ರಾಜ್ಯ ಸುದ್ದಿಗಳು

ಕೆಎಫ್ ಡಿಗೆ ಮತ್ತೊಂದು ಬಲಿ, ಇಂದು ಜಿಲ್ಲೆಯಲ್ಲಿ ಓರ್ವರಿಗೆ ಕೆಎಫ್ಡಿ!

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಅರೊಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೂರು ಜಿಲ್ಲೆಯಿಂದ ಒಬ್ಬರಿಗೆ ಕಾಯಿಲೆ ಕಾಣಿಸಿಕೊಂಡಿದೆ. ಆದರೆ ಇಂದು ಒಂದು ಸಾವಾಗಿದ್ದು‌ ಇದರಿಂದ ಮೂರು ಜಿಲ್ಲೆಗಳಿಂದ ಈ ವರ್ಷದ‌ ಒಟ್ಟು ಸಾವಿನ ಸಂಖ್ಯೆ 3 ಕ್ಕೆ ಏರಿದೆ.

ಇಂದು ಮೂರು ಜಿಲ್ಲೆಯಿಂದ 161 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 122 ಜನರನ್ನ ಶಿವಮೊಗ್ಗದ ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಒಬ್ವರಿಗೆ  ಸೋಂಕು ಪತ್ತೆಯಾಗಿದೆ. ಶಿರಸಿ ಜಿಲ್ಲೆಯಲ್ಲಿ 32 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಿಗೂ ಪಾಸಿಟಿವ್ ಕಾಣಿಸಿಕೊಂಡಿಲ್ಲ. ಚಿಕ್ಕಮಗಳೂರಿನ 7 ಜನರಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಓರ್ವರಿಗೆ ಸೋಂಕು ತಗುಲಿದೆ ಎಂದು ಬುಲಿಟಿನ್ ತಿಳಿಸಿದೆ.

ಜನವರಿ 1, 2024 ರಿಂದ ಇವತ್ತಿನ ವರೆಗೆ 4520 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 111 ಜನರಲ್ಲಿ ಸೋಂಕು ಪತ್ತೆಯಾಗಿದೆ. 82 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಟ್ಟು 26 ಜನರಲ್ಲಿ ಸೋಂಕು  ಆಕ್ಟಿವ್ ಆಗಿದೆ.

ಇದನ್ನೂ ಓದಿ-https://suddilive.in/archives/9424

Related Articles

Leave a Reply

Your email address will not be published. Required fields are marked *

Back to top button