ಹಬ್ಬಕ್ಕೆ ಖರೀದಿ ಜೋರು

ಸುದ್ದಿಲೈವ್/ಶಿವಮೊಗ್ಗ

ದಸರಾ ಹಬ್ಬಕ್ಕೆ ಎಲ್ಲವೂ ದುಬಾರಿಯಾಗಿವೆ. ದುಬಾರಿಯ ನಡುವೆಯೂ ಖರೀದಿ ಜೋರಾಗಿದೆ. ಮಹಿಳೆಯರಿಂದ ಪೂಜಾ ಸಾಮಾಗ್ರಿಗಳಾದ ಹಣ್ಣು, ಹೂವು ಬಾಳೆಕಂದು ಖರೀದಿ ಜೋರಾಗಿದೆ.
ನಾಳೆ ಆಯುಧ ಪೂಜೆಯ ನಿಮಿತ್ತ ವಾಹನಗಳ ಪೂಜೆವಿರುವುದರಿಂದ ಹೂವು ಹಣ್ಣು, ಬಾಳೆಕಂದು, ಕುಂಬಳಕಾಯಿ ಖರೀದಿಗೆ ಜನ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಜಮಾವಣೆಯಾಗಿದ್ದಾರೆ. ಈ ನಿಟಿನಲ್ಲಿ ಹೂವುಗಳ ಮತ್ತು ಹಣ್ಣುಗಳ ದರ ಹೆಚ್ಚಳವಾಗಿದೆ.
ಶಿವಮೊಗ್ಗದ ನಗರದ ಹೂವಿನ ಮಾರುಕಟ್ಟೆಯಲ್ಲಿ ಜನ ಂಗ
ಉಳಿ ಉಂಟಾಗಿದೆ. ನಾಳೆ ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆ ಫುಲ್ ರಶ್ ಆಗಿದೆ. ಸೇವಂತಿಗೆ ಮಾರಿಗೆ ನೂರು ಮಲ್ಲಿಗೆ ಹೂವು ಮಾರಿಗೆ ನೂರು, ಗಣಪತಿ ಹಬ್ಬಕ್ಕೆ ಈ ಸೇವಂತಿಗೆ ಕಡಿಮೆ ಇತ್ತು. ಆದರೆ ದಸರಾಕ್ಕೆ ಹೆಚ್ಚಾಗಿದೆ. ಚೆಂಡು ಹೂವುಸಹ ಹಾರಕ್ಕೆ 50 ರೂಪಾಯಿ ನಿಗದಿಯಾಗಿದೆ ಸುಗಂಧರಾಜ200 ರಿಂದ 250 ರೂ ಆಗಿದೆ.
ಕುಂಬಳ ಸಣ್ಣ ಸೈಜಿನ ಕಾಯಿಗೆ 50 ಸ್ವಲ್ಪ ದೊಡ್ಡ ಕುಂಬಳಕ್ಕೆ 100 ರೂ. ನಿಗದಿಯಾಗಿದೆ. 20 ರೂಗೆ ಜೋಡಿ ಬಾಳೆಕಂದು ಮಾರಾಟ ಮಾಡಲಾಗುತ್ತಿದೆ. ವಾಹನಗಳಾದ ಖಾಸಗಿ ಬಸ್ ಗಳು ಆಟೋ, ಗಳು ಹೂವಿನ ಅಲಂಕಾರದಿಂದ ಜಗಮಗಿಸಲಿದೆ.
ಇದನ್ನೂ ಓದಿ-https://suddilive.in/archives/1686
