ಶಿವಮೊಗ್ಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆಯಾ ಓಸಿ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಓಸಿ ಎಗ್ಗಿಲ್ಲದೆ ನಡೆಯುತ್ತಿದೆ. ಬ್ರೇಕ್ ಹಾಕಬೇಕಿದ್ದ ಪೊಲೀಸ್ ಇಲಾಖೆನೆ ಶಾಮೀಲ್ ಆಗಿದೆಯಾ ಎಂಬ ಅನುಮಾನಕ್ಕೆ ಈ ವಿಡಿಯೋಗಳು ಮತ್ತು ಫೊಟೊಗಳು ಎಡೆಮಾಡಿಕೊಡುತ್ತಿವೆ.
ಚುನಾವಣೆಗೂ ಮುನ್ನ ಒಸಿ ಬಿಡ್ಡರ್ ಗಳ ಹೆಡೆಮುರಿಕಟ್ಟಲಾಗಿತ್ತು. ಆದರೆ ಓಸಿ ಬರೆಯುವವರ ಸಂಖ್ಯೆ ಮಾತ್ರ ಎಲ್ಲೂ ನಿಂತಿಲ್ಲ. ಓಸಿದು ಒಂದು ಸಮಸ್ಯೆ ಇದೆ. ಓಸಿ ಬರೆದವರ ವಿರುದ್ಧ 100 ದಂಡ ಬಿಟ್ಟರೆ ಬೇರೆ ಯಾವುದೇ ಶಿಕ್ಷೆ ಇಲ್ಲದೆ ಇರುವುದು ಮತ್ತು ದಂಡ ಕಟ್ಟಿ ಬಂದ ನಂತರ ಆತ ಮತ್ತೆ ಲಿಂಕ್ ಬೆಳೆಸಿಕೊಂಡು ರಾಜಾರೋಷವಾಗಿ ಬೆಳೆಯುತ್ತಾನೆ.
ಇದಕ್ಕೆ ಇಲಾಖೆಯಲ್ಲಿರುವವರೆ ಶಾಮೀಲ್ ಆಗಿರುವ ಆರೋಪ ಈ ಓಸಿ ಆಟ ಆರಂಭವಾಗಿದ್ದಲಿಂದಲೂ ಇದೆ. ಈ ವಿಡಿಯೋ ವೀಕ್ಷಿಸಿ ಗೂಡಂಗಡಿ ಹಿಂಬದಿಯಲ್ಲಿ ಕಲ್ಲು ಮೇಲೆ ಕುಳಿತು ಬರುವ ಗಿರಾಕಿಯ ನಂಬರ್ ಬರೆದುಕೊಂಡು ಹಣ ಇಸಿಕೊಳ್ಳುತ್ತಿದ್ದಾನೆ. ಈತನ ಎದರೇ ವಿಡಿಯೋ ಮಾಡಿಕೊಂಡರು ಡೋಂಟ್ ಕೇರ್ ಆಗಿ ವರ್ತಿಸುತ್ತಿದ್ದಾರೆ.
ಸವಳಂಗ ರಸ್ತೆಯಲ್ಲೇ ಎರಡು ಕಡೆ, ಪಾರ್ಕ್ ಎಕ್ಸಟೆನ್ಷನ್ ಕಡೆ ಓಸಿ ಬರೆಯಲಾಗುತ್ತದೆ. ಶೇಷಾದ್ರಿಪುಂ ಕಡೆ ಓಸಿಗಳು ಎಗ್ಗಿಲ್ಲದೆ ನಡೆಯುತ್ತಿದೆ. ಸಧ್ಯಕ್ಕೆ ಈ ವಿಡಿಯೋ ಸಹ ಓಸಿ ಹಾವಳಿಗೆ ಕೈಗನ್ನಡಿಯಾಗಿದೆ.
