ಸರಗಳ್ಳರ ಬಂಧನ

ಸುದ್ದಿಲೈವ್/ಶಿವಮೊಗ್ಗ

ಅ.11ರಂದು ವಿನೋಬ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಟೀಚರ್ ರವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ತಾಗಿಸಿ ಬೀಳುವಂತೆ ಮಾಡಿ, ಬೀಳುವ ವೇಳೆ ಅವರ ಕುತ್ತಿಗೆಯಲ್ಲಿದ್ದ 54 ಗ್ರಾಂ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋದ ಪ್ರಕರಣವನ್ನ ವಿನೀಬ ನಗರ ಪೊಲೀಸರು ಬೇಧಿಸಿದ್ದಾರೆ.
ಅ.11 ರಂದು ಮೇರಿಮೆಕ್ಯೂಲೇಟ್ ನ ಶಿಕ್ಷಕಿ ತಮ್ಮ ಪತಿಯ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರವಾಗ ಹಿಂಬದಿಯಿಂದ ಬಂದು ತಗುಲಿಸಿ ಹಿಂಬದಿಯಲ್ಲಿ ಕುಳಿತಿದ್ದ ಶಿಕ್ಷಕಿಯನ್ನ ಬೀಳುವಂತೆ ಮಾಡಿ 54 ಗ್ರಾಂ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಿದ್ದರು. ಪತಿ ಅವರನ್ನ ಹಿಂಬಾಲಿಸಿದರೂ ಬೈಕ್ ನ್ನ ಸ್ಪೀಡ್ ಆಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರು.
ಸಂತ್ರಸ್ತೆ ಆಶಾರವರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಆ ದಾಖಲಿಸಿದ್ದರು. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿನೋಬನಗರದ ಪೊಲೀಸ್ ಇನ್ ಸ್ಪೆಕ್ಟರ್ ಚಂದ್ರಕಲಾ ಹೆಚ್ ಹೊಸಮನಿ, ಪಿಎಸ್ಐ ಸನೀಲ್, ಸಿಬ್ಬಂದಿಗಳಾದ ರಾಜು, ಚಂದ್ರನಾಯ್ಕ್ ಬಿ, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎನ್ ಕೆ, ತಂಡ ರಚಿಸಲಾಗಿತ್ತು.
ರಾಣೇಬೆನ್ನೂರಿನ ನಿವಾಸಿಗಳಾದ ಆಕಾಶ್ (21), ಪ್ರವೀಣ್ ಹಡಗಲಿ (28) ರವನ್ನಬಂಧಿಸಲಾಗಿದೆ. ಇವರಿಂದ ಬಿನೋಬ ನಗರ, ತುಂಗನಗರ ಪೊಲೀಸ್ ಠಾಣೆ, ತೀರ್ಥಹಳ್ಳಿ ಪೊಲೀಸ್ ಠಾಣೆ, ಉಡುಪಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 6 ಪ್ರಕರಣದಲ್ಲಿ ದೂರು ದಾಖಲಿಸಲಾಗಿದ್ದವು.
10,48,600 ರೂ ಮೌಲ್ಯದ 186 ಗ್ರಾಂ ಚಿನ್ನಾಭರಣ, ಮತ್ತು ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ-https://suddilive.in/archives/2120
