ಪತ್ರಕರ್ತರ ವಿರುದ್ಧ ದುಂಡಾವರ್ತನೆಗೆ ಇಳುದ್ರಾ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ?

ಸುದ್ದಿಲೈವ್/ತುಮಕೂರು

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪತ್ರಕರ್ತರ ಮೇಲೆ ಹಲ್ಲೆ ನಡೆಇಸುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ರಾಜ್ಯಾಧ್ಯಕ್ಷರ ರೌಡಿಜಂ ವಿರುದ್ಧ ಪತ್ರಕರ್ತರೆಲ್ಲಾ ಧರಣಿ ಕುಳಿತಿದ್ದಾರೆ.
ಖಾಸಗಿ ವಾಹಿನಿಯ ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ ಮಾಡಿರುವ ರಾಜ್ಯಾಧ್ಯಕ್ಷರು ದರ್ಪ ಮೆರೆದಿದ್ದಾರೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ. ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕ್ರೀಡಾಕೂಟವೊಂದು ಆಯೋಜಿಸಲಾಗಿತ್ತು.
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಸಂಘದವತಿಯಿಂದ ಕ್ರೀಡಾಕೂಟವನ್ನ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಕ್ರೀಡಾಕೂಟದ ಸಮವಸ್ತ್ರವನ್ನ ಕ್ರೀಡಾಪಟುಗಳಿಗೆ ಹಂಚಲಾಗಿತ್ತು. ಕ್ರೀಡಾಪಟುಗಳು ಸಮವಸ್ತ್ರದ ಸುತ್ತಳತೆ ಹೆಚ್ಚುಕಮ್ಮಿಯಾಗಿದ್ದನ್ನ ರಾಜ್ಯಾಧ್ಯಕ್ಷರ ಮುಂದೆ ಆಕ್ಷೇಪಿಸಿದ್ದರು.
ಈ ಆಕ್ಷೇಪಣೆಯನ್ನ ಚಿತ್ರೀಕರಿಸಲು ಮುಂದಾದ ಪ್ರತಿಷ್ಠಿತ ಸುದ್ದಿವಾಹಿನಿಯ ಕ್ಯಾಮೆರಾಮನ್ ನ ಮೊಬೈಲ್ ಕಸಿದುಕೊಂಡು ನೆಲಕ್ಕೆ ಬೀಳಿಸಿದ ರಾಜ್ಯಾಧ್ಯಕ್ಷರು ಕ್ತಾಮರಾಮನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಅಲ್ಲಿನ ಪತ್ರಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಗಾಯಗೊಂಡ ಕ್ಯಾಮೆರಾಮನ್ ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೇನು ಕೆಲಕ್ಷಣದಲ್ಲಿ ಗೃಹಸಚಿವ ಡಾ.ಪರಮೇಶ್ವರ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಆದರೆ ಅಷ್ಟರಲ್ಲಿ ರಾಜ್ಯಧ್ಯಾಕ್ಷರ ದುಂಡಾವರ್ತನೆಯಿಂದ ಕೆರಳಿದ ಪತ್ರಕರ್ತರು ಧರಣಿಕುಳಿತಿದ್ದಾರೆ. ಕೆಟ್ಟಮೇಲೆ ಬುದ್ದಿ ಬಂದಿದೆ ಎಂಬ ಮಾತಿನ ಹಾಗೆ ಈಗ ರಾಜ್ಯಧ್ಯಕ್ಷರು ಕ್ಷಮೆ ಕೇಳಲು ಮುಂದಾಗಿದ್ದಾರೆ. ಆದರೆ ಪತ್ರಕರ್ತರು ಅವರ ಕ್ಷಮೆಗೆ ಮಣೆಹಾಕುತ್ತಿಲ್ಲ. ಇದರಿಂದ ಕ್ರೀಡಾಕೂಟ ಏನಾಗಲಿದೆ ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ಕಳಪೆ ಗುಣಮಟ್ಟದ ಟೀ ಶರ್ಟ್ ವಿತರಣೆ ಮಾಡಿ ಗೋಲ್ ಮಾಲ್ ಮಾಡಿರುವುದಾಗಿ ಕ್ರೀಡಾಪಟುಗಳು ಆರೋಪ ಮಾಡಿದ್ದಾರೆ. ಕ್ರೀಡಾಕೂಟಕ್ಕೆ ಆರು ತಿಂಗಳ ಹಿಂದೆಯೇ ಸಂಘ ರಿಜಿಸ್ಟ್ರೇಷನ್ ಮಾಡಿಸಿಕೊಂಡಿತ್ತು.
ಆದ್ರೆ ಸರಿಯಾದ ಸೈಜ್ ಗಳ ಟೀ ಶರ್ಟ್ ಕೊಡುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಕ್ರೀಡಾಪಟುಗಳಿಂದ ಆಕ್ರೋಶ ವ್ಯಕ್ತ ಇದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ರಾಜ್ಯಧ್ಯಕ್ಷ ಷಡಕ್ಷರಿ ಹಲ್ಲೆ ನಡೆಸಿರುವುದು ಈಗ ಮತ್ತೊಂದು ತಿರುವಿಗೆ ಗುರಿಯಾಗಿದೆ.
ಇದನ್ನೂ ಓದಿ-https://suddilive.in/archives/1924
