ದಿನಾಂಕ :15.04.2024 ರಂದು ನಾಗತಿ ಬೆಳಗಲು ಶ್ರೀ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ದಿನಾಂಕ ನಿಗದಿ ಪಡಿಸಿ ಲಗ್ನ ಪತ್ರಿಕೆ ಪ್ರಿಂಟ್ ಹಾಕಿ ಎಲ್ಲ ಸಂಬಂಧಿಕರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಂಚಲಾಗಿತ್ತು.

ವರ ಸುನಿಲ್ ಕುಮಾರ್ ನ ಅಕ್ಕ ಹೆಚ್ಚಿನ ವರದಕ್ಷಿಣೆ ಹಣ ಕೊಡುವಂತೆ ಹುಡುಗಿ ತಂದೆಗೆ ಕೇಳಿದ್ದು, ಯುವತಿಯ ತಂದೆ ಹೆಚ್ಚಿನ ವರದಕ್ಷಿಣೆಗೆ ಒಪ್ಪದ ಕಾರಣ ಮದುವೆ ಇಷ್ಟವಿಲ್ಲ ಎಂದು ಸುಮಾರು ಒಂದು ವಾರದಿಂದ ಪೋನ್ ಮಾಡದೇ ಯಾರ ಸಂಪರ್ಕಕ್ಕೂ ಸಿಗದೇ ಸ್ವತ ಊರಾದ ಬೆಟ್ಟ ಕಡೂರು ನಲ್ಲಿಯೂ ಇರದೇ ಅಕ್ಕ ಮತ್ತು ತಮ್ಮ ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಯ ಕುಟುಂಬ ವರನ ಸಂಬಂಧಿಕರ ಬಳಿ ವಿಚಾರಿಸಿದ್ದಾರೆ. ಎಲ್ಲರೂ ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಮತ್ತು ವರನ‌ ಪೋಷಕರು ಸಹ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಸಬೂಬು ಹೇಳಿರುತ್ತಾರೆ. ಒಬ್ಬಳೆ ಮಗಳ ಬಾಳು ಮದುವೆ‌ಆಗಬೇಕು ಎನ್ಮುವಷ್ಟರಲ್ಲಿ ಎಲ್ಲವೂ ಮುರಿದು ಬಿದ್ದಿದೆ.

ಓಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಡುವ ಸಲುವಾಗಿ ಸುಮಾರು 8 ಲಕ್ಷ ಖರ್ಚು ಮಾಡಿ ಮದುವೆಗೆ ಸಿದ್ದ ಮಾಡಿಕೊಂಡಿದ್ದ ಯುವತಿ ತಂದೆ ಅಕ್ಕ ತಮ್ಮನ ವಿರುದ್ಧ ವಂಚನೆಯ ಆರೋಪ ಮಾಡಿದ್ದಾರೆ.‌ನಿಶ್ಚಿತಾರ್ಥ ಮಾಡಿಕೊಂಡು ಉಡುಗೊರೆ, ಇತ್ಯಾದಿ ತೆಗೆದುಕೊಂಡು ಮೋಸ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಯುವತಿಯ ತಂದೆ ದೂರು ದಾಖಲಿದ್ದಾರೆ.

ಇದನ್ನೂ ಓದಿ-https://suddilive.in/archives/12383

Related Articles

Leave a Reply

Your email address will not be published. Required fields are marked *

Back to top button