ಕ್ರೈಂ ನ್ಯೂಸ್

ಗೋಹಂತಕರನ್ನ ಬಂಧಿಸುವಂತೆ ಹಿಂಜಾವೇ ಪ್ರತಿಭಟನೆ

ಸುದ್ದಿಲೈವ್/ಭದ್ರಾವತಿ

ಗೋಹಂತಕರನ್ನ ಕೂಡಲೇ ಬಂಧಿಸುವಂತೆ ಹಿಂಜಾವೇ ಭದ್ರಾವತಿಯ ಡಿವೈಎಸ್ಪಿ ಕಚೇರಿಯ ಮುಂದೆ ನಿನ್ನೆ ರಾತ್ರಿ ದಿಡೀರ್ ಪ್ರತಿಭಟನೆ ನಡೆಸಿದೆ.

ಭದ್ರಾವತಿ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಭದ್ರಾವತಿ ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಗೋ ಹಂತಕರನ್ನು ಬಂಧಿಸಬೇಕು ಮತ್ತು  ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟಿಸಲಾಯಿತು.

ಭದ್ರಾ ಹೊಳೆಯ ದಡದಲ್ಲಿ  ಟನ್ ಗಳಷ್ಟು ಗೋಮೂಳೆ ಮತ್ತು ಅಸ್ತಿಗಳು ದೊರೆತಿದೆ.‌  ಗೋಮಾಂಸದ ಕುರುಹುಗಳು ಸಿಕ್ಕಿದರು ಇಲ್ಲಿಯವರೆಗೂ ಗೋ ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿಲ್ಲ ಭಾನುವಾರ ರಾತ್ರಿಯ ಒಳಗೆ ಬಂಧಿಸಬೇಕು ಬಂಧಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜ ರಸ್ತೆ ಇಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ನಡೆಸುತ್ತದೆ ಎಂದು ಎಚ್ಚರಿಸಿದೆ.‌

ಪ್ರತಿಭಟನೆ ದಿನಾಂಕವನ್ನು ಶೀ‌ಘ್ರದಲ್ಲಿಯೇ ಪತ್ರಿಕಾ ಹೇಳಿಕೆ ಮೂಲಕ ತಿಳಿಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ್ ದೇವರಾಜ್ ಅರಳಿಹಳ್ಳಿ ತಿಳಿಸಿದ್ದಾರೆ. ಹಿಂದೂ ಸಂಘಟನೆ ಪ್ರಮುಖರಾದ ಉಮೇಶ್ ಶಿವಕುಮಾರ್ ಮನು ಕೇಶವ್ ಧನುಷ್ ಕಿರಣ ಶ್ರೀಕಾಂತ ಕೃಷ್ಣ ಅರುಣ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/9075

Related Articles

Leave a Reply

Your email address will not be published. Required fields are marked *

Back to top button