ಸ್ಥಳೀಯ ಸುದ್ದಿಗಳು

ಮಹಿಳೆ ಘೋಷಣೆ ಕೂಗಿದ ವಿಡಿಯೋ ಎಡಿಟ್-ಸುಮೋಟೋ ದೂರು ದಾಖಲು

ಸದ್ದಿಲೈವ್/ಶಿವಮೊಗ್ಗ

ಶಿವಪ್ಪ ನಾಯಕ ವೃತ್ತದ ಬಳಿ ಮಹಿಳೆಯೋರ್ವಳು ಜೈ ಶ್ರೀರಾಮ್ ಗೆ ಪ್ರತಿಯಾಗಿ ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಕೂಗಿರುವುದು ಈಗ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಧ್ಯಮವೊಂದರ ವಿಡಿಯೋವನ್ನ ಎಡಿಟ್ ಮಾಡಿ ಪೊಲೀಸ್ ಸಿಬ್ಬಂದಿಗೆ ಲಿಪ್ಸ್ ಮೂಮೆಂಟ್ ನ್ನ ನೀಡಿ  ಅವಾಚ್ಯ ಶಬ್ದ ಬಳಸಿದ್ದರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.

ರೌಡಿ ನಿಗ್ರಹದಳದ ತಮ್ಮಣ್ಣ ಜಂಬರಗಿ ಅವರು ಆ ವಿಡಿಯೋದಲ್ಲಿ ಕಾಣಸಿದ್ದು ಅವರಿಗೆ ಲಿಪ್ಸ್ ಮೂಮೆಂಟ್ ಹಾಕಿ ಅವಹೇಳನ ರೀತಿ ಫೇಸ್ ಬುಕ್ ನಲ್ಲಿ ಹರಿ ಬಿಟ್ಟ Ka_36_kiladi_krishna w Instagram Facebook ನಲ್ಲಿ ಅವಹೇಳನ ರೀತಿ ಬಿಂಬಿಸಿ ಸಾಮಾಜದ ಶಾಂತಿಗೆ ಭಂಗ ತರುವಂತೆ ಮಾಡಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನಿನ್ನೆ ಸಂಜೆ 5.00 ಗಂಟೆ ಸಮಯದಲ್ಲಿ ಜಂಬಿಗೆಯವರು ಶಿವಮೊಗ್ಗ ನಗರದ ಖಾಸಗೀ ಬಸ್ ನಿಲ್ದಾಣದ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಅವರ ಮೊಬೈಲ್ ನ ಸಾಮಾಜಿಕ ಜಾಲತಾಣದ Facebook ಗೆ ಬಂದ ಒಂದು ವಿಡಿಯೋ ಎಡಿಟ್ ಮಾಡಿರುವುದು ಹರಿದು ಬಂದಿರುತ್ತದೆ.

ಈ ವೀಡಿಯೋದಲ್ಲಿ  ಜ.22 ರಂದು ಅಯೋಧ್ಯ ರಾಮಮಂದಿರ ಉದ್ಘಾಟನಾ ನಿಮಿತ್ತವಾಗಿ ಶಿವಮೊಗ್ಗ ನಗರದ ಶಿವಪ್ಪನಾಯಕ ಪ್ರತಿಮೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಒಬ್ಬ ಮಹಿಳೆಯು ಬುರ್ಖಾ ಧರಿಸಿಕೊಂಡು ಬಂದು ಅಲ್ಲಾ ಹು ಆಕ್ಬರ್ ಎಂದು ಕೂಗಿದ್ದು, ಇದನ್ನ  Ka_36_kiladi_krishna w Instagram Facebook ಖಾತೆಯ Facebook ರೀಲ್ಸ್ ಮಾಡಿ ಹರಿಬಿಡಲಾಗಿದೆ.

ವೀಡಿಯೋದಲ್ಲಿ ಮುಸ್ಲಿಂ ಮಹಿಳೆಯು ಕೂಗಿದ್ದರ ಜೊತೆಯಲ್ಲಿ ಎಡಿಟ್ ಮಾಡಿ ಲೇ ಎಂಥಾ ದೊಡ್ಡ ತಿಕಲ್ ಕುಡುಕ್ಕನ್ ಮಕ್ಕಳು ಎಂಬ ಇತ್ಯಾದಿ ಮತ್ತು ಇಂತಹ ಹುಚ್ಚ್ರು ಇಡೀ ದೇಶದಲ್ಲಿ ಸಿಗಲ್ಲ ಎಂಬಿತ್ಯಾದಿಯಾಗಿ ಎಡಿಟ್ ಮಾಡಲಾಗಿದೆ. ಇದು ಸಮಾಜದ ಶಾಂತಿ ಕದಡುತ್ತಿರುವುದು ಕಂಡು ಬಂದಿದ್ದರಿಂದ ಈ ವಿಡಿಯೋ ಹರಿಬಿಟ್ಟ  Ka_36 kiladi_krishna ನ ವಿರುದ್ಧ ದೂರು ದಾಖಲಿಸಲಾಗಿದೆ.‌

ಇದನ್ನೂ ಓದಿ-https://suddilive.in/archives/7721

Related Articles

Leave a Reply

Your email address will not be published. Required fields are marked *

Back to top button