ಒಂದ್ಕಡೆ ಆರಗರನ್ನ ಹೊಗಳಿ ಮತ್ತೊಂದೆಡೆ ತೆಗಳಿದ ಶಾಸಕ ಬೇಳೂರು-ವಿಡಿಯೋ ವೈರಲ್

ಸುದ್ದಿಲೈವ್/ಶಿವಮೊಗ್ಗ

ಒಮ್ಮೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಏಕವಚನದಲ್ಲಿ ನಿಂದಿಸರುವ ಮತ್ತೊಮ್ಮೆ ಅವರನ್ನೇ ಸಾರ್ವಜನಿಕ ಸಮಾರಂಭದಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ.
ಶಿವಮೊಗ್ಗದ ಐಬಿಯಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣರ ಸುದ್ದಿಗೋಷ್ಠಿ ಮೊನ್ನೆ ಭಾನುವಾರ ನಡೆದಿತ್ತು. ಸುದ್ದಿಗೋಷ್ಠಿಯಲ್ಲಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರು ಹುಲಿ ಉಗುರು ಮಲೆನಾಡಿನಲ್ಲಿ ಮನೆ ಮನೆಯಲ್ಲಿ ಬಳಕೆಯಾಗುತ್ತದೆ. ರಾಜ್ಯ ಸರ್ಕಾರ ಈ ಕಾನೂನನ್ನ ಮರುಪರಿಶೀಲಿಸಲು ಕೋರಿದ್ದರು.
ಈ ವಿಷಯ ಪ್ರಸ್ತಾಪಿಸಿದ ಬೇಳೂರು ಯಾವುದೇ ಧರ್ಮೀಯ ಗಲಭೆಯನ್ನ ಕೋಮು ಬಣ್ಣಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ತಲಹರಟೆಗಳು ಎಂದು ಏಕವಚನ ಬಳಸಿದ್ದರು.
ಆದರೆ ಹೊಸನಗರ ತಾಲೂಕಿನ ಮುಂಬಾರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೇಳೂರು ಮಾಜಿ ಗೃಹ ಸಚಿವ ಆರಗರವನ್ನ ಹಾಡಿಹೊಗಳಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಆರಗ ಬಸವಣ್ಣರಿದ್ದಂತೆ ಎಂದು ಹಾಡಿ ಹೊಗಳಿದ್ದಾರೆ. ಅವರು ಕ್ಷೇತ್ರದಲ್ಲಿ ನಿರ್ಮಿಸಿರುವ ಸೇತುವೆಗಳು ಸಾರ್ವಜನಿಕರಿಗೆ ಅನುಕೂವಾಗಿದೆ.
ಅಭಿವೃದ್ಧಿ ವಿಚಾರದಲ್ಲಿ ನಮ್ಮೆಲ್ಲರಿಗಿಂತ ಹಿರಿಯ ರಾಜಕಾರಣಿ ಎಂದು ಹಾಡಿ ಹೊಗಳಿರುವ ವಿಡಿಯೋಗಳನ್ನ ಈಗ ವೈರಲ್ ಮಾಡಲಾಗುತ್ತಿದೆ. ಈ ವಿಡಿಯೋ ಎಲ್ಲಿಗೆ ಮುಟ್ಟಲಿದೆ ಕಾದು ನೋಡಬೇಕಿದೆ. ಸಂಸದರ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಬೇಳೂರು ಇಂತಹ ಮಾತಿನಿಂದ ಹೊರಗೆ ಬರಬೇಕು ಎಂಬ ಸಲಹೆ ಹೊರಬಿದ್ದಿದೆ.
ಆದರೆ ರಾಜಕೀಯದಲ್ಲಿ ಎಲ್ಲಾ ಪಕ್ಷದವರು ಒಂದೇ. ಸಿದ್ಧಾಂತಗಳು ಬೇರೆ ಇರ್ತಾವೆ. ಕಾಮೆಂಟ್ಸ್ ಮತ್ತು ಟ್ರೋಲ್ ಮಾಡುವವರಿಗೆ ಇದೊಂದು ಹಬ್ಬದ ವಿಷಯವಾಗಿದೆ.
ಇದನ್ನೂ ಓದಿ-https://suddilive.in/archives/2165
