ಸ್ಥಳೀಯ ಸುದ್ದಿಗಳು

ಇಂತಹ ನೂರು ನೋಟೀಸ್ ನೀಡಿ ಹೆದರೊಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ದೇಶ ದ್ರೋಹಿ ಹೇಳಿಕೆಯನ್ನ ನೀಡಿರುವ ಸಂಸದ ಡಿಕೆಸುರೇಶ್ ಮತ್ತು ಅದನ್ನ‌ಬೆಬಲಿಸಿದವರಿಗೆ ನೋಟೀಸ್ ನೀಡಿಲ್ಲ. ನಾನು ದೇಶ ವಿಭಜನೆ ಮಾಡುವ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ಜಾರಿ ಎಂದರೆ ನೋಟೀಸ್ ಕೊಡಲಾಗಿದೆ ಎಂದು ಮಾಜಿ ಸಚಿವ ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತ ರಾಜ್ಯಗಳ ಬೇಡಿಕೆ ಇಟ್ಟಿರುವರಿಗೆ  ಗುಂಡಿಟ್ಟು ಕೊಲ್ಲಿ ಎಂದು ಹೇಳಿರುವೆ. ಅದನ್ನ ಕಾನೂನು ತನ್ನಿ ಎಂದಿರುವೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿರುವೆ.  ಈಗಲೂ ಕಾಲ ಮಿಂಚಿಲ್ಲ. ಡಿಕೆಸು ವಿರುದ್ಧ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವ ಪರಮೇಶ್ವರ್ ಅವರು. ನನಗೆ ಹೇಳ ಬೇಡಿ ಕೇಂದ್ರಕ್ಕೆ ಈಶ್ವರಪ್ಪ ಹೇಳಲಿ ಎಂದು ಹೇಳಿದ್ದಾರೆ. ಹಾಗಾಗಿ ಪರಮೇಶ್ವರ್ ಹೇಳಿಕೆಯನ್ನ ಸ್ವಾಗತಿಸುತ್ತೇನೆ. ಆದುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ನಾಳೆ ಪತ್ರ ಬರೆಯುತ್ತಿದ್ದೇನೆ ಎಂದರು.

ಒಬ್ಬೊಬ್ಬ ಕಾಂಗ್ರೆಸ್  ಸಚಿವರು ಒಂದೊಂದು  ಹೇಳಿಕೆ ನೀಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯರು ಬಾಯಿ ಬಂದಂತೆ ಮಾತನಾಡಿದ್ದಾರೆ. ಆರ್ ಎಸ್ ಎಸ್ ವಿರುದ್ಧ ಖರ್ಗೆ ಮಾತನಾಡಿರುವುದು ಬೇಸರ ತಂದಿದೆ. ರಾಷ್ಟ್ರವನ್ನ ವಿಭಜನೆ ಮಾಡಬೇಡಿ ಎಂದು ಆರ್ ಎಸ್ ಎಸ್ ಹೇಳಿಕೊಟ್ಟಿದೆ. ಆದರೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಸಂಸತ್ ನಲ್ಲಿ ವಿಭಜನೆ ಕುರಿತು ಸ್ಪಷ್ಟಪಡಿಸಿದ್ದಾರೆ.

ನನ್ನ ವಿರುದ್ಧ ಎಫ್ಐಆರ್ ಹಾಕಲಿ ನೋಟೀಸ್ ನೀಡಲಿ ಹೆದರೊಲ್ಲ. ಹಿಂದುತ್ವ, ರಾಷ್ಡ್ರವಾದಗಳ ಕುರಿತು ನೂರು ನೋಟಿಸ್ ಕೊಡಲಿ ಎದುರಿಸುತ್ತೇನೆ. ಸುರ್ಜೆವಾಲರಿಗೆ ಕ್ರೇಜಿವಾಲರಿಗೆ ನ್ಯಾಯಾಲಯ ದಂಡ ಹಾಕಿದೆ, ಡಿಕೆಶಿ ಅವರು ಬೈಲ್ ಮೇಲೆ ಇದ್ದಾರೆ. ಸಿದ್ದರಾಮಯ್ಯರಿಗೆ 10 ಸಾವಿರ ರೂ ದಂಡ ಕೋರ್ಟ್ ಹಾಕಿದೆ. ರಾಷ್ಟ್ರಭಕ್ತಿಯನ್ನ ಹಂಚುವ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ ಎಂದರು.

ಬೇಕಾದಷ್ಟು ಹೇಳಿಕೆ,ಹೋರಾಟದಲ್ಲಿ ನಾನು  ಭಾಗವಹಿಸಿರುವೆ. ನಾನು ಒಂದೇ ಒಂದು ರೂ. ದಂಡಕಟ್ಟಿಲ್ಲ ಅಥವಾ‌ಜೈಲಿಗೆ ಹೋಗಿ ಬಂದವನಲ್ಲ. ನೂರು ಸುಳ್ಳನ್ನ ಹೇಳ್ತಾ ಹೇಳ್ತಾ ಸತ್ಯ ಆಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಕೊಂಡಿದ್ದಾರೆ. ಆದರೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮ್, ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳು ಎಂದಿದ್ದಾರೆ. ರಾಜ್ಯ ಸರ್ಕಾರದ ಶ್ವೇತಾ ಪತ್ರ ಹೊರಡಿಸಲಿ. ಅದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡುತ್ತದೆ ಎಂದರು.

ಆರ್ ಎಸ್ ಎಸ್ ಬಗ್ಗೆ ಮಾತನಾಡಿರುವುದನ್ನ ವಾಪಾಸ್ ತೆಗೆದುಕೊಳ್ಳಿ, ನನ್ನ ಬಗ್ಗೆ ಎಫ್ಐಆರ್ ಮತ್ತು ನೋಟೀಸ್ ಕೊಡಿಸಿದ್ದೀರಿ. ಇನ್ನೂ ನೂರು ಕೇಸ್ ಅಥವಾ ನೋಟೀಸ್ ಹಾಕಿ ಬೇಜಾರಿಲ್ಲ. ನಾನು ಹೇಳಿರುವುದು ಸರಿ ಇಲ್ಲವೆಂದು ಹೇಳಿ ನೋಟೀಸ್ ನೀಡಿದ್ದೀರಿ. ಆದರೆ ದೇಶ ವಿಭಜನೆಯ ಬಗ್ಗೆ ಮಾತನಾಡುವವರ ವಿರುದ್ಧ ಏನು ಕ್ರಮ ಎಂದು ಆಗ್ರಹಿಸಿದರು.

ನಾನು ಡಿಕೆಸು ಅವರನ್ನ ಗುಂಡಿಟ್ಟು ಕೊಲ್ಲಿ ಎಂದಿದ್ದಾರೆ ಎಂಬ ತಪ್ಪು ಸಂದೇಶವಿದೆ. ಆದರೆ ದೇಶ ವಿಭಜನೆ ಹೇಳಿಕೆ ಕೊಟ್ಟಿರುವುದನ್ನ ಖಂಡಿಸಿ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಆಗ್ರಹಿಸಿದವನು ನಾನು.

ಸಚಿವ ಪ್ರಿಯಾಂಕ ಖರ್ಗೆ ಅವರು ಗುಂಡುಕ್ಕಿ ಕೊಲ್ಲುವ ನೋಟೀಸ್ ಜಾರಿಯಾದರೆ ಮೊದಲು ಆರ್ ಎಸ್ ಎಸ್ ಕಚೇರಿ ಮೊದಲು ಬಂದ್ ಮಾಡಬೇಕಿದೆ ಎಂದು ಹೇಳಿರುವ ಹೇಳಿಕೆಗೆ ಚಿಲ್ರೆ ಹೇಳಿಕೆಗೆ ಪ್ರತಿಕ್ರಿಯೆಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ-https://suddilive.in/archives/8758

Related Articles

Leave a Reply

Your email address will not be published. Required fields are marked *

Back to top button