ಕ್ರೈಂ ನ್ಯೂಸ್

ಒಂದು ನಾಪತ್ತೆ ಮತ್ತೊಂದು ಅಪಹರಣ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಎರಡು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದೆ. ಒಂದು ಮದುವೆ ನಿಶ್ಚಿತಾರ್ಥ ಆದ ನಂತರ ನಾಪತ್ತೆಯಾಗಿದ್ದರೆ, ಮತ್ತೊಂದು ಅಪರಹರಣದ ಪ್ರಕರಣ ದಾಖಲಾಗಿದೆ. ಎರಡೂ ಲವ್ ಪ್ರಕರಣದ ಹಿನ್ನಲೆಯಲ್ಲಿ ಈ ಘಟನೆಗಳು ನಡೆದಿವೆ.

ಕಾಲೇಜಿಗೆ ಹೋಗುವುದಾಗಿ ಮಬೆಬಿಟ್ಟು ಹೋಗಿದ್ದ ಯುವತಿಯೊಬ್ಬಳು ಮನೆಗೆ ವಾಪಾಸ್ ಆಗಿರುವುದಿಲ್ಲ. ಇದಕ್ಕೆ ಕಾರಣ ಯುವತಿಗೆ ಮೊಬೈಲ್ ಸಂಪರ್ಕದಲ್ಲಿದ್ದ ಕಿರಣ್ ಕುಮಾರ್ ಎಂಬ ಯುವಕ ಅಪಹರಿಸಿಕೊಂಡು ಹೋಗಿರುವುದಾಗಿ ಶಂಕಿಸಲಾಗಿದೆ.

ಯುವತಿಯ ಮೊಬೈಲ್ ಸಂಪರ್ಕದಲ್ಲಿದ್ದ ಇದ್ದ ಕಿರಣ್ ಕುಮಾರ್ ಅಪಹರಣ ನಡೆಯುವ ಒಂದು ವಾರದ ಹಿಂದೆ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಯುವತಿಯ ಫೋಟೊ ಹಾಕಿಕೊಂಡಿದ್ದನು. ಇದನ್ನ ಕಂಡ ಯುವತಿಯ ತಂದೆ ಮಗಳ ಫೊಟೊ ಹಾಕಿಕೊಂಡಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಇಷ್ಟೆ ಅಲ್ಲ, ಮುಂದೆ ಏನಾಗುತ್ತದೆ, ನಿಮಗೆಲ್ಲ ಏನು ಮಾಡುತ್ತೇನೆ ನೋಡುತ್ತಾ ಇರಿ ಎಂದು ಜಗಳ ಮಾಡಿ ಬೆದರಿಕೆವೊಡ್ಡಿದ್ದನು. ಈತನಿಂದಲೇ ಮಗಳ ಅಪಹರಣ ನಡೆದಿರಬಹುದು ಎಂದು ಶಂಕಿಸಿ  ಯುವತಿಯ ತಂದೆ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ,

ಈತನನ್ನು ಕರೆಯಿಸಿ, ವಿಚಾರಣೆ ನಡೆಸಿ  ಮಗಳನ್ನು ನಮಗೆ ಒಪ್ಪಿಸುವಂತೆ ಕೋರಿದ್ದಾರೆ.

ನಿಶ್ಚಿತಾರ್ಥ ನಡೆದು ಎರು ತಿಂಗಳ ತರ ಯುವತಿ ನಾಪತ್ತೆ

ಬಟ್ಟೆ ಹೊಲಿಸಲು ಮನೆಯ ಬಳಿ ಇರುವ ಲೇಡಿಸ್ ಟೈಲರ್ ಅಂಗಡಿಗೆ ಹೋಗಿ ಬರುತ್ತೇನೆಂದು ಬಟ್ಟೆ ತೆಗೆದುಕೊಂಡು ಹೋಗಿದ್ದ ಯುವತಿಯೊಬ್ಬಳು ಮನೆಗೆ ವಾಪಾಸ್ ಆಗದ ಹಿನ್ನಲೆಯಲ್ಲಿ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗಿವೆ.

ಯುವತಿಗೆ ಇತ್ತಿಚಿಗೆ ಮದುವೆ ನಿಶ್ಚಯವಾಗಿತ್ತು. ಎಂಗೆಜ್ ಮೆಂಟ್ ಆದ ನಂತರ ಇಷ್ಟ ಇದೆ ಅಥವಾ ಇಷ್ಟವಿಲ್ಲ ಎಂಬುದರ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿರಲಿಲ್ಲ.‌ ಆದರೆ ಕಳೆದ ಎರಡು ವರ್ಷಗಳ ಹಿಂದೆ ಬಾಲು ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿರುವ ಬಗ್ಗೆ ಪೋಷಕರಿಗೆ ಮಾತಿ ತಿಳಿದಿತ್ತು. ಎಂಗೆಜ್ ಮೆಂಟ್ ಆಗಿ ಎರಡು ತಿಂಗಳ ನಂತರ ಈ ಘಟನೆ ನಡೆದಿರುವುದು ತಿಳಿದು ಬಂದಿದೆ.

ಅಕ್ಕ ಪಕ್ಕದವರಲ್ಲಿ ವಿಚಾರಿಸಿದ ಪೋಷಕರಿಗೆ ಬಟ್ಟೆ ಹೊಲಿಸಲು ಹೋದವಳು ಬಿಳಿ ಬಣ್ಣದ ಪಲ್ಸರ್ KA 51 J 4257 ಬೈಕ್ ನಲ್ಲಿ ಹತ್ತಿ ಹೋಗಿರುತ್ತಾಳೆ ಎಂದು ತಿಳಿದು ಬಂದಿದೆ. ಯುವತಿ ಮತ್ತು ಯುವಕನ ಇಬ್ಬರ ಮೊಬೈಲ್  ಅವನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆದ್ದರಿಂದ ಕಾಣೆಯಾಗಿರುವ ಮಗಳನ್ನ ಹುಡುಕಿಕೊಡು ಎಂದು ದೂರು ದಾಖಲಿಸಲಾಗಿದೆ.

ಇದನ್ನೂ ಓದಿ-https://suddilive.in/archives/1807

Related Articles

Leave a Reply

Your email address will not be published. Required fields are marked *

Back to top button