ಪಂದ್ರಾ ಮಿನಿಟ್ ಕೇಲಿಯ ಪೊಲೀಸ್ ಕೋ ಹಟಾದೋ… ಎಂಬ 12 ನಿಮಿಷದ ವಿಡಿಯೋ ಅಪ್ಲೋಡ್ ಮಾಡಿದವನ ವಿರುದ್ಧ ಸುಮೋಟೋ ಕೇಸ್ ದಾಖಲು!

ಸುದ್ದಿಲೈವ್/ಶಿವಮೊಗ್ಗ

ಹರ್ಷನ ಕೊಲೆಯನ್ನ ಸಂಭ್ರಮಿಸಿದವರ ವಿರುದ್ಧ ಎರಡು ಎಫ್ಐಆರ್ ದಾಖಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕೋಮು ಉದ್ರಿಕ್ತಗೊಳಿಸುವ ವಿಡಿಯೋ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಂದ್ರಾ ಮಿನಿಟ್ ಕೇಲಿಯ ಪೊಲೀಸ್ ಕೋ ಹಟಾದೋ ಬತ್ತಾಲೇಂಗೆ ಕಿಸೆ ಹಿಮ್ಮತ್ ಹೈ ಕೋನ್ ತಾಖತ್ ವರ್,,,, ಪಂದ್ರಾ ಮಿನಿಟ್ ಹಟಾಲೋ.. ಎಂದು ಉರ್ದು ಭಾಷೆಯಲ್ಲಿ ಟಿಪ್ಪು ನಗರದಲ್ಲಿ ಅ.1 ರಂದು ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾಕಲಾಗಿರುವ ಅಲಂಕಾರಕ್ಕೆ 12 ನಿಮಿಷದ ವಿಡಿಯೋವನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಹರಿ ಬಿಟ್ಟಿದ್ದವನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಟಿಪ್ಪುನಗರದ ವಾಸಿ ಸಮೀರ್ ಪಾಷಾ ಎಂಬ ವ್ಯಕ್ತಿಯು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ Royal King sameer ಎಂಬ ಅಕೌಂಟ್ ನಲ್ಲಿ, ಈ ಹಿಂದೆ ಶಿವಮೊಗ್ಗ ರಾಗಿಗುಡ್ಡ ಕಟ್ ಔಟ್ ನ ಗಲಭೆಗೆ ಸಂಬಂದಿಸಿದ ಪ್ರಚೋಧನಾಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
Royal King sameer ಎಂಬ ಇನ್ ಸ್ಟಾಗ್ರಾಂ ಅಕೌಂಟ್ ವಿಡಿಯೋವನ್ನು ಓಪನ್ ಮಾಡಿ ನೋಡಿದ ಪೊಲೀಸರಿಗೆ12 ಸೆಕೆಂಡ್ ಇದ್ದು, ಅದರಲಿ.. ಈ ಹಿಂದೆ ಈದ್ ಮಿಲಾದ್ ಹಬ್ಬದ ಸಮಯದಲ್ಲಿ ರಾಗಿಗುಡ್ಡದಲಿ, ಟಿಪ್ಪುಸುಲ್ತಾನ್ ಮತ್ತು ಔರಂಗಜೇಬ್ ಕಟ್‌ಔಟ್ ನ ವಿವಾಧದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದ ವಿಡಿಯೋ ಇದಾಗಿರುವುದು ತಿಳಿದು ಬಂದಿದೆ.
ಪಂದ್ರಾ ಮಿನಿಟ್ ಕೇಲಿಯ ಪೊಲೀಸ್ ಕೋ ಹಟಾದೋ ಬತ್ತಾಲೇಂಗೆ ಕಿಸೆ ಹಿಮ್ಮತ್ ಹೈ ಕೋನ್ ತಾಖತ್ ವರ್,,,, ಪಂದ್ರಾ ಮಿನಿಟ್ ಹಟಾಲೋ.. ಎಂದು ಉರ್ದು ಭಾಷೆಯಲ್ಲಿದ್ದು, ಇದು ಜನರನ್ನು ಎತ್ತು ಕಟ್ಟುವ ಜನರನ್ನು ಉದ್ರಿಕ್ತಗೊಳಿಸುವ ಹಾಗೂ ಸಾಮಾಜಿಕ ಶಾಂತಿ ಕದಡುತ್ತಿರುವ ಪ್ರಚೋಧನಾಕಾರಿ ವಿಡಿಯೋ ಆಗಿರುತ್ತದೆ.
ಆದ್ದರಿಂದ ಸಮೀರ್ ಪಾಷಾ ತನ್ನ ಇನ್ ಸ್ಟಾಗ್ರಾಂನಲ್ಲಿ, ಉದ್ರಿಕ್ತ, ಹಾಗೂ ಪ್ರಚೋಧನಾಕಾರಿ ರೀತಿಯಲ್ಲಿ ಇರುವ ವಿಡಿಯೋ ಸಂದೇಶವನ್ನು ಹಾಕಿಕೊಂಡು ನಗರದಲ್ಲಿ ಸಾಮಾಜಿಕ ಶಾಂತಿ ಕದಡುತ್ತಿರುವುದರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/1881
