ಮಲೆನಾಡಿಗರ ರೈತರ ಸಮಸ್ಯೆ ಬಗೆಹರಿಸಿ-ತೀನಾಶ್ರೀ

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಯ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆ ಹರಿಸುವ ಬಗ್ಗೆ ಬಿಜೆಪಿ ಆಶ್ವಾಸನೆ ನಡಿತ್ತು. ಆದರೆ ಚುನಾವಣೆ ನಂತರ ಠುಸ್ ಪಟಾಕಿ ಆಯಿತು ಎಂದು ತೀನಾ.ಶ್ರೀನಿವಾಸ್ ಅರೊಪಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಮಧು ಬಂಗಾರಪ್ಪನವರು ಸಂತ್ರಸ್ತರಿಗಾಗಿ ಪಾದಯಾತ್ರೆ ಮಾಡಿ ಎನ್ ಇಎಸ್ ಗ್ರೌಂಡ್ ನಲ್ಲಿ ಸಮಾವೇಶ ನಡೆಸಿದ್ದರು. ಭಾಗಿಯಾಗಿದ್ದ ಈಗಿನ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಲೆನಾಡ ರೈತರ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು 165 ದಿನ ಆದರೂ ಯಾರೂ ಮಾತನಾಡುತ್ತಿಲ್ಲ ಎಂದು ಅಗ್ರಹಿಸಿದರು.
ಸಚಿವ ಮಧು ಬಂಗಾರಪ್ಪ ಕಂದಾಯ ಮತ್ತು ಅರಣ್ಯ ಸಭೆ ನಡೆಸಿದ್ದಾರೆ. ಆದರೆ ತೀರ್ಮಾನ ಆಗಿರಲಿಲ್ಲ. ಕೃಷಿ ಸಚಿವಭೈರೇಗೌಡ ಶಿವಮೊಗ್ಗಕ್ಕೆ ಬಂದಾಗ ರಾಜ್ಯದಲ್ಲಿ ಅತಿಹೆಚ್ಚು ಸಮಸ್ಯೆ ಇರುವುದಾಗಿ ಹೇಳಿದ್ದರು. ನೆನೆಗುದಿಗೆ ಬಿದ್ದ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಶಿವಮೊಗ್ಗಕ್ಕೆ ಬಂದು ಅಧಿಕಾರಿಗಳ ಸಭೆ ನಡೆಸ ಬೇಕು. ಪರಿಹಾರ ಘೋಷಿಸಬೇಕೆಂದರು.
11ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸಬೇಕು. ಒಂದು ವರ್ಷದ ಹಿಂದೆ ಡಿಕೆಶಿ ಶಿಕಾರಿಪುರದ ತಾಂಡವೊಂದರಲ್ಲಿ ಸಭೆ ನಡೆಸಿದ್ದರು. ಜಮೀನು ನಮ್ಮ ಹೆಸರಿಗೆ ಮಾಡಿಕೊಡಲು ಬೇಡಿಜೆ ಇಡಲಾಗಿತ್ತು. ಆದರೆ ಈಗ ಇವರ ಭೂಮಿಯಲ್ಲಿ ಬಾಂದ್ ಗಲ್ಲು ಹಾಕಲಾಗುತ್ತಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಂದು ಮಧು ಬಂಗಾರಪ್ಪ ಸಭೆ ನಡೆಸಲಿದ್ದಾರೆ. ಶಾಶ್ವತ ಪರಿಹಾರ ಕೊಡಬೇಕೆಂದರು.
ಬಿಜೆಪಿಗೆ ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸಲು ಕಾಲಾವಕಾಶವಿತ್ತು. ಆದರೆ ರೈತರನ್ನ ಕ್ಯಾರೆ ಎನ್ನಲಿಲ್ಲ. ಈಗ ಕಾಂಗ್ರೆಸ್ ಅದೇ ಹಾದಿ ಹಿಡಿಯಬಾರದು ಎಂಬ ಉದ್ದೇಶದಿಂದ ತೀನಾ ಎಚ್ಚರಿಸುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ-
