ರಾಷ್ಟ್ರೀಯ ಸುದ್ದಿಗಳು

ಜಂಬೂ ಸವಾರಿಗೆ ಬಂದ ಆನೆಗೆ ಹೆರಿಗೆ ಪ್ರಕರಣ-ತನಿಖೆ ನಡೆಸುವಂತೆ ಮಲೆನಾಡ ಕೇಸರಿ ಪಡೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಪರಿಸರ ವಾದಿಗಳಿಂದ ಈ ಕೆಲಸ ಆಗಬೇಕು ಈ‌ಕೆಲಸ ಆಗಬಾರದು ಎಂಬ ಆಯ್ಕೆಗಳಿಲ್ಲ. ಆದರೆ ಕಣ್ಣಮುಂದೆ ಆದ ಒಂದು ದಿವ್ಯ‌ನಿರ್ಲಕ್ಷವನ್ನ ಹೇಗೆ ಸ್ವೀಕರಿಸಲಾಯಿತು ಎಂಬುದೇ ಇಲ್ಲಿನ ಪ್ರಶ್ನೆ? ದಸರಾ ಮೆರವಣಿಗೆಗೆ ಬಂದ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಬಗ್ಗೆ ಯಾವ ಪರಿಸರ ತಜ್ಞರು ಏನು ಕ್ರಮ ಕೈಗೊಂಡಿದ್ದಾರೆ?

ಒಂದಿಷ್ಟು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನ ಹರಿಬಿಟ್ಟು ಅರಣ್ಯ ಅಧಿಕಾರಿಗಳ ವಿರುದ್ಧ ಹೌಹಾರಿದ್ದು ಬಿಟ್ಟರೆ ಮತ್ತೆ ಏನು ಮಾಡಲಾಗಿದೆ? ಸರಿಯಾದ ದೂರು ದಾಖಲಿಸಿದಾಗ ಮಾತ್ರ ಹೋರಾಟ ಮತ್ತೊಂದು ವಿಷಯ ಚುರುಕುಗೊಳ್ಳುತ್ತದೆ. ಇಂತಹ ದೂರು ದಾಖಲನ್ನ ಮಾಡದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ಸ್ ಮಾಡಿದರೆ ಯಾವ ಹೋರಾಟ  ನಡೆಯುತ್ತದೆ?

ಮನವಿ ನೀಡಿದ ಮಲೆನಾಡ ಕೇಸರಿ ಪಡೆ

ಆದರೆ ರಾಜು ಎಂಬುವರ ನೇತೃತ್ವದಲ್ಲಿ  ಮಲೆನಾಡ ಕೇಸರಿ ಪಡೆ ಎಂಬ ಸಂಘಟನೆಯೊಂದು ಇಂದು ಸಿಸಿಎಫ್ ಕಚೇರಿಗೆ ಹೋಗಿ ದಸರಾ ಮೆರವಣಿಗೆಗೆ ಸಕ್ರೆ ಬೈಲಿನಿಂದ ಕರೆತರಲಾದ ಮೂರು ಆನೆಗಳಲ್ಲಿ ಒಂದು ಸಾಗರ ಎಂಬ ಗಂಡಾನೆ ಮತ್ತು‌ ನೇತ್ರಾವತಿ, ಹೇಮಾವತಿ ಎಂಬ ಎರಡು ಹೆಣ್ಣಾನೆಯನ್ನ ಕರೆತರಲಾಗಿತ್ತು. ಇದರಲ್ಲಿ ನೇತ್ರಾವತಿಗೆ ಸಿಟಿ ರೌಂಡ್ಸ್ ಹಾಕಿಸಿ ನಂತರ ಶಾಲೆಯ ಆವರಣದಲ್ಲಿರಿಸಿದಾಗ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ.

ಈ ಹೆಣ್ಣು ಮರಿಗೆ ಜನ್ಮ ನೀಡಿರುವುದು ಅಚ್ಚರಿ ಮೂಡಿಸಿಲ್ಲ. ಬದಲಿಗೆ ನೇತ್ರಾವತಿ ಗರ್ಭಧರಿಸಿದ್ದೇ ಗೊತ್ತಾಗಲಿಲ್ಲವೆಂದು ಹೇಳಿಕೆ ಕೊಟ್ಟಿರುವ ಅಧಿಕಾರಿಗಳ ವಿರುದ್ಧ ಮಲೆನಾಡ ಕೇಸರಿ ಪಡೆ ಸಿಡಿದೆದ್ದಿದೆ. ದಸರಾ ಮೆರವಣಿಗೆಗೆ ಕರೆ ತರುವಾಗ ಮೊದಲು ಫಿಟ್ ನೆಸ್ ತಪಾಸಣೆ ನಡೆಸಲಾಗಿದೆಯಾ? ಡೈರಿ ಮೈಂಟನೇನ್ಸ್ ಮಾಡಲಾಗುತ್ತಿದೆಯಾ?

ಆನೆಗಳ ಹಾವಭಾವಗಳನ್ನ ಪಶುವೈದ್ಯರು, ಡಿಆರ್ ಎಫ್ ಒ ಮತ್ತು ಮಾವುತರು ಗಮನಿಸಿದ್ದಾರಾ? ಹೆರಿಗೆ ಆಗುವ ಒಂದು ತಿಂಗಳ ಮೊದಲು ಆನೆಗಳಲ್ಲಾದ ದೈಹಿಕ ಮತ್ತು ಬೌಧಿಕ ಬದಲಾವಣೆಗಳನ್ನ ಕಂಡು ಬಂದಿಲ್ಲವಾ? ಇವೆನ್ನೆಲ್ಲಾ ತನಿಖೆಗೆ ಒಳಪಡಿಸಬೇಕು ಮತ್ತು ನಿರ್ಲಕ್ಷತನದಿಂದ ದಸರಾ ಮೆರವಣಿಗೆಗೆ ಬಂದ ಆನೆಗೆ ಫಿಟ್ ನೆಸ್ ನೀಡಿರುವ ಅಧಿಕಾರಿಗಳನ್ನ ಸೇವೆಯಿಂದ‌ ವಜಾಗೊಳಿಸುವಂತೆ ಆಗ್ರಹಿಸಲಾಗಿದೆ.

ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ?

ಗರ್ಭಧರಿಸಿದ ಹೆಣ್ಣು ಆನೆ ನಿಧಾನವಾಗಿ ಆಲಸ್ಯದಿಂದ ಕೂಡಿರುತ್ತದೆ, ತಡವರಿಸುತ್ತಾ ನಡೆಯುತ್ತಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರುವುದು ಸಂಬಂಧಪಟ್ಟ ವೈದ್ಯಾಧಿಕಾರಿಗಳ ಕರ್ತವ್ಯ ಲೋಪ ಹಾಗೂ ಕಾರ್ಯ ತತ್ಪರತೆ ಬಗ್ಗೆ ಪ್ರಶ್ನೆ ಮೂಡುತ್ತದೆ.

ನಿರ್ಲಕ್ಷಿಸಲಾಗಿದೆ

ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಹಾಗೂ ಸಾರ್ವಜನಿಕ ಮೆರವಣಿಗೆ ಕಳುಹಿಸುವ ಮೊದಲು ಎಲ್ಲಾ ಹೆಣ್ಣು ಆನೆಗಳಗೆ ಗರ್ಭಧಾರಣಾ ಪರೀಕ್ಷೆ ನಡೆಸಿ, ಹಾಗೂ ಇತರೆ ದೈಹಿಕ ಪರೀಕ್ಷೆ ನಡೆಸಿ ಅದರ ಸದೃಢತೆಯ ಮೇರೆಗೆ ಫಿಟ್‌ನೆಸ್‌ ಸರ್ಟಿಫಿಕೇಟ್‌ ದಾಖಲು ಪಡಿಸಿ. ಸದರಿ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ನಿಯಮಾನುಸಾರವಾಗಿ ನಿರ್ಧಾರಗಳನ್ನು ದಸರಾ ಮೆರವಣಿಗೆಗೆ ಬಂದ ಆನೆಗಳ ಪ್ರಕರಣದಲ್ಲಿ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ದರ ಬಗ್ಗೆ ಅನುಮಾನ ಮೂಡುತ್ತದೆ ಎಂದು ಕೇಸರಿ ಪಡೆ ಶಂಕೆ ವ್ಯಕ್ತಪಡಿಸಿದೆ.‌

ಹೆಲ್ತ್ ರಿಜಿಸ್ಟ್ರಾರ್ ಮಾಡಲಾಗಿದೆಯಾ?

ಸದರಿ ಆನೆಗಳನ್ನು ನೋಡಿಕೊಳ್ಳುತ್ತಿರುವ ಪಶುವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರುವವರು ಪ್ರತಿ ಆನೆಯ ಬಗ್ಗೆ Health Register ನಿರ್ವಹಣೆ ಮಾಡಬೇಕಾಗಿದ್ದು, ಮುಂದೆ ಇದನ್ನು ಆರ್.ಎಫ್.ಓ ಹಾಗೂ ಡಿ.ಎಫ್. ಓ ಗಳ ಗಮನಕ್ಕೆ ಪ್ರತಿ 15 ದಿನಗಳಿಗೊಮ್ಮೆ ಹೆಲ್ತ್ ರಿಪೋರ್ಟ್ ತರಬೇಕ್ಕಿದ್ದು. ಮೇಲ್ಕಂಡ ಪ್ರಕರಣ ನೋಡಿದರೆ ಇದರ ಬಗ್ಗೆ ಪ್ರಜೀಸರ್ ಲಾಪ್ಸ್ ಆಗಿರುವ ಬಗ್ಗೆ ಅನುಮಾನ ಮೂಡುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ಆರ್.ಎಫ್.ಓ ಹಾಗೂ ಡಿ.ಎಫ್. ಓ, ಪಶುವೈದ್ಯಾಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲು ಕೋರುತ್ತೇವೆ.

ತನಿಖೆಗೆ ಆಗ್ರಹ

ಫಾರೆಸ್ಟ್ ಇನ್ ಆಫ್ ಎಲಿಫೆಂಟ್ /ಜಮೇಧಾರ್‌ನಾಗಿ ಕೆಲಸ ನಿರ್ವಹಿಸುತ್ತಿರುವವರ ಅಡಿಯಲ್ಲಿ ಬರುವ ಮಾವುತ ಹಾಗೂ ಕೊಥಾಲರಿಂದ ಕಾಲಕಾಲಕ್ಕೆ ಎಲ್ಲಾ ಆನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ, ಆರ್.ಎಫ್.ಓ ಮತ್ತು ವೈದ್ಯಾಧಿಕಾರಿಯವರಿಗೆ ತಿಳಸಬೇಕಾಗಿದ್ದು, ಈ ಪ್ರಕರಣದಲ್ಲಿ ಇವರೆಲ್ಲರ ಮಧ್ಯೆ ಸಮನ್ವಯ ಕೊರತೆ ಕಾರಣದಿಂದ ಈ ಘಟನೆ ನಡೆದಿರುವದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಈ ತುಂಬು ಗರ್ಭಿಣಿಯಾದ ಆನೆಯನ್ನು ತಾಲೀಮಿನ ಹೆಸರಿನಲ್ಲಿ ಬಿಸಿಯಾದ ಕಾದಿರುವ ಡಾಂಬರ್ ರಸ್ತೆಯ ಮೇಲೆ ಕಿಲೋ ಮೀಟರ್ ಗಟ್ಟಲೆ ನಡೆಸಿರುತ್ತಾರೆ. ಹಾಗೂ ಪಟಾಕಿ ಶಬ್ದವನ್ನು ಮಾಡಿರುತ್ತಾರೆ. ಲಾರಿಯಲ್ಲಿ ಬಲವಂತವಾಗಿ ತೆಗೆದುಕೊಂಡು ಬಂದಿರುವುದು ಮತ್ತು ಕೆರೆದುಕೊಂಡು ಹೋಗಿರುವುದು ಅಮಾನೀಯವಾಗಿರುತ್ತದೆ. ಹಾಗಾಗಿ ಇವರುಗಳ ಮೇಲೆ ಕಾಲಮಿತಿಯೊಳಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೇಸರಿ ಪಡೆ ಮನವಿಯಲ್ಲಿ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/1870

Related Articles

Leave a Reply

Your email address will not be published. Required fields are marked *

Back to top button