ಸ್ಥಳೀಯ ಸುದ್ದಿಗಳು

ಶಾಲೆಯ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳ ಹೆಸರು ಬರೆದು ಹೆಚ್ ಎಂ ಆತ್ಮಹತ್ಯೆ

ಸುದ್ದಿಲೈವ್/ಶಿವಮೊಗ್ಗ

ಅನುದಾನಿತ ಶಾಲೆಯ ಕಾರ್ಯದರ್ಶಿಗಳ ಮತ್ತು ಇತರೆ ಸಿಬ್ಬಂದಿಗಳ ಹೆಸರು ಬರೆದು ಶಾಲೆಯ ಮುಖ್ಯೋಪದ್ಯಾಯರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಶಿವಮೊಗ್ಗದ ಅಶೋಕ ನಗರದ 2 ನೇ ತಿರುವಿನ‌ಲ್ಲಿ ವಾಸವಾಗಿರುವ ಮುಖ್ಯೋಪದ್ಯಾಯರಾಗಿದ್ದ ಷಣ್ಮುಖಪ್ಪ ಎಂಬ 42 ವರ್ಷದ ವ್ಯಕ್ತಿ ಮನದಯ ಅಂಗಳದಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಿನ್ನೆ ಭಾನುವಾರ ಕ್ರಿಕೆಟ್ ನೋಡುತ್ತಿದ್ದ ಷಣ್ಮುಖಪ್ಪ ಮಕ್ಕಳು ಮತ್ತು ಹೆಂಡತಿ ಮಲಗಿಕೊಂಡ ನಂತರ ಈ ಕೃತ್ಯ ಮಾಡಿಕೊಂಡಿದ್ದಾರೆ. ಮದ್ಯ ಸೇವಿಸಿದ್ದ ಹೆಡ್ ಮಾಸ್ಟರ್ ರಾತ್ರಿಯ ವೇಳೆಯಲ್ಲಿ ಎಷ್ಟು ಹೊತ್ತಿಗೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲವೆಂದು ತಿಳಿಸಿದ್ದಾರೆ.

ಅಶೋಕನಗರದ ಇನ್ನೋರ್ವ ಶಾಲೆಯ ಹೆಡ್ ಮಾಸ್ಟರ್ ಆಗಿದ್ದಾರೆ. 12 ವರ್ಷದಿಂದ ಷಣ್ಮುಖಪ್ಪ ಈ ಶಾಲೆಯಲ್ಲಿ ಕೆಲಸಮಾಡಿಕೊಂಡು ಬಂದಿದ್ದಾರೆ. ಕಾರ್ಯದರ್ಶಿ ಭೋಜ್ಯ ನಾಯ್ಕ್ ಮತ್ತು ಇತರೆ ಸಿಬ್ಬಂದಿಗಳ ಹೆಸರು ಬರೆದು ನೇಣಿಗೆ ಶರಣಾಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅವರ ಮನೆಯವರು ದೂರು ದಾಖಲಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/2093

Related Articles

Leave a Reply

Your email address will not be published. Required fields are marked *

Back to top button