ಆರ್ ಎಂ ಎಂ ಮನೆಯ ಮೇಲೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡರ ಮೇಲಿನ ಇಡಿ ದಾಳಿಯನ್ನ ಖಂಡಿಸಿ ಜನಪರ ಹೋರಾಟ ಸಮಿತಿ ಇಂದು ಪ್ರತಿಭಟಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಆರ್ ಎಂ ಮಂಜುನಾಥ ಗೌಡ 10 ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದವರು. ಈ ಹಿಂದೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು.ಅವರು ನ್ಯಾಯಾಲಯದ ತೀರ್ಪಿನ ಪ್ರಕಾರ ಈಗಿನ ಅಧ್ಯಕ್ಷರಾಗಿದ್ದಾರೆ.
ಬ್ಯಾಂಕ್ ನ ಅವ್ಯವಹಾರದ ಪ್ರಕರಣದಲ್ಲಿ ಸಿಒಡಿ ತನಿಖೆಯಾಗಿತ್ತು. ಅದರಲ್ಲಿ ಗೌಡರನ್ನಕ್ಲೀನ ಚೀಟ್ ನೀಡಲಾಗಿದೆ. ಗೌಡರ ಏಳಿಗೆಯನ್ನ ಸಹಿಸದ ಕೆಲವರು ಮನೆಗಳ ಮೇಲೆ ಜಾರಿ ನಿರ್ದೇಶನಾಲಯದಿಂದ ನಿನ್ನೆ ದಾಳಿ ನಡೆಸಲಾಗಿದೆ. ಬಿಜೆಪಿ ಕೇಂದ್ರ ಸರ್ಕಾರದ ಸಂಸ್ಥೆಗಳನ್ನ ಬಳಸಿಕೊಂಡು ರಾಜಕೀಯ ಪ್ರೇರಿತವಾಗಿ ದಾಳಿ ನಡೆಸುತ್ತಿದೆ ಎಂದು ಜನಪರ ಹೋರಾಟ ಸಮಿತಿ ಆರೋಪಿಸಿದೆ.
ಮನವಿ ನೀಡುವ ವೇಳೆ, ಕಂಕಾರಿ, ಉಪ ಮಹಾಪೌರ ಪಾಲಾಕ್ಷಿ, ಎಸ್ ಎನ್ ಮಹೇಶ್, ಎಂ ರಾಜಣ್ಣ, ಅನಿಲ್ ಕುಮಾರ್, ನರಸಿಂಹ, ಎಸ್ ಕೆ ಭಾಸ್ಕರ್, ಮೊದಲಾದವರು ಉಪಸ್ಥಿತರಿದ್ದರು.
