ಸ್ಥಳೀಯ ಸುದ್ದಿಗಳು
ಹೊನ್ನೇತಾಳು ಶಾಲೆಗೆ ಪತ್ರಕರ್ತರ ತಂಡ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಈ ದಿನ ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೀರ್ಥಹಳ್ಳಿ ಪತ್ರಕರ್ತರು ತಂಡ ಭೇಟಿ ನೀಡಿದರು. ಶಾಲೆಯ ವಾತಾವರಣ, ಕಲಿಕೆ, ಅಭಿವೃದ್ದಿ, ಮಕ್ಕಳ ಕಲಿಕಾ ಸಾಮರ್ಥ್ಯ, ಕೊಠಡಿ ಹಾಗೂ ವಾತಾವರಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪತ್ರಕರ್ತರು ತಂಡದೊಂದಿಗೆ ಪ್ರಜಾವಾಣಿಯ ಹಿರಿಯ ಪತ್ರಿಕಾ ವರದಿಗಾರರಾದ ಶಿವಾನಂದ್ ಕರ್ಕಿ ಅವರಿಗೆ ಶಾಲೆಯ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಈ ಪತ್ರಿಕಾ ತಂಡದಲ್ಲಿ ವಿಜಯ ಕರ್ನಾಟಕದ ವರದಿಗಾರರಾದ ರಾಘವೇಂದ್ರ ಮೇಗರವಳ್ಳಿ ಹಾಗೂ ನಮ್ಮೂರ ಎಕ್ಸ್ ಪ್ರೆಸ್ ನ ವರದಿಗಾರರಾದ ಸಾ.ರ. ರಾಘವೇಂದ್ರ ಹಾಗೂ ಪ್ರಜಾವಾಣಿ ವರದಿಗಾರರಾದ ನಿರಂಜನ್ ತೀರ್ಥಹಳ್ಳಿ ಹಾಗೂ ಹಾಗೂ ಸಿವಿಲ್ ಕಂಟ್ರಾಕ್ಟರ್ ಶ್ರೀನಂದ ದಬ್ಬಣಗದ್ದೆ ಹಾಗೂ ಆಗುಂಬೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರಾಘವೇಂದ್ರ ಕೌರಿಹಕ್ಲು ಹಾಗೂ ಶ್ರೀಪಾಲ್ ಪ್ರಗತಿಪರ ಕೃಷಿಕರು ಹೊಸೂರು ಭೇಟಿ ನೀಡಿದರು.
ಇದನ್ನೂ ಓದಿ-https://suddilive.in/archives/2187
