ಅಪೂರ್ಣ ಮಾಹಿತಿಯೊಂದಿಗೆ ನಡೆದ ಮೇಯರ್ ಸುದ್ದಿಗೋಷ್ಠಿ!

ಸುದ್ದಿಲೈವ್/ಶಿವಮೊಗ್ಗ

ಅಪೂರ್ಣ ಮಾಹಿತಿಯೊಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ದಸರಾ ಹಬ್ಬದ ಧನ್ಯವಾದಗಳನ್ನ ತಿಳಿಸಲು ಮಾತ್ರ ಸುದ್ದಿಗೋಷ್ಠಿ ಸೀಮಿತಗೊಂಡಿದೆ.
ಕಳೆದ ಬಾರಿ ದಸರಾಗೆ 1.65 ಕೋಟಿ ಕರ್ಚಾಗಿದೆ. ಸರ್ಕಾರ 1 ಕೋಟಿ ರೂ. ಹಣ ಕೊಟ್ಟಿತ್ತು. ಉಳಿದಿದ್ದು ಪಾಲಿಕೆಯ ನಿಧಿ ಬಳಕೆಯಿಂದ ಖರ್ಚಾಗಿತ್ತು. ಅದರಂತೆ ಈ ಬಾರಿಯ ದಸರಾಕ್ಕೆ 1.80 ಕೋಟಿ ರೂ. ಖರ್ಚಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ಬಾರಿ ಸರ್ಕಾರ 20 ಲಕ್ಷ ರೂ. ಬಿಡುಗಡೆ ಮಾಡಿದೆ. ಮತ್ತೆ ಸರ್ಕಾರಕ್ಕೆ 1 ಕೋಟಿ ಪ್ರಸ್ತಾವನೆಯನ್ನ ಶಿವಮೊಗ್ಗ ಮಹಾನಗರ ಪಾಲಿಕೆ ಸಲ್ಲಿಸಿದೆ ಎಂದರು.
ಒಂದು ವೇಳೆ ಸರ್ಕಾರ ಹಣ ಕಳುಹಿಸದಿದ್ದರೆ, ನಿಧಿ ಬಳಕೆಯ ಹಣ ಬಳಕೆಯಾಗಲಿದೆಯ ಎಂಬುದರ ಸ್ಪಷ್ಟತೆಯಿಲ್ಲ. ಆದರೆ ಕಳೆದ ಬಾರಿ ನಿಧಿ ಬಳಕೆಯನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಈ ನಿಧಿ ಬಳಕೆಯ ಹಣ ಎಲ್ಲಿಂದ ಸಂಗ್ರಹಿಸಲಾಗಿದೆ ಎಂಬುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಿಲ್ಲ. ಈ ನಿಧಿ ಬಳಕೆಯ ಹಣ ಯಾವ ಮೂಲದ್ದು ಎಂಬುದನ್ನ ಅವರು ಸ್ಪಷ್ಟಪಡಿಸಲಿಲ್ಲ.
ದಸರಾ ಮೆರವಣಿಗೆಗೆ ಕರೆತರಲಾದ ಸಕ್ರೈಬೈಲಿನ ಆನೆಯೊಂದು ಮೆರವಣಿಗೆಯ ಹಿಂದಿನ ದಿನ ತಾಲೀಮು ನಡೆಸಿ ರಾತ್ರಿಯ ವೇಳೆಗೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಈ ಹೆಣ್ಣು ಮರಿಗೆ ಚಾಮುಂಡಿ ಎಂಬ ಹೆಸರಿಡಬೇಕೆಂದು ಪಾಲಿಕೆ ಮೇಯರ್ ಒತ್ತಾಯಿಸಿದರು. ಹೆಸರಿಡಲು ಪಾಲಿಕೆ ತರಾತುರಿಯಲ್ಲಿದೆ ಎಂಬ ಸಂಗತಿ ಹೊರಬಿದ್ದಿದೆ.
ಇದೊಂದು ಅಪರಾಧ ಎಂಬ ವಿಷಯ ಪಾಲಿಕೆಗೆ ಗೊತ್ತಾಗದೆ ಇರುವುದು ದುರಂತದ ವಿಷಯ. ಹೋಗಲಿ, ಹಬ್ಬ ಕಳೆದು ಎರಡು ದಿನವಾಗಿದೆ. ಇವತ್ತು ಧನ್ಯವಾದ ಹೇಳಲು ಮಾತ್ರ ಸುದ್ದಿಗೋಷ್ಠಿ ಕರೆದಂತಿತ್ತು. 1.75-2 ಲಕ್ಷ ಜನ ಫ್ರೀಡಂ ಪಾರ್ಕ್ ನಲ್ಲಿ ಜನ ಸೇರಿದ್ದರು ಎಂಬ ಮಾಹಿತಿಯನ್ನ ಹೇಳುವ ಮೇಯರ್ ಆನೆಗಳನ್ನಕರೆಯಿಸಲು ಎಷ್ಟು ಖರ್ಚಾಗಿದೆ ಎಂದು ಹೇಳುವಲ್ಲಿ ವಿಫಲರಾಗಿದ್ದಾರೆ.
ಕಳೆದ ವರ್ಷ ಆನೆಗಳನ್ನ ಕರೆತರಲು ಕರ್ಚಾಗಿರುವ ಬಗ್ಗೆನೂ ಮಾಹಿತಿ ನೀಡುವಲ್ಲಿಯೂ ವಿಫಲರಾದರು. ಕೇವಲ ಧನ್ಯವಾದಗಳನ್ನು ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವರ್ಷದ ದಸರಾ ಹಬ್ಬವನ್ನ ಮಹಾನಗರ ಪಾಲಿಕೆಯ ವತಿಯಿಂದ ಸಂಭ್ರಮದಿಂದ ಆಚರಿಸಲಾಗಿದೆ. ಈ ಆಚರಣೆಯಲ್ಲಿ ಭಾಗಿಯಾದ ಶಿವಮೊಗ್ಗದ ಸಮಸ್ತ ಜನರಿಗೆ ಪಾಲಿಕೆ ಮೇಯರ್ ಶಿವಕುಮಾರ್ ಧನ್ಯವಾದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆಉಪಮೇಯರ್ ಲಕ್ಷ್ಮೀ ಶಂಕರ್, ಸದಸ್ಯರಾದ ಆ.ಮ.ಪ್ರಕಾಶ್, ಅನಿತಾ ರವಿಶಂಕರ್, ರೇಖಾರಂಗನಾಥ್ ವಿಶ್ವನಾಥ್ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/1891
