ಶಿವಮೊಗ್ಗ ರೈಲ್ವೆ ಸ್ಟೇಷನ್ ನಲ್ಲಿ ರೈಲ್ವೆ ರಕ್ಷಣಾ ಪಡೆಯಿಂದ ಜಾಗೃತಿ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಸುಲಭವಾಗಿ ಅಗ್ನಿ ದುರಂತವನ್ನ ಉಂಟುಮಾಡುವ ಗ್ಯಾಸ್, ಪೆಟ್ರೋಲ್, ಸೀಮೆಣ್ಣೆ ಸ್ಟೌವ್, ಪಟಾಕಿಗಳನ್ನ ತಮ್ಮ ಜೊತೆ ಹೊತ್ತೊಯ್ಯದಂತೆ ರೈಲ್ವೆ ರಕ್ಷಣ ದಳ ಇವತ್ತು ಪ್ರಯಾಣಿಕರಲ್ಲಿ ಜನಜಾಗೃತಿಗೆ ಇಳಿದಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಡ್ರೈವ್ ನಡೆಸಲಾಗಿದೆ.
ಅಗ್ನಿ ದುರಂತ ಪಡಿಸುವ ಸಿಲಿಂಡರ್, ಗ್ಯಾಸ್, ಸ್ಟೌವ್, ಪಟಾಕಿ ಮತ್ತು ಇತರೆ ದಹನಕಾರಿ ವಸ್ತುಗಳಿಂದ ಅನಾಹುತಗಳು ಹೆಚ್ಚಾಗುತ್ತಿದ್ದು ಪ್ರಯಾಣಿಕರು ರೈಲಿನಲ್ಲಿ ತಮ್ಮಜೊತೆ ಇಟ್ಟುಕೊಂಡು ಓಡಾಡಿದಲ್ಲಿ ದಂಡ ಬೀಳುವ ಅಪಾಯವಿದೆ ಎಂದು ಸಾರ್ವಜನಿಕರಿಗೆ ತಿಳಿ ಹೇಳಲಾಗಿದೆ.
ರೈಲ್ವೆ ರಕ್ಷಣ ದಳದ ನಿರೀಕ್ಷಕ ಕುಬೇರಪ್ಪನವರ ನೇತೃತ್ವದಲ್ಲಿ ಅಭಿಯಾನ ನಡೆದಿದೆ. ಮುಂಬರುವ ದೀಪಾವಳಿಗೆ ಪ್ರಯಾಣಿಕರು ಪಟಾಕಿಗಳನ್ನ ತಮ್ಮೊಟ್ಟಿಗೆ ಇಟ್ಟುಕೊಂಡು ಪ್ರಯಾಣಿಸಯವುದನ್ನೂ ಸಹ ಅಪಾಯವೆಂದು ಜನ ಸಾಮಾನ್ಯರಿಗೆ ತಿಳಿ ಹೇಳಲಾಗಿದೆ.
ಕಳೆದ ಬಾರಿ ದೀಪಾವಳಿಯಲ್ಲಿ ಎರಡು ದೂರುಗಳನ್ನ ಸಹ ರೈಲ್ವೆ ರಕ್ಷಣಾಪಡೆ ದಾಖಲಿಸಿಕೊಂಡಿತ್ತು. ಪಟಾಕಿಗಳನ್ನ ಹೊತ್ತೊಯ್ಯುವ ಪ್ರಯಾಣಿಕರ ವಿರುದ್ದ ದೂರು ದಾಖಲಾಗಿತ್ತು. ಅನೇಕ ಪಟಾಕಿಗಳನ್ನ ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಬೆಂಗಳೂರಿನ ಅತ್ತಿ ಬೆಲೆಯಲ್ಲಿ ನಡೆದಿದ್ದ ಪಟಾಕಿ ದುರಂತ ಈ ಎಲ್ಲಾ ಜನ ಜಾಗೃತಿಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ-https://suddilive.in/archives/2179
