ರಾಗಿಗುಡ್ಡದಲ್ಲಿ ಕಲ್ಲು ತೂರಿದ ಮನೆಗಳಿಗೆ ಶಾಸಕ ಚೆನ್ನಬಸಪ್ಪ ಭೇಟಿ-ಧೈರ್ಯ ತುಂಬಿದ ಶಾಸಕರು

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಗಲಭೆ ಹಿನ್ಬಲೆಯಲ್ಲಿ ಇಂದು ಬೆಳಿಗ್ಗೆ ರಾಗಿಗುಡ್ಡಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ.ಏರಿಯಾದ ನಿವಾಸಿಗಳಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ.
ಗಲಭೆಗೆ ಬಳಸಿದ ಕಲ್ಲನ್ನು ಪ್ರದರ್ಶನ ಮಾಡಿ ಸಾರ್ವಜನಿಕರು ಶಾಸಕರ ಮುಂದೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಗಲಭೆ ಕೆಲಸ ಮಾಡುವವರಿಗೆ ಶಿವಮೊಗ್ಗ ಸ್ಲೀಪರ್ ಸೆಲ್ ಆಗಿದ. ಶಿವಮೊಗ್ಗದ ಹೆಸರು ಕೆಡಿಸಲು ಮೇಲಿಂದ ಮೇಲೆ ಈ ರೀತಿ ಮಾಡುತ್ತಿದ್ದಾರೆ. ನಿನ್ನೇ ಹಿಂದೂಗಳಮನೆಗಳನ್ನು ಟಾರ್ಗೇಟ್ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಶಾಸಕರ ಹತ್ತಿರ ಸ್ಥಳೀಯರು ನೋವು ಹೇಳಿಕೊಂಡಿದ್ದಾರೆ.
ನಾವು ರಾಗಿಗುಡ್ಡದಲ್ಲಿ ಹಿಂದೂಗಳು ನಾಯಿಗಳ ರೀತಿ ಬದುಕುತ್ತಿದ್ದೇವೆ.ಹದರಿ ಬದುಕುವ ಸ್ಥಿತಿ ತಲುಪಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಯೊಂದು ಮನೆಗೆ ಭೇಟಿನೀಡಿ ಶಾಸಕರು ಪರಿಶೀಲನೆ ನಡೆಸಿದರು.
ಶಾಸಕರ ಬಳಿ ನೋವು ಹೇಳಿಕೊಂಡ ಮಹಿಳೆಯರು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಜಖಂ ಮಾಡಲಾಗಿದೆ ಸ್ವಲ್ಪ ಪೊಲೀಸರು ಬರುವುದು ತಡವಾಗಿದ್ದರೆ ಜೀವ ಹಾನಿಯಾಗುತ್ತಿತ್ತು ಎಂದು ನೋವು ತೋಡಿಕೊಂಡಿದ್ದಾರೆ. ಹಿಂದೂ ಮತ್ತು ಮುಸ್ಲೀಂ ಎರಡೂ ಮನೆಗಳಿಗೆ ಶಾಸಕರು ಭೇಟಿ ನೀಡಿ, ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ-https://suddilive.in/2023/10/02/ರಾಗಿಗುಡ್ಡದಲ್ಲಿ-ಕಲ್ಲು-ತೂರ/
